ಹಿಟ್ನೆಹೆಬ್ಬಾಗಿಲು ಗ್ರಾಮದ ಪಿ.ಎ.ಸಿ.ಸಿ.ಎಸ್ ನ ನೂತನ ಮೊದಲ ಅಂತಸ್ತಿನ ಕಟ್ಟಡ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನೆ – 18/10/2020

ಪಿರಿಯಾಪಟ್ಟಣ: ಕೊರೊನಾ ಸೋಂಕಿನ ಕಾರಣ ಆರ್ಥಿಕ ಸಂಕಷ್ಟಕ್ಕೊಳಗಾದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೆರವಿನೊಂದಿಗೆ ಸ್ಥಳೀಯ ಸಹಕಾರ ಸಂಸ್ಥೆಗಳ ಮುಖಾಂತರ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ ಹರೀಶ್ ಗೌಡ ಹೇಳಿದರು.
      ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಪಿಎಸಿಸಿಎಸ್ ನ ನೂತನ ಮೊದಲ ಅಂತಸ್ತಿನ ಕಟ್ಟಡ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು, ರೈತರ ಆರ್ಥಿಕ ಪುನಶ್ಚೇತನಕ್ಕಾಗಿ ಎರಡು ಜಿಲ್ಲೆಗಳಿಂದ ಸಹಕಾರ ಬ್ಯಾಂಕ್ ಮುಖಾಂತರ 670ಕೋಟಿ ಸಾಲ ವಿತರಣೆ ಮಾಡಲಾಗಿದ್ದು ಪಿರಿಯಾಪಟ್ಟಣ ತಾಲೂಕಿಗೆ 174ಕೋಟಿ ಸಾಲ ವಿತರಿಸಲಾಗಿದೆ, ತಾಲೂಕಿನ ರೈತರು ಸಾಲ ಪಡೆದು ಶೇ.96 ದರದಲ್ಲಿ ಮರುಪಾವತಿ ಮಾಡಿರುವುದು ಶ್ಲಾಘನೀಯ, ಮಹಿಳಾ ಸಂಘಗಳಿಗೆ ಶೇ.12 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಗುಡಿ ಕೈಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಹತ್ತು ಲಕ್ಷ ನೀಡುತ್ತಿದ್ದು ಸದ್ಬಳಕೆ ಮಾಡುವಂತೆ ಕೋರಿದರು.
    ಶಾಸಕ ಕೆ.ಮಹದೇವ್ ಮಾತನಾಡಿ ಸಹಕಾರ ಸಂಘಗಳ ಮುಖಾಂತರ ರೈತರು ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಮುಂಬರಬೇಕು, ಆಡಳಿತ ಮಂಡಳಿ ಸಂಘದ ಅಭಿವೃದ್ಧಿ ಜೊತೆಗೆ ರೈತರ ಹಿತ ಕಾಪಾಡುವಂತೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು     ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ ಮಾತನಾಡಿದರು, ಈ ವೇಳೆ ಸಂಘದ ನಿರ್ದೇಶಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಕೌಸಲ್ಯ ಲೋಕೇಶ್, ಮಣಿ ಡಿ.ಟಿ ಸ್ವಾಮಿ, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಉಪಾಧ್ಯಕ್ಷೆ ಜಯಮ್ಮ, ಸದಸ್ಯೆ ಶಿವಮ್ಮ, ಸಂಘದ ಅಧ್ಯಕ್ಷ ಎಚ್.ಎಸ್ ರವಿ, ಉಪಾಧ್ಯಕ್ಷೆ ಎಚ್.ಸಿ ಜ್ಯೋತಿ ಪ್ರಕಾಶ್ ಮತ್ತು ಕಾರ್ಯಕಾರಿ ಮಂಡಳಿ ನಿರ್ದೇಶಕರು, ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಕೆ ಹರೀಶ್, ಸಿಇಒ ಜನಾರ್ದನ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎಚ್.ಜಿ ಪರಮೇಶ್, ಸಂಘದ  ಸಿಇಒ ಕೆ.ಪಿ ಜಯರಾಮ್, ಸಿಬ್ಬಂದಿ ನಟರಾಜು, ಸಂತೋಷ್, ಶ್ರೀನಿವಾಸ್, ಸದಸ್ಯರು ಮತ್ತು ಗ್ರಾಮದ ಮುಖಂಡರು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top