ಪಿರಿಯಾಪಟ್ಟಣ ತಾಲೂಕಿನ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಎಸ್.ವಿ.ತಿಮ್ಮೇಗೌಡ, ಉಪಾಧ್ಯಕ್ಷರಾಗಿ ಸರ್ವಮಂಗಳ ಅವಿರೋಧವಾಗಿ ಆಯ್ಕೆಯಾದರು. 18/11/2020

ಪಿರಿಯಾಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಒಟ್ಟು ೧೩ ಮಂದಿ ನಿರ್ದೇಶಕರ ಪೈಕಿ ಜೆಡಿಎಸ್ ಒಟ್ಟು ೧೨ ಮಂದಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದು ಒಬ್ಬರು ಮಾತ್ರ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನ.೧೮ರ ಬುಧವಾರ ನಿಗಧಿಯಾಗಿದ್ದು ಬೆಳಿಗ್ಗೆ ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಎಸ್.ವಿ.ತಿಮ್ಮೇಗೌಡ ಮತ್ತು ಉಪಾಧ್ಯಕ್ಷರಾಗಿ ಸರ್ವಮಂಗಳ ನಾಮಪತ್ರ ಸಲ್ಲಿಸಿದರು.
ನಿಗಧಿಯಂತೆ ಮದ್ಯಾಹ್ನ ೧.೩೦ಕ್ಕೆ ಸಭೆ ನಡೆಸಿದ ಚುನಾವಣಾಧಿಕಾರಿ ತಹಸೀಲ್ದಾರ್ ಶ್ವೇತ ಎನ್.ರವೀಂದ್ರ ಇತರರು ನಾಮಪತ್ರ ಸಲ್ಲಿಸದ ಕಾರಣ ನಾಮಪತ್ರ ಸಲ್ಲಿಸಿದವರನ್ನೇ ಅವಿರೋಧವಾಗಿ ಆಯ್ಕೆಮಾಡಿ ಘೋಷಿಸಿದರು.
ಶಾಸಕರ ಅಭಿನಂದನೆ
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಕೆ.ಮಹದೇವ್ ಅಧಿಕಾರಕ್ಕೆ ಬಂದ ಮೇಲೆ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಅವ್ಯವಹಾರಗಳಿಗೆ ಅವಕಾಶ ನೀಡಬೇಡಿ. ೧೫ ವರ್ಷಗಳ ನಂತರ ಟಿಎಪಿಸಿಎಂಎಸ್‌ನಲ್ಲಿ ಅಧಿಕಾರ ಪಡೆದಿರುವುದು ಕಾರ್ಯಕರ್ತರ ಶ್ರಮದಿಂದ ಎಂಬುದನ್ನು ಮರೆಯದೆ ರೈತರನ್ನು ಜನಸಾಮಾನ್ಯರು ಬಂದರು ಅವರನ್ನು ಅಲೆಸದೆ ಕೆಲಸ ಮಾಡಿಕೊಡಿ. ಅಲ್ಲದೆ ಈ ಹಿಂದೆ ರೈತರ ಅಗತ್ಯ ಉಪಕರಣಗಳಾದ ರಸಗೊಬ್ಬರ ವಿತರಣೆ, ಬಟ್ಟೆಗಳನ್ನು ಸಬ್ಸಿಡಿದರದಲ್ಲಿ ಮಾರಾಟ ಮಾಡುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು ಆದರೆ ಇತ್ತೀಚೆಗೆ ಇದು ನಿಂತಿದೆ ಇದು ಮರುಕಳಿಸಬೇಕು ಸಂಘ ಲಾಭದಿಂದ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಮುಂದಿನ ವರ್ಷ ಚುನಾವಣೆಯಲ್ಲಿ ಮತಕೇಳಲು ಅವಕಾಶ ಇರಬೇಕು ಹಾಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ಕುಮಾರ್, ಜಲೇಂದ್ರ, ಜವರಪ್ಪ, ಎಚ್.ಡಿ.ವಿಜಯ್, ಮುಖೇಶ್‌ಕುಮಾರ್, ನಾಗೇಂದ್ರ, ಸುನಿತಾ, ಎಸ್.ರಾಮು, ತಿಮ್ಮನಾಯಕ, ಸಿ.ಎನ್.ರವಿ, ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಪುರಸಭೆ ಅಧ್ಯಕ್ಷ ಮಂಜುನಾಥ್‌ಸಿAಗ್, ಟಿಎಪಿಸಿಎಂಎಸ್ ಕಾರ್ಯದರ್ಶಿ ಕಲಾವತಿ, ಪುರಸಭಾಸದಸ್ಯರಾದ ಪಿ.ಎನ್.ವಿನೋದ್,ನಿರಂಜನ್, ಪ್ರಕಾಶ್‌ಸಿಂಗ್, ಪಿ.ಸಿ.ಕೃಷ್ಣ, ಮುಖಂಡರ ಅಣ್ಣಯ್ಯಶೆಟ್ಟಿ, ಮಾಜಿ ಜಿ.ಪಂ.ಸದಸ್ಯ ಶಿವಣ್ಣ, ಸ್ವಾಮಿ, ಶಿವಣ್ಣ, ವಿದ್ಯಾಶಂಕರ್, ಕೃಷ್ಣೇಗೌಡ,ಅಪೂರ್ವಮೊಹನ್, ಪೆಪ್ಸಿಕುಮಾರ್, ರವಿ, ಸಂತೋಷ್, ಶಿವಕುಮಾರಸ್ವಾಮಿ, ಲಕ್ಷಣ, ಹೇಮಂತ್‌ಕುಮಾರ್,ರವಿ, ಸಯ್ಯದ್‌ಇಲಿಯಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top