ಬೆಟ್ಟದಪುರ : ನಗರ ಪ್ರದೇಶದಲ್ಲಿ ಸಿಗುವ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಭಾಗದಲ್ಲಿ ಸಿಗುವಂತ ಕೆಲಸವನ್ನು ನನ್ನ ಅಧಿಕಾರ ಅವಧಿಯಲ್ಲಿ ಪ್ರಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಸಮೀಪದ ರಾಜನಬಿಳುಗುಲಿ ಗ್ರಾಮದಲ್ಲಿ ಭಾನುವಾರ ಸುಮಾರು ₹ 1.11 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು ಎಲ್ಲ ಜನಸಾಮಾನ್ಯರಿಗೂ ಸರ್ಕಾರದ ಸೌಲಭ್ಯಗಳು ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ನಾನು ಗ್ರಾಮಾಂತರ ಭಾಗದಲ್ಲಿ ಕೆಲಸ ಮಾಡಿದ್ದೇನೆ, ಮುಂಬರುವ ದಿನದಲ್ಲಿ ಮತ್ತೊಂದು ಅವಕಾಶ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇನೆ ಎಂದರು.
ಇನ್ನು ಮುಂದೆ ನಿಮ್ಮ ಬಳಿ ಮತಯಾಚಿಸಲು ಬರುತ್ತೇನೆ, ನಾನು ಮಾಡಿರುವ ಕೆಲಸ ನಿಮಗೆ ತೃಪ್ತಿ ತಂದಿದ್ದರೆ ನನಗೊಂದು ಮತ ನೀಡಿ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಮಹಾದೇವ, ಉಪಾಧ್ಯಕ್ಷ ಶಫಿ ಅಹಮದ್, ಸದಸ್ಯರಾದ ಸಂತೋಷ್, ಸುರೇಶ್, ಮುಖಂಡರಾದ ಆರ್ ಟಿ ಮಹದೇವ್ ಪ್ರವೀಣ್ ಕುಮಾರ್ ಗೋವಿಂದೇಗೌಡ , ಪ್ರಸನ್ನ, ಅಪ್ಪಾಣಿಗೌಡ, ಅತ್ತರ್ ಮತಿನ್ , ವಿದ್ಯಾಶಂಕರ್, ರವಿ ಗೌಡ ಇದ್ದರು.
ಬೆಟ್ಟದ್ಪುರ ಸಮೀಪದ ರಾಜನ ಬಿಲ್ಗುಲಿ ಗ್ರಾಮದಲ್ಲಿ ಭಾನುವಾರ ಸುಮಾರು 1.11 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ ಮಹದೇವ್ ಭೂಮಿ ಪೂಜೆ ನೆರವೇರಿಸಿದರು ಆರ್.ಟಿ ಮಹದೇವ್, ಸಂತೋಷ್ ,ಸುರೇಶ್, ವಿದ್ಯಾಶಂಕರ್ ಇದ್ದರು.