
ಪಟ್ಟಣದ ಸಂಘದ ಕಚೇರಿಯಲ್ಲಿ ಲಾಕ್ ಡೌನ್ ಸಂಬಂಧ ನಡೆದ ತುರ್ತು ಸಭೆಯಲ್ಲಿ ಟೌನ್ ಮತ್ತು ತಾಲೂಕು ಅಧ್ಯಕ್ಷರು ಹಾಗೂ ಕಾರ್ಯಕಾರಿಣಿ ಮಂಡಳಿ ತೀರ್ಮಾನದಂತೆ ಜು.20 ರವರೆಗೆ ವೃತ್ತಿ ಬಾಂಧವರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಸಲೂನ್ ಗಳನ್ನು ಹಲವು ಷರತ್ತುಗಳ ನಡುವೆ ಕಡ್ಡಾಯವಾಗಿ 15 ದಿನಗಳ ಕಾಲ ರಜೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ವೃತ್ತ ನಿರೀಕ್ಷಕರು ಹಾಗೂ ಶಾಸಕರಿಗೆ ಮನವಿ ನೀಡಲಾಯಿತು.
ಈ ವೇಳೆ ತಾಲೂಕು ಅಧ್ಯಕ್ಷ ಪಿ.ಸಿ ಕೃಷ್ಣ, ಟೌನ್ ಅಧ್ಯಕ್ಷ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಪಿ.ಟಿ ನಾರಾಯಣ್, ಜಗದೀಶ್, ವೆಂಕಟೇಶ್, ಹೇಮಂತ್, ಕುಮಾರ್, ಸತೀಶ್, ಚಂದ್ರಶೇಖರ್, ಕೃಷ್ಣ, ಸುದೀಪ್ ಹಾಜರಿದ್ದರು.