ರಾಷ್ಟೀಯ ಆರೋಗ್ಯ ಅಭಿಯಾನದ ನೌಕರರಿಗೆ ಸೇವಾ ಭದ್ರತೆ ಮತ್ತು ಇತರೆ ಸೌಲಭ್ಯಗಳನ್ನು ನೀಡಿ – ಪಿ.ಎಂ ಪ್ರಸನ್ನ, ಮೈಮುಲ್ ನಿರ್ದೇಶಕ

ಕೇಂದ್ರ ಸರ್ಕಾರದ ಯಶಸ್ವೀ ಯೋಜನೆ ರಾಷ್ಟೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಳೆದ 10-15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಯಾವುದೇ ಸೇವಾ ಭದ್ರತೆಯಿಲ್ಲದೆಭವಿಷ್ಯದ ಚಿಂತೆ ಮತ್ತುಆತಂಕದಲ್ಲೇ ಜೀವನ ನಿರ್ವಹಿಸುತ್ತಿದ್ದು, ಸಮಾಜದ ಆರೋಗ್ಯ ರಕ್ಷಕರಾಗಿ ದುಡಿಯುತ್ತಿರುವ ಇವರಿಗೆ ಸರ್ಕಾರ ಮಾನವೀಯತೆಯಿಂದ ಸೇವಾ ಭದ್ರತೆ ಮತ್ತು ಇತರೆ ಸೌಲಭ್ಯಗಳನ್ನು ನೀಡಿ ಗೌರವಿಸಬೇಕೆಂದು ಮೈಮುಲ್ ನಿರ್ದೇಶಕ ಶ್ರೀ ಪಿ ಎಂ ಪ್ರಸನ್ನ ಅಭಿಪ್ರಾಯಪಟ್ಟರು.
ದಿನಾಂಕ: 24.09.2020ರಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಸುತ್ತಿರುವ ರಾಷ್ಟೀಯ ಆರೋಗ್ಯ ಅಭಿಯಾನದ ಆರೋಗ್ಯ ಇಲಾಖೆಯ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು, ತಮ್ಮ 10-15 ವರ್ಷಗಳ ಸೇವೆಯನ್ನು ಸರ್ಕಾರ ಪರಿಗಣಿಸದಿರುವ ಬಗ್ಗೆ ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಲು ಬಂದ ಸಂದರ್ಭ, ಮಾನ್ಯ ಶಾಸಕರಾದ ಶ್ರೀ ಕೆ ಮಹದೇವ್ ರವರು ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಪುತ್ರ, ಮೈಮುಲ್ ನಿರ್ದೇಶಕ ಶ್ರೀ ಪಿ ಎಂ ಪ್ರಸನ್ನ ರವರು ಶಾಸಕರ ಪರವಾಗಿ ಮನವಿ ಸ್ವೀಕರಿಸಿ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಇಲಾಖೆಯಲ್ಲಿ ಸದರಿ ನೌಕರರು ಸರ್ಕಾರಿ ನೌಕರರ ಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಮಗೆ ಸರ್ಕಾರಿ ನೌಕರರುಗಳಿಗೆ ನೀಡುತ್ತಿರುವ ಕನಿಷ್ಟ ಸೌಲಭ್ಯವನ್ನೂ ನೀಡುತ್ತಿಲ್ಲ. ಆರೋಗ್ಯ ಇಲಾಖೆಯ ಸಾಮಾನ್ಯ ಕರ್ತವ್ಯಗಳ ಜೊತೆಗೆ ಕೋವಿಡ್-19 ಅವಧಿಯಲ್ಲೂ ಸಹ ಯಾವುದೇ ರಜೆ ಇಲ್ಲದೆ ಜೀವದ ಹಂಗು ತೊರೆದು, ಎಲ್ಲಾ ರೀತಿಯ ಕರ್ತವ್ಯವನ್ನು ಸಮರ್ಪಕವಾಗಿ ಮಾಡುವ ಜೊತೆಗೆ ಕೊರೋನಾ ವಾರಿಯರ್‌ಗಳಾಗಿ ಕರ್ತವ್ಯ ನಿರ್ವಹಿಸಿರುತ್ತೇವೆ. ಆದರೂ ಸಹ ತಮಗೆ ಸಮಾನ ಕೆಲಸಕ್ಕೆ ಸಮಾನ ವೇತನವಾಗಲೀ, ಸೇವಾ ಭದ್ರತೆಯಾಗಲೀ, ಜೀವ ವಿಮೆಯಾಗಲೀ, ಕೋವಿಡ್ ಭತ್ಯೆಯಾಗಲೀ ಸಂದಾಯವಾಗಿರುವುದಿಲ್ಲ. ಇದರಿಂದ ಮನನೊಂದು ಹೆಚ್‌ಆರ್ ಪಾಲಿಸಿಯನ್ನು ಒಳಗೊಂಡAತೆ 14 ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಈ ಮುಷ್ಕರ ಹಮ್ಮಿಕೊಂಡಿರುವುದಾಗಿ ನೌಕರರು ತಿಳಿಸಿದರು.
ಮನವಿಗೆ ಸ್ಪಂದಿಸಿದ ಶ್ರೀ ಪಿ ಎಂ ಪ್ರಸನ್ನರವರು, ತಮ್ಮ ತಂದೆ ಮತ್ತು ಮಾನ್ಯ ಶಾಸಕರಾದ ಶ್ರೀ ಕೆ ಮಹದೇವ್ ರವರು ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಅಧಿವೇಶನಕ್ಕೂ ಹಾಜರಾಗಿರುವುದಿಲ್ಲ. ಸದ್ಯ ಅವರು ಗುಣಮುಖರಾಗಿ ವಿಶ್ರಾಂತಿ ಪಡೆಯುತ್ತಿದ್ದು, ತಮ್ಮ ತಂದೆಯವರ ಮೂಲಕ ರಾಷ್ಟಿçÃಯ ಆರೋಗ್ಯ ಅಭಿಯಾನದ ಆರೋಗ್ಯ ಇಲಾಖೆಯ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಸಿಗಬೇಕಾದ ಎಲ್ಲ ಪೂರಕ ಸೌಲಭ್ಯಗಳನ್ನು ದೊರಕಿಸಿಕೊಡಲು ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top