ಬೆಟ್ಟದಪುರ : ಜನರ ಸೇವೆಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿದ್ದೇನೆ, ನಿಮಗಾಗಿ ಕೆಲಸ ಮಾಡುವ ನನಗೆ ತಮ್ಮ ಅಮೂಲ್ಯವಾದ ಮತ ನೀಡಬೇಕೆಂದು ಶಾಸಕ ಕೆ.ಮಹದೇವ್ ಹೇಳಿದರು.
ಸಮೀಪದ ಮೇಲೂರು ಗ್ರಾಮದಿಂದ ಸಣ್ಣೇಗೌಡನ ಕೊಪ್ಪಲು ಗ್ರಾಮದವರೆಗೆ ಸುಮಾರು ₹56.36 ಲಕ್ಷ ರೂಗಳ ವೆಚ್ಚದಲ್ಲಿ ಭಾನುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ಗಡಿಯಂಚಿನ ಭಾಗಗಳಲ್ಲಿಯೂ ರಸ್ತೆಗಳು ಸಂಪೂರ್ಣ ಅಭಿವೃದ್ಧಿ ಗೊಂಡಿವೆ, ಮತದಾರರಿಂದ ಮತ ಪಡೆದು,ಕೊಟ್ಟ ಭರವಸೆಯನ್ನು ನಾನು ಈಡೇರಿಸಿದ್ದೇನೆ , ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ನನಗೆ ಹೆಚ್ಚು ಮತ ನೀಡುವ ಮೂಲಕ ಮತ್ತೊಮ್ಮೆ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಕಿತ್ತೂರು ದಿನೇಶ್, ಮುಖಂಡರಾದ ಕೆ.ಪಿ ವೆಂಕಟೇಶ್, ನಿರಂಜನ್, ಪುಟ್ಟರಾಜು,ಪುಟ್ಟೇಗೌಡ, ಪುರುಷೋತ್ತಮ್, ಶಿವಣ್ಣ, ಮಂಜು ಇದ್ದರು.
ಬೆಟ್ಟದಪುರ ಸಮೀಪದ ಮೇಲೂರು ಗ್ರಾಮದಿಂದ ಸಣ್ಣೇಗೌಡನ ಕೊಪ್ಪಲು ಗ್ರಾಮದವರೆಗೆ ಸುಮಾರು ₹ 56.36 ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿ ಪೂಜೆ ನೆರವೇರಿಸಿದರು.