ಪಿರಿಯಾಪಟ್ಟಣ: ನಮ್ಮ ಪಕ್ಷ ಹಾಗೂ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುವುದರಿಂದ ಯಾವ ವ್ಯಕ್ತಿಯ ಬೆಲೆ ಹೆಚ್ಚಾಗುವುದಿಲ್ಲ ಕಾಲವೇ ಅವರಿಗೆ ತಕ್ಕ ಉತ್ತರ ನೀಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಕೆ.ಮಹದೇವ್ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ನಾವೇನು ಕಾಂಗ್ರೆಸ್ಸಿನವರ ಮನೆ ಬಾಗಿಲಿಗೆ ಹೋಗಿರಲಿಲ್ಲ ಅವರೇ ನಮ್ಮ ಬಳಿ ಬಂದರು ಜನತೆಗೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲು ಮುಂದಾದಾಗ ನಮ್ಮ ಅವಧಿಯಲ್ಲಿನ ಯೋಜನೆಗಳನ್ನು ಮುಂದುವರಿಸಿ ನಂತರ ಸಾಲ ಮನ್ನಾ ಮಾಡಿ ಎಂದರು ತದನಂತರ ಕುಮಾರಸ್ವಾಮಿಯವರ ಜನಪ್ರಿಯತೆ ಸಹಿಸದೆ ಸರ್ಕಾರ ಪತನಕ್ಕೆ ಅವರೇ ಕಾರಣವಾದರು.
ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚಾಯತಿಗೆ 30 ಬೆಡ್ ಆಸ್ಪತ್ರೆ 3 ಜನ ಡಾಕ್ಟರ್, ವಿದ್ಯಾಭ್ಯಾಸಕ್ಕೆ ಸಹಾಯ, ಪಿಂಚಣಿ ವೇತನ ಹೆಚ್ಚಳ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಲು ಮುಂದಾಗಿದ್ದಾರೆ ಕೊಟ್ಟ ಮಾತನ್ನು ಉಳಿಸುವ ಶಕ್ತಿ ಕುಮಾರಸ್ವಾಮಿ ಅವರಲ್ಲಿದೆ, ನನ್ನ ಅಧಿಕಾರವಧಿಯಲ್ಲಿ ಮುಂಸ್ಲಿ ನವರಿಗೆ ರಿಸರ್ವೇಶನ್ ನೀಡಿ ಈದ್ಗಾ ಮೈದಾನ ವಿವಾದ ಬಗೆಹರಿಸಿದ್ದೆನೆ, ರಾಷ್ಟ್ರೀಯ ಪಕ್ಷಗಳಿಂದ ಜನರ ಅಭಿವೃದ್ಧಿ ಕುಂಠಿತವಾಗಿದ್ದು ನಿಮ್ಮೆಲ್ಲರ ಎಳಿಗೆಗಾಗಿ ಪ್ರಾದೇಶಿಕ ಪಕ್ಷ ಉಳಿಸಿ ಬೆಳೆಸುವಂತೆ ಕೋರಿದರು.
ಶಾಸಕ ಕೆ.ಮಹದೇವ್ ಮಾತನಾಡಿ ಪ್ರಾದೇಶಿಕ ಆರೋಗ್ಯದ ಬಗ್ಗೆ ಲೆಕ್ಕಿಸದೆ ಪಕ್ಷದ ಉಳಿವು ಹಾಗೂ ನನ್ನ ಮತ್ತೊಂದು ಗೆಲುವಿಗಾಗಿ ಮಾಜಿ ಪ್ರಧಾನಿಗಳು ನಮ್ಮ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವುದು ಪಕ್ಷ ಸಂಘಟನೆಗೆ ಮತ್ತಷ್ಟು ಬಲತಂದಿದೆ, ಒಕ್ಕಲಿಗ ಮತದಾರರು ಈ ಬಾರಿ ಜೆಡಿಎಸ್ ಬಿಟ್ಟು ಹೆಚ್ಚಾಗಿ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ ಎಂದು ವಿರೋಧಿಗಳು ಅಪಪ್ರಚಾರದಲ್ಲಿ ತೊಡಗಿದ್ದು ಇದಕ್ಕೆ ಯಾರು ಕಿವಿ ಕೊಡಬಾರದು, ರಾಜ್ಯದ ಸರ್ವ ಜನಾಂಗದ ಅಭಿವೃದ್ಧಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ, ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಈ ಹಿಂದಿನ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿ ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ನಿರ್ದೇಶಕ ಎಚ್.ಡಿ ರಾಜೇಂದ್ರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ನಿರ್ದೇಶಕಿ ಸುನಿತಾ ಮಂಜುನಾಥ್, ಮಹಿಳಾ ಘಟಕ ಅಧ್ಯಕ್ಷ ಪ್ರೀತಿ ಅರಸ್ ಮುಖಂಡರಾದ ಕೆ.ಎಸ್ ಮಂಜುನಾಥ್, ಚಂದ್ರೇಶ್, ಎಸ್.ರಾಮು, ಗಗನ್, ವಕೀಲ ಗೋವಿಂದೇಗೌಡ ಹಾಗೂ ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.