ಪಿರಿಯಾಪಟ್ಟಣ ತಾಲೂಕಿನ ಕರಡಿಪುರ ಗ್ರಾಮದಲ್ಲಿ ಶಾಸಕ ಕೆ.ಮಹದೇವ್ ಚುನಾವಣಾ ಪ್ರಚಾರ ನಡೆಸಿದರು

ಪಿರಿಯಾಪಟ್ಟಣ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮೇ.6 ರಂದು ಪಿರಿಯಾಪಟ್ಟಣಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಶಾಸಕ

ಕೆ.ಮಹದೇವ್ ಹೇಳಿದರು.

ತಾಲೂಕಿನ ವಿವಿದೆಡೆ ಚುನಾವಣಾ ಪ್ರಚಾರ ಕೈಗೊಂಡು ಕರಡಿಪುರ ಗ್ರಾಮದಲ್ಲಿ ಅವರು ಮಾತನಾಡಿದರು, ಅಂದು ಬೆಳಿಗ್ಗೆ 11.30 ಗಂಟೆಗೆ ತಾಲೂಕು ಕ್ರೀಡಾಂಗಣ ಬಳಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಬಳಿಕ ಹರವೆ ಮಲೆರಾಜಪಟ್ಟಣ ಬಳಿಯ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಚಾರ ಸಭೆ ನಡೆಸಲಿದ್ದಾರೆ, ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು ಮುಖಂಡರು ಬೂತ್ ಮಟ್ಟದ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಳೆದ 5 ವರ್ಷಗಳಿಂದ ಶಾಸಕನಾಗಿ ತಾಲೂಕಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಜಾತಿ ಭೇದವೆನ್ನದೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ ಪಡುತ್ತಿರುವ ನನಗೆ ಈ ಬಾರಿಯ ಚುನಾವಣೆಯಲ್ಲಿ ಆಶೀರ್ವದಿಸಿ ಗೆಲ್ಲಿಸಿದರೆ ತಮ್ಮಗಳ ಸೇವಕನಂತೆ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವೆ, ಶಾಸಕರಾಗಿದ್ದ ಸಂದರ್ಭ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚುನಾವಣೆ ಸಂದರ್ಭ ಮತದಾರರ ದಿಕ್ಕು ತಪ್ಪಿಸಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಮತದಾರರು ಕಿವಿ ಕೊಡದೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತ ನೀಡಿ ಗೆಲ್ಲಿಸುವಂತೆ ಕೋರಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಶಾಸಕ ಕೆ.ಮಹದೇವ್ ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ನಿಮ್ಮಿಂದ ಅಪೇಕ್ಷಿಸುವುದು ಚುನಾವಣೆಯಲ್ಲಿ ಮತನೀಡುವುದು ಅವರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಕೂಲಿ ಎಂಬಂತೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. 

ಈ ಸಂದರ್ಭ ಮುಖಂಡರಾದ ವಿದ್ಯಾಶಂಕರ್, ಪಟೇಲ್ ನಟೇಶ್, ಕೆ.ಎಸ್ ಕೃಷ್ಣೇಗೌಡ, ಅತ್ತರ್ ಮತಿನ್, ಧರಣೇಶ್, ಐಕಾನ್ ರವಿಗೌಡ, ನಾರಾಯಣಗೌಡ, ಬಿ.ಜೆ ದೇವರಾಜ್, ಮಲ್ಲಿಕಾರ್ಜುನ್, ಕರಡಿಪುರ ಕುಮಾರ್, ವಸಂತ್, ಕುಮಾರ್, ಗೀತಾ ಮಹದೇವ್, ಪ್ರೀತಿ ಅರಸ್, ಸುನಿತಾ ಮಂಜುನಾಥ್, ಲೋಕೇಶ್, ವಕೀಲ ಗೋವಿಂದೇಗೌಡ ಮತ್ತು ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top