ಪಿರಿಯಾಪಟ್ಟಣ : ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುವಂತೆ ಕಾರ್ಯಕರ್ತರಿಗೆ ಶಾಸಕ ಕೆ ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ( ಹನುಮಂತಪುರ ) ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ನಾಲ್ಕುವರೆ ವರ್ಷಗಳಿಂದ ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಿ, ಮತದಾರರ ಮನ ಪರಿವರ್ತನೆ ಮಾಡಿ ಮತ ಚಲಾಯಿಸುವಂತೆ ತಿಳಿಸಿದರು.
ಮುಂದಿನ ಐದು ವರ್ಷ ಅವಧಿಗೆ ಆಯ್ಕೆಯಾಗಿದ್ದಲ್ಲಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಯನ್ನು ಮಾಡುತ್ತೇನೆ. ಆದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಕೋರಿದರು.
ಪಕ್ಷ ಸೇರ್ಪಡೆ : ಸೂಳೆಕೋಟೆ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಅನ್ಯ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಐಲಾಪುರ ರಾಮು ಕೆಲವು ದಿನಗಳ ಹಿಂದೆ ಸೂಳೆಕೋಟೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಶಾಸಕರು ಸೂಳೆಕೋಟೆ ಗ್ರಾಮವನ್ನು ಜೆಡಿಎಸ್ ಮುಕ್ತ ಗ್ರಾಮವನ್ನಾಗಿ ಮಾಡುತ್ತೇನೆ ಎಂದಿದ್ದಾರೆ. ಈ ದಿನದ ಕಾರ್ಯಕ್ರಮವನ್ನು ಅವರು ನೋಡಿದರೆ ಸೂಳೆಕೋಟೆ ಗ್ರಾಮ ಕಾಂಗ್ರೆಸ್ ಮುಕ್ತವೋ ಅಥವಾ ಜೆಡಿಎಸ್ ಮುಕ್ತವೋ ತಿಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ದೊಡ್ಡ ಕಮರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರೇಗೌಡ, ಸದಸ್ಯರಾದ ಸತೀಶ್ ರಾಮ್ ಎಸ್, ಹರೀಶ್, ಇಂದ್ರೇಶ್,ಮುಖಂಡರಾದ ಶಿವಣ್ಣ, ಶಿವಪ್ಪ, ಹೇಮಂತ್ ಕುಮಾರ್,ಅಣ್ಣಯ್ಯ, ಅಶೋಕ್, ಯೋಗೇಶ್, ಶ್ರೀನಿವಾಸ್, ವೆಂಕಟಚಲ, ರವಿ, ಮಧು, ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.