ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಕೆ.ಮಹದೇವ್ ಚುನಾವಣಾ ಪ್ರಚಾರ ನಡೆಸಿದರು

ಪಿರಿಯಾಪಟ್ಟಣ: ಶಾಸಕನಾದ ಬಳಿಕ ತಮ್ಮ ಗ್ರಾಮಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನಗಂಡು ಚುನಾವಣೆಯಲ್ಲಿ ಮತನೀಡಿ ಮತ್ತೊಮ್ಮೆ ಮರುಆಯ್ಕೆ ಮಾಡುವಂತೆ ಜೆಡಿಎಸ್ ಅಭ್ಯರ್ಥಿ ಶಾಸಕ ಕೆ.ಮಹದೇವ್ ಮನವಿ ಮಾಡಿದರು. ತಾಲೂಕಿನ ವಿವಿದೆಡೆ ಪ್ರಚಾರ ಕೈಗೊಂಡು ಬೆಕ್ಕರೆ ಗ್ರಾಮದಲ್ಲಿ ಅವರು ಮಾತನಾಡಿದರು, ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ನನ್ನ ಬಳಿ ಅಧಿಕಾರವಿಲ್ಲದ ಸಂದರ್ಭ ತಮ್ಮ ಗ್ರಾಮಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ನೀಡದಿದ್ದರೂ ಹೆಚ್ಚು ಮತ ನೀಡಿ ಆಶೀರ್ವದಿಸಿದ್ದರು ಅತ್ಯಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದೆ ಬಳಿಕ ಮೂರನೇ ಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕನಾದ ಬಳಿಕ ತಮ್ಮಗಳ ಋಣ ತೀರಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಗ್ರಾಮಗಳ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಿದ್ದೆನೆ ನನ್ನ ಕೆಲಸದ ಇಚ್ಛಾಶಕ್ತಿ ಮನಗಂಡು ಕಳೆದೆರಡು ಬಾರಿಗಿಂತ ಈ ಬಾರಿ ಮತ್ತಷ್ಟು ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಿ ತಾಲೂಕಿನ ಸರ್ವಾಗಿಣ ಅಭಿವೃದ್ಧಿಗೆ ಶ್ರಮಿಸಲು ಸಹಕರಿಸಬೇಕು ಎಂದರು. 

ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ರಾಜ್ಯದ ಹಿತ ಕಾಯುವ ದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ಪಂಚರತ್ನ ಯೋಜನೆ ಮೂಲಕ ಹಲವು ಜನಪರ ಯೋಜನೆ ನೀಡಲು ಮುಂದಾಗಿದ್ದು ಇವೆಲ್ಲ ಸಾಕಾರವಾಗಲು ತಾಲೂಕಿನಲ್ಲಿ ಕೆ.ಮಹದೇವ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಕುಮಾರಸ್ವಾಮಿ ಅವರ ಕೈ ಬಲಪಡಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಮತದಾರರು ಸಹಕರಿಸಬೇಕು ಎಂದರು.

ಇದೇ ವೇಳೆ ಬೆಕ್ಕರೆ ಗ್ರಾಮದ ಪರಿಶಿಷ್ಟ ಕಾಲೋನಿಗೆ ಭೇಟಿ ನೀಡಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮತಯಾಚಿಸಿದರು.

ಈ ಸಂದರ್ಭ ಜೋಗನಹಳ್ಳಿ ಕೊಣಸೂರು ಭುವನಹಳ್ಳಿ ಈಚೂರು ಕುಡಕೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಯಿತು, ಜೆಡಿಎಸ್ ತಾಲೂಕು ಕಾರ್ಯದರ್ಶಿ ಬಿ.ವಿ ಗಿರೀಶ್, ಗ್ರಾ.ಪಂ ಸದಸ್ಯರಾದ ಜ್ಯೋತಿ ರವಿಕುಮಾರ್, ಬಿ.ಎಸ್ ಜಗದೀಶ್, ರುಕ್ಕಣ್ಣ, ಮಾಜಿ ಸದಸ್ಯೆ ಲತಾ ಜಗದೀಶಾರಾದ್ಯ, ಹೊನ್ನಪ್ಪ, ಕೃಷ್ಣಪ್ಪ, ಮುಖಂಡರಾದ ಪ್ರೀತಿ ಅರಸ್, ಸುನಿತಾ ಮಂಜುನಾಥ್, ಬಿ.ಎಸ್ ಗಣೇಶ್, ವಿಶ್ವನಾಥ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top