ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಶೀಘ್ರ ಸ್ಪಂದಿಸಿ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಯಾವುದೇ ತಾರತಮ್ಯ ಮಾಡದಂತೆ ಕೆಲಸ ನಿರ್ವಹಿಸುವಂತೆ ಶಾಸಕ ಕೆ.ಮಹದೇವ್ ಸೂಚಿಸಿದರು

  ಪಟ್ಟಣದ ಪುರಸಭಾ ವ್ಯಾಪ್ತಿಯ ಹಲವು ವಾರ್ಡ್ ಗಳ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾಯ 85ಲಕ್ಷ ವೆಚ್ಚದ ಕಾಮಗಾರಿಗೆ  ಚಾಲನೆ ನೀಡಿ ಅವರು ಮಾತನಾಡಿದರು, ಪುರಸಭೆ ಚುನಾವಣೆ ನಡೆದು ಎರಡು ವರ್ಷಗಳು ಕಳೆದರೂ ಮೀಸಲಾತಿ ಸಮಸ್ಯೆಯಿಂದ ಇಲ್ಲಿನ ಸದಸ್ಯರಿಗೆ ಅಧಿಕಾರ ಸಿಗದ ಕಾರಣ ಪಟ್ಟಣದ ವ್ಯಾಪ್ತಿಯ 23 ವಾರ್ಡ್ ನ ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ರೀತಿಯಲ್ಲಿ ಕಾವೇರಿ ನೀರಿನ ಸರಬರಾಜು, ರಸ್ತೆ, ಚರಂಡಿ, ಬೀದಿದೀಪ, ಸ್ವಚ್ಚತೆ ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸದಸ್ಯರ ಸಹಕಾರ ಪಡೆದು ಅಧಿಕಾರಿಗಳೇ ಮುತುವರ್ಜಿ ವಹಿಸಿ  ಸೌಲಭ್ಯ ಕಲ್ಪಿಸಲು ಮುಂದಾಗಬೇಕು,  ಮುಂದಿನ ದಿನಗಳಲ್ಲಿ ಪಟ್ಟಣದ ಜನರಿಗೆ ಅಗತ್ಯ ಸಹಕಾರ ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್ ವಾರು ಭೇಟಿ ನೀಡಿ ವೃದ್ಧಾಪ್ಯ ವೇತನ, ಪಿಂಚಣಿ ಸೇರಿದಂತೆ ಹಲವು ಸಾರ್ವಜನಿಕ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಒದಗಿಸುವ  ಎಂದು ಭರವಸೆ ನೀಡಿದರು.

 ಕೊರೊನಾ ಬಗ್ಗೆ ಕಾಳಜಿ ವಹಿಸಿ: ಕೊರೋನಾ ಹಬ್ಬುವ ರೀತಿ ನೋಡಿದರೆ ದಿನದಿಂದ ದಿನಕ್ಕೆ ಭಯವಾಗುತ್ತಿದೆ, ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಜರ್ ಬಳಸುವಂತೆ ಕೋರಿದರು.  

   ಈ ಸಂದರ್ಭ ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಆರೋಗ್ಯ ನಿರೀಕ್ಷಕರಾದ ಪ್ರದೀಪ್, ಆದರ್ಶ್, ಸದಸ್ಯರಾದ ಪಿ.ಸಿ ಕೃಷ್ಣ, ಕೆ.ಮಹೇಶ್, 

 ಮಂಜುಳಾರಾಜು, ಶ್ವೇತಾ ಕುಮಾರ್, ಮಂಜುನಾಥ ಸಿಂಗ್, ರವಿ, ನಿರಂಜನ್,  ಪ್ರಕಾಶ್ ಸಿಂಗ್, ಭಾರತಿ, ಪುಷ್ಪಲತಾ ಸೇರಿದಂತೆ ಮುಖಂಡರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top