ರಾಜ್ಯಾದ್ಯಂತ ಅಧಿಕಾರಾವಧಿ ಮುಗಿದಿರುವ ಗ್ರಾ.ಪಂಗಳಿಗೆ ನಾಮನಿರ್ದೇಶನ ಮಾಡುವ ತೀರ್ಮಾನವನ್ನು ಸರ್ಕಾರ ಕೈಬಿಟ್ಟಿದ್ದು ಮುಂದಿನ ಆರು ತಿಂಗಳ ಅವಧಿಗೆ ಶೀಘ್ರ ಆಡಳಿತಾಧಿಕಾರಿ ನೇಮಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ತಾಲೂಕಿನ ಹುಣಸವಾಡಿ ಮತ್ತು ಕಿರನಲ್ಲಿ ಗ್ರಾಮಗಳಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಲೋಕಸಭೆ ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿದರೆ ಗ್ರಾ.ಪಂ ಚುನಾವಣೆಗಳಲ್ಲಿ ಗೆಲುವು ಸಾಧಿಸೋದು ಬಹಳ ಕಷ್ಟ, ಸ್ಥಳೀಯರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿದರೆ ಗೆಲುವು ಸುಲಭ, ಕೇಂದ್ರ ಸರ್ಕಾರ ಗ್ರಾ.ಪಂ ಅಭಿವೃದ್ಧಿಗಾಗಿ ಸಾಕಷ್ಟು ಹಣ ಮೀಸಲಿಟ್ಟಿದ್ದು ಸದ್ಬಳಕೆಯಾಗಬೇಕು, ಸಹಕಾರ ಇಲಾಖೆ ಮುಖಾಂತರ ಸ್ತ್ರೀಶಕ್ತಿ, ಸ್ವಸಹಾಯ ಗುಂಪು ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ, ತಾಲೂಕಿನ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲು ಶಾಸಕ ಕೆ.ಮಹದೇವ್ ಅವರಿಗೆ ಸಂಪೂರ್ಣ ಸಹಕಾರ ನೀಡಲಿದ್ದು ಈಗಾಗಲೇ ತಾಲೂಕಿಗೆ ತಡೆಹಿಡಿದಿರುವ ಪಿಡಬ್ಲ್ಯುಡಿ ಇಲಾಖೆ ಅನುದಾನ ಮತ್ತು ಕೆರೆಗೆ ನೀರು ತುಂಬಿಸುವ ಯೋಜನೆ ಸಂಬಂಧ  ಶಾಸಕರೊಂದಿಗೆ ಸಚಿವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಶೀಘ್ರ ಅನುದಾನ ದೊರಕಿಸುವ ಭರವಸೆ ನೀಡಿದರು. ಸಂಸದ ಮತ್ತು ಶಾಸಕರು ಒಟ್ಟಾಗಿ ಕೆಲಸ ನಿರ್ವಹಿಸಿದಾಗ ಅಭಿವೃದ್ಧಿ ಸಾಧ್ಯ, ಗ್ರಾ.ಪಂ ಕಟ್ಟಡ ನಿರ್ಮಿಸಲು ಸ್ಥಳ ದಾನ ಮಾಡಿದ ಸುಧಾಕರ್ ದಂಪತಿ ಕಾರ್ಯ ಶ್ಲಾಘನೀಯ ಎಂದರು.      ಸಂಸದ ಪ್ರತಾಪ್ ಸಿಂಹ ಮಾತನಾಡಿ ಹಿಂದೆ ದೇಶ ಆಳಿದ ರಾಜಕಾರಣಿಗಳು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಬಗ್ಗೆ ಉದ್ದುದ್ದ ಭಾಷಣ ಮಾಡಿದರೇ ಹೊರತು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾದರು, ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಗ್ರಾ.ಪಂ ಗಳ ಮುಖಾಂತರ 14ನೇ ಹಣಕಾಸು ಆಯೋಗದಡಿ ಪಂಚಾಯಿತಿಗಳಿಗೆ ನೇರ ಅನುದಾನ ನೀಡುವ ಮುಖಾಂತರ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಶಾಸಕ ಕೆ.ಮಹದೇವ್ ಅವರೊಟ್ಟಿಗೆ ಉತ್ತಮ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

   ಶಾಸಕ ಕೆ.ಮಹದೇವ್ ಮಾತನಾಡಿ ಗ್ರಾ.ಪಂ ಮುಖಾಂತರ ಹಳ್ಳಿಗಳ ಅಭಿವೃದ್ಧಿ ಮಾಡಿ ಗಾಂಧೀಜಿ ಅವರ ಕನಸು ನನಸು ಮಾಡಬೇಕಿದೆ, ತಾಲೂಕಿನ ವಿವಿಧೆಡೆ ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಮುಂದಿನ ದಿನಗಳಲ್ಲಿ ಸಂಸದರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ, ಜಿ.ಪಂ ಮತ್ತು ತಾ.ಪಂ ಸದಸ್ಯರಿಗೆ ಅನುದಾನ ಬಹಳ ಕಡಿಮೆ ಇದ್ದು ಗ್ರಾ.ಪಂ ನರೇಗಾ ಯೋಜನೆ ಮೂಲಕ ತಮ್ಮ ಹಳ್ಳಿಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಿಕೊಳ್ಳುವಂತೆ ತಿಳಿಸಿದರು.     ಈ ಸಂದರ್ಭ ಮಾಜಿ ಶಾಸಕ ಎಚ್.ಸಿ ಬಸವರಾಜು, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸ್ಥಾಯಿಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯ ಎಸ್.ರಾಮು, ಈರಯ್ಯ, ಜಿ.ಪಂ ಸದಸ್ಯ ಕೆ.ಸಿ ಜಯಕುಮಾರ್, ಹುಣಸವಾಡಿ ಗ್ರಾ.ಪಂ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ಕವಿತಾ ವೆಂಕಟೇಶ್ ಮತ್ತು ಸರ್ವ ಸದಸ್ಯರು, ಕಿರನಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ಅನಿತಾ ಮತ್ತು ಸರ್ವ ಸದಸ್ಯರು, ಉಪ ವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸಹಾಯಕ ನಿರ್ದೇಶಕ ರಘುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ ಮಹೇಂದ್ರ, ತಾಲೂಕು ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.        

Leave a Comment

Your email address will not be published. Required fields are marked *

error: Content is protected !!
Scroll to Top