ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯಲ್ಲಿ ಶಾಸಕ ಕೆ.ಮಹದೇವ್ ನೇತೃತ್ವದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಜಯ 07/11/2020

ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮೇಲುಗೈ ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಅಧಿಕಾರದ ಚಿಕ್ಕಾಣಿ ಹಿಡಿದಿದೆ.
ಟಿಎಪಿಸಿಎಂಎಸ್‌ನ ಎ ತರಗತಿಯ 4 ಸ್ಥಾನಗಳಲ್ಲಿ ೪ ಜೆಡಿಎಸ್ ಅಭ್ರ‍್ಥಿಗಳು ಜಯ ಸಾಧಿಸಿದರು,ಅದರಂತ್ತೆ ಬಿ ತರಗತಿಯ 8 ಸ್ಥಾನಗಳಲ್ಲಿ 7 ಸ್ಥಾನಗಳಲ್ಲಿ ಜೆಡಿಎಸ್ ಮತ್ತು 1 ಸ್ಥಾನದಲ್ಲಿ ಕಾಂಗ್ರೇಸ್ ಅಭ್ರ‍್ಥಿ ಗೆಲುವು ಸಾಧಿಸಿದರು.
ವಿಜೇತರು:ಎ ತರಗತಿಯ ವಿಭಾಗದಲ್ಲಿ ಕಂಪಲಾಪುರ ಕುಮಾರ್(ಸಾಮಾನ್ಯ),ಪುನಾಡಳ್ಳಿ ಜಲೇಂದ್ರ(ಸಾಮಾನ್ಯ),ರಾವಂದೂರು ವಿಜಯ್(ಸಾಮಾನ್ಯ),ಮಾಕೋಡು ಜವರಪ್ಪ(ಸಾಮಾನ್ಯ) ಕ್ಷೇತ್ರಗಳಲ್ಲಿ ಆಯ್ಕೆಯಾದರೆ.
ಬಿ ತರಗತಿಯಲ್ಲಿ ಎಸ್.ವಿ.ತಿಮ್ಮೆಗೌಡ(ಸಾಮಾನ್ಯ),ರಾಮು ಐಲಾಪುರ(ಪರಿಶಿಷ್ಟ ಮೀಸಲು),ತಿಮ್ಮ ನಾಯಕ (ಪರಿಶಿಷ್ಟ ಪಂಗಡ),ಮುಖೇಶ್(ಸಾಮಾನ್ಯ),ಡಿ.ಎ.ನಾಗೇಂದ್ರ(ಹಿAದುಳಿದ ರ‍್ಗ),ಪಿ.ಎಂ.ಮಹದೇವ್(ಹಿಂದುಳಿದ ರ‍್ಗ),ರ‍್ವ ಮಂಗಳ(ಮಹಿಳಾ ಮೀಸಲು),ಸುನೀತಾ(ಮಹಿಳಾ ಮೀಸಲು) ಕ್ಷೇತ್ರಗಳಿಂದ ಆಯ್ಕೆಯಾದರು.

ಜಯಗಳಿಸಿದ ಅಭ್ರ‍್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಮಹದೇವ್ ಕಳೆದ ೨೦ ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷದ ದುರಾಡಳಿತದಿಂದ ಬೇಸತ್ತಾ ಜನ ಸಾಮಾನ್ಯರು ಇಂದು ಉತ್ತಮ ಆಡಳಿತಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಟಿಎಪಿಸಿಎಂಎಸ್‌ನ ಅಧಿಕಾರವನ್ನು ಹಿಡಿಯಲು ಸಹಕಾರ ನೀಡಿದಾರೆ.ಇವರ ಭರವಸೆಗಳನ್ನು ಅರಿತು ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಅಭಿವೃದ್ಧಿ ಕರ‍್ಯಗಳತ್ತಾ ಚಿಂತಿಸಬೇಕು.ಯಾವುದೇ ರೀತಿಯ ಗೊಂದಲಗಳಿಗೆ,ಅನ್ಯಾಯಕ್ಕೆ ಅವಕಾಶವಿಲ್ಲದೆ ಉತ್ತಮ ಆಡಳಿತ ನೀಡಲು ಸೂಚಿಸಿದರು.
ಈ ಸಂರ‍್ಭದಲ್ಲಿ ಮೈಮುಲ್ ನರ‍್ದೇಶಕ ಪಿ.ಎಂ.ಪ್ರಸನ್ನ,ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ,ಸದಸ್ಯ ಆರ್,ಎಸ್,ಮಹದೇವ್,ಎಂಡಿಸಿಸಿ ಬ್ಯಾಂಕ್ ಜಿಲ್ಲಾ ನರ‍್ದೇಶಕ ರವಿ,ಪುರಸಭೆ ಸದ್ಯ ವಿನೋದ್,ಮುಖಂಡರಾದ ಆರ‍್ತಿ ಸೋಮಶೇಖರ್,ಸಯ್ಯಾದ್ ಇಲಿಯಾಸ್,ಉಮೇಶ್,ಅಪರ‍್ವ ಮೋಹನ್,ರಘುನಾಥ್,ಕಣಗಾಲು ಹನುಮಂತ ಸೇರಿದಂತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top