ಪೌರ ಕಾರ್ಮಿಕರ ಏಳಿಗೆಗೆ ನಾನು ಸದಾ ಸಿದ್ದನಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಬಗೆಹರಿಸಲು ನೀವು ನನಗೆ ಶಕ್ತಿ ತುಂಬಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.

ಪಿರಿಯಾಪಟ್ಟಣ : ಪೌರ ಕಾರ್ಮಿಕರ ಏಳಿಗೆಗೆ ನಾನು ಸದಾ ಸಿದ್ದನಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಬಗೆಹರಿಸಲು ನೀವು ನನಗೆ ಶಕ್ತಿ ತುಂಬಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
 ಪಟ್ಟಣದ ಪುರಸಭೆಯಲ್ಲಿ ಖಾಯಂಮಾತಿಗೊಂಡ ಪೌರ ಕಾರ್ಮಿಕರಿಗೆ ಖಾಯಂಮಾತೀಯ ಸರ್ಕಾರದ ಆದೇಶ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
 ಸಮಾಜದಲ್ಲಿ ಸ್ವಚ್ಛ ಪರಿಸರ ವಾತಾವರಣ ನಿರ್ಮಾಣ ಮಾಡುವ ಪೌರಕಾರ್ಮಿಕರ ಕಾರ್ಯವು ಶ್ಲಾಘನೀಯವಾದದ್ದು, ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ರವರು ಕೂಡ ಪೌರಕಾರ್ಮಿಕರ ಪಾದ ತೊಳೆದು ಪೌರಕಾರ್ಮಿಕರನ್ನು ಗೌರವಿಸುವ ಕೆಲಸ ಮಾಡಿದ್ದಾರೆ. ನಾನು ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ದಿನದಿಂದಲೂ ಕೂಡ ಪೌರಕಾರ್ಮಿಕ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದೇನೆ. ಈ ಸಮುದಾಯಗಳಿಗೆ ನಿವೇಶನವನ್ನು ಅಂದೆ ನೀಡಿ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದೆ. ತಾವುಗಳು ಇದನ್ನು ಎಂದಿಗೂ ಮರೆಯಬಾರದು. ಇಲಾಖ ಅಧಿಕಾರಿಗಳು ಕೂಡ ಇವರುಗಳ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಹೊಂದಬೇಕು ಮತ್ತು ಪೌರಕಾರ್ಮಿಕರ ಜೀವನದ ಸ್ಥಿತಿಗತಿಯ ಆರ್ಥಿಕ ಸದೃಢತೆಗೆ ಸಹಕರಿಸಬೇಕು ಎಂದು ಸೂಚಿಸಿದರು.
 ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯ ಎಚ್.ಕೆ.ಮಹೇಶ್ ಮಾತನಾಡಿ ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಇತರರಿಗೆ ಮಾದರಿ ಯಾಗಿರುವ ಪೌರಕಾರ್ಮಿಕರ ಜೀವನ ಇಂದಿಗೂ ಕೂಡ ದುಸ್ತರವಾಗಿದೆ.ಇವರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕು.ಆಡಳಿತ ನಡೆಸಿರುವ ಸರ್ಕಾರಗಳು ತಮಗೆ ಸಾಧ್ಯವಾದಷ್ಟು ಪೌರಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು ಸಹ ಖಾಯಂಮಾತಿ ಮಾಡುವಲ್ಲಿ ವಿಫಲವಾಗಿದ್ದವು. ಕಾರ್ಮಿಕರ ಹೋರಾಟದ ಫಲವಾಗಿ ಪ್ರಸ್ತುತ ಖಾಯಂಮಾತಿ ನೀಡಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಸರ್ಕಾರ ಹಂತ ಹಂತವಾಗಿ ಉಳಿದ ಪೌರಕಾರ್ಮಿಕರನ್ನು ಖಾಯಂಮಾತಿ ಮಾಡುತ್ತಿದ್ದು ಯಾರು ಕೂಡ ದೃತಿಗೆಡುವ ಅವಶ್ಯಕತೆ ಇಲ್ಲ ಎಂದರು.
 ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕೆ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ. ಕೃಷ್ಣ, ಸದಸ್ಯ ಮಂಜುನಾಥ ಸಿಂಗ್ ಮಾತನಾಡಿದರು.
 ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಿನೋದ್, ನಿರಂಜನ್, ಅಧಿಕಾರಿ ಮುತ್ತಪ್ಪ, ಆರೋಗ್ಯ ನಿರೀಕ್ಷಕ ಮೋಹನ್ ಕುಮಾರ್, ಪ್ರದೀಪ್, ಕ ಸಾ ಪ ಅಧ್ಯಕ್ಷ ನವೀನ್ ಕುಮಾರ್,ಅಭಿಯಂತರರಾದ ಮಲ್ಲಿಕಾರ್ಜುನ್, ವನಿತಾ,ಚಂದ್ರಶೇಖರಯ್ಯ, ಅಣ್ಣಯ್ಯ ಶೆಟ್ಟಿ, ಪ್ರೀತಿ ಅರಸ್, ಸುನಿತಾ, ಕುಮಾರ್,ತಾರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top