ಪಿರಿಯಾಪಟ್ಟಣ: ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ ಇದನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿ ಬೆಂಬಲಿಸಿ ಮತ್ತೊಮ್ಮೆ ತಮ್ಮಗಳ ಸೇವೆಗೆ ಅವಕಾಶ ಮಾಡಿಕೊಡುವಂತೆ ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ದೊಡ್ಡ ಕೆರೆ ದುರಸ್ತಿಗೆ 61 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಈ ಹಿಂದೆ ತಾಲೂಕಿನಲ್ಲಿ ಶಾಸಕರಾಗಿ ಅಧಿಕಾರ ನಡೆಸಿದವರು ಸಾರ್ವಜನಿಕ ಸಮಸ್ಯೆಗಳಿಗೆ ನಿರ್ಲಕ್ಷ ವಹಿಸಿದ್ದರಿಂದ ಅಭಿವೃದ್ಧಿ ಕುಂಠಿತವಾಗಿದೆ, ಕಳೆದ ಎರಡು ಚುನಾವಣೆಯಲ್ಲಿ ಪರಾಭವಗೊಂಡರು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇ ಮೊದಲ ಬಾರಿಗೆ ಶಾಸಕನಾದ ಬಳಿಕ ತಾಲೂಕಿನ ವಿವಿದೆಡೆಯಿಂದ ಸಾರ್ವಜನಿಕರು ನನ್ನ ನಿವಾಸಕ್ಕೆ ಆಗಮಿಸಿ ನೀಡುವ ಹಾಗೂ ವಿವಿದೆಡೆ ಭೇಟಿ ನೀಡಿದ ಸಂದರ್ಭ ನೀಡುವ ಅರ್ಜಿಯನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಹಂತ ಹಂತವಾಗಿ ಬಗೆಹರಿಸಿದ ತೃಪ್ತಿಯಿದೆ, ಬೆಕ್ಕರೆ ಗ್ರಾಮದ ದೊಡ್ಡಕೆರೆ ಏರಿ ಒಡೆದು ನೀರು ಪೋಲಾಗಿ ಅಪಾರ ಹಾನಿಯಾದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನ ಸೆಳೆದು ಏರಿ ದುರಸ್ತಿಗೆ ಅನುದಾರ ಮಂಜೂರು ಮಾಡಿಸಿದ್ದೇನೆ ಅಂತೆಯೇ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನೂತನ ಶಾಲಾ ಕೊಠಡಿಗಳು ಪಶು ವೈದ್ಯಕೀಯ ಆಸ್ಪತ್ರೆ ನವೀಕರಣ ಗ್ರಾಮಪರಿಮಿತಿ ಸೇರಿದಂತೆ ಜಮೀನಿಗೆ ತೆರಳುವ ರಸ್ತೆ ನಿರ್ಮಾಣ ಸೇರಿ ಇತರೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮತ್ತಷ್ಟು ಹೆಚ್ಚಿನ ಅಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿಯೂ ಜನತೆ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಜಿ.ಪಂ ಎಇಇ ಮಲ್ಲಿಕಾರ್ಜುನ್,
ಎಇ ಚಿತ್ರಶ್ರೀ, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಗ್ರಾ.ಪಂ ಸದಸ್ಯರಾದ ಬಿ.ಎಸ್ ಜಗದೀಶ್, ಜ್ಯೋತಿ ರವಿಕುಮಾರ್, ಮುಖಂಡರಾದ ಬಿ.ವಿ ಗಿರೀಶ್, ನಾಗೇಂದ್ರ, ಚಂದ್ರಶೇಖರ್ ಆಚಾರ್, ನಂಜಪ್ಪ, ಸತೀಶ್, ಜಗದೀಶ್, ತಮ್ಮಯ್ಯ, ಲೋಕೇಶ್, ಚಂದ್ರಶೇಖರ್ ಸ್ಥಳೀಯ ಜನಪ್ರತಿನಿಧಿಗಳು ಜೆಡಿಎಸ್ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಇದ್ದರು.