ಪಿರಿಯಾಪಟ್ಟಣ: ವಿರೋಧ ಪಕ್ಷಗಳ ಮುಖಂಡರ ಸುಳ್ಳು ಆಶ್ವಾಸನೆಗಳನ್ನು ಧಿಕ್ಕರಿಸಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಮತದಾರರು ಸಹಕರಿಸುವಂತೆ ಶಾಸಕ ಕೆ.ಮಹದೇವ್ ಮನವಿ ಮಾಡಿದರು.
ತಾಲೂಕಿನ ವಿವಿದೆಡೆ ಚುನಾವಣಾ ಪ್ರಚಾರ ಕೈಗೊಂಡು ದೊರೆಕೆರೆ ಗ್ರಾಮದಲ್ಲಿ ಅವರು ಮಾತನಾಡಿದರು, ರೈತರು ಕಾರ್ಮಿಕರು ಮಧ್ಯಮ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಜೆಡಿಎಸ್ ಪಕ್ಷ ವತಿಯಿಂದ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದು ಅದನ್ನು ಜಾರಿಗೊಳಿಸಲು ಜೆಡಿಎಸ್ ಪಕ್ಷಕ್ಕೆ ಸ್ವತಂತ್ರ ಅಧಿಕಾರ ನೀಡಬೇಕು, ತಾಲ್ಲೂಕಿನಲ್ಲಿ ಕಳೆದ ಐದು ವರ್ಷದಲ್ಲಿ ಶಾಂತಿಯುತ ರಾಜಕಾರಣ ಮಾಡಿ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಮತ್ತೊಂದು ಅವಕಾಶ ಮಾಡಿಕೊಟ್ಟರೆ ಪಿರಿಯಾಪಟ್ಟಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ನನಗೆ ಅಧಿಕಾರದ ಆಸೆ ಇಲ್ಲ ತಾಲ್ಲೂಕಿನಲ್ಲಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದಲೇ ಮತ್ತೊಂದು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಇದು ನನ್ನ ಕೊನೆಯ ಚುನಾವಣೆಯಾಗಿದ್ದು ನನಗೆ ಮತ ಹಾಕುವ ಮೂಲಕ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ ಅವರು ಮಾತನಾಡಿ ಜೆಡಿಎಸ್ ಸರ್ಕಾರ ಇಲ್ಲದಿದ್ದರೂ ಸಂಬಂಧಪಟ್ಟ ಮಂತ್ರಿಗಳು ಹಾಗೂ ಸಚಿವರ ಮನವೊಲಿಸಿ ತಾಲೂಕಿಗೆ ಹಿಂದೆಂದೂ ಕಾಣದ ಅಭಿವೃದ್ಧಿ ಮಾಡಿದ್ದಾರೆ ಆದ್ದರಿಂದ ಈ ಬಾರಿ ನಮ್ಮದೇ ಸರ್ಕಾರ ರಚನೆಯಾಗಲಿದ್ದು ಇನ್ನೂ ಹೆಚ್ಚು ಅಭಿವೃದ್ಧಿಯಿಂದ ಕೆ. ಮಹದೇವ್ ರವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಈ ವೇಳೆ ಬಸಲಾಪುರ ಚಿಕ್ಕಬೇಲಾಳು ಮಾಕನಹಳ್ಳಿಪಾಳ್ಯ ದೊಡ್ಡಬೇಲಾಳು ಅರೇನಹಳ್ಳಿ ನೀಲಂಗಾಲ ನಂದಿಪುರ ಶೆಟ್ಟಹಳ್ಳಿ ವಿ.ಜಿ ಕೊಪ್ಪಲು ರಾಮನಾಥತುಂಗ ಕಿರನಲ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಯಿತು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಆರ್.ಎಲ್ ಮಣಿ, ಯುವ ಘಟಕ ಮಹಿಳ ಘಟಕ ಅಧ್ಯಕ್ಷೆ ಪ್ರೀತಿ ಅರಸ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ವಕೀಲರಾದ ಗೋವಿಂದೇಗೌಡ, ಜೆ.ಎಸ್ ನಾಗರಾಜು, ಮುಖಂಡರಾದ ರಾಜೇಶ್ ಅರಸ್, ನಾಗರಾಜು, ಶಿವಣ್ಣ, ರಮೇಶ್, ಗೋವಿಂದೇಗೌಡ, ನದೀಮ್, ಅಬ್ಬಾಸ್, ಫಾರೂಕ್ ಪಾಷಾ, ಫಯಾಜ್ ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.