ಪಿರಿಯಾಪಟ್ಟಣದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆವತಿಯಿಂದ ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಶಾಸಕ ಕೆ.ಮಹದೇವ್ ಆದೇಶ ಪತ್ರ ವಿತರಣೆ ಮಾಡಿದರು. 21/11/2020

ಪಿರಿಯಾಪಟ್ಟಣದ ನೂತನ ಪುರಸಭಾ ಕಟ್ಟಡದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಗಂಗಾಕಲ್ಯಾಣ ಯೋಜನೆ ಮತ್ತು ಶ್ರಮಶಕ್ತಿ ಯೋಜನೆ ಫಲಾನುಭವಿಗಳಿಗೆ ಮಂಜುರಾತಿ ಆದೇಶ ಪತ್ರವಿತರಿಸಿ ಶಾಸಕ ಕೆ.ಮಹದೇವ್ ಮಾತನಾಡಿದರು. ಸಾಲಸೌಲಭ್ಯ ಮತ್ತಿತರರ ಯೋಜನೆಯ ಫಲಾನುಭವಿಗಳು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಈಗ 15 ಮಂದಿಗೆ ಮಂಜೂರಾಗಿರುವ ಗಂಗಾಕಲ್ಯಾಣ 1.5 ಎಕರೆ ಜಮೀನು ಹೊಂದಿರುವ ಸಣ್ಣಪುಟ್ಟ ರೈತರನ್ನು ಗುರುತಿಸಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 5 ಮಂದಿಗೆ ನೀಡಲಾಗುವುದು. ಬಹಳಷ್ಟು ಮಂದಿ ಭೂಮಿ ಇಲ್ಲದವರಿಗೆ ರಸ್ತೆ ಬದಿ ವ್ಯಾಪಾರಸ್ತೆಗೆ ಇಲಾಖೆವತಿಯಿಂದ ತಲಾ 10 ಸಾವಿರ ಸಾಲಸೌಲಭ್ಯವನ್ನು ಕೊಡಿಸಲಾಗುತ್ತಿದೆ ಎಂದು ತಿಳಿಸಿದರು.


ಮುಖಂಡ ಅತ್ತಹರ್‌ಮತೀನ್ ಮಾತನಾಡಿ ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 42 ಮಂದಿಗೆ ಗಂಗಾಕಲ್ಯಾಣ ಅನುದಾನ ಬಿಡುಗಡೆಯಾಗಿತ್ತು ಆದರೆ ಸರಕಾರ ಬದಲಾಗಿದ್ದು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಉತ್ತರ ಕರ್ನಾಟಕದ ಪ್ರವಾಹ ವಿಕೋಪ, ಕೊರೊನಾ ತೊಂದರೆ ಇಂದ 2018-19 ಯೋಜನೆ ಈಗ ಅನುಷ್ಠಾನವಾಗುತ್ತಿದ್ದು. ಶಾಸಕ ಕೆ.ಮಹದೇವ್ ಶ್ರಮದಿಂದ ತಾಲೂಕಿಗೆ 6-7 ಫಲಾನುಭವಿಗಳಿಗೆ ಬದಲಾಗಿ 20 ಮಂದಿಗೆ ಯೋಜನೆಗೆ ಉಪಯೋಗ ದೊರಕುತ್ತಿದೆ ಎಂದು ತಿಳಿಸಿದರು.


ಪುರಸಭಾ ಅಧ್ಯಕ್ಷ ಮಂಜುನಾಥ್‌ಸಿ0ಗ್ ಮಾತನಾಡಿ ಶಾಸಕರ ನೇತೃತ್ವದಲ್ಲಿ ಅಲ್ಪಸಂಖ್ಯಾತರಲ್ಲಿಯೂ ಅತಿ ಬಡವರನ್ನು ಗುರುತಿಸಿ ಸವಲತ್ತು ನೀಡಲಾಗುತ್ತಿದೆ ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ನಾಗೇಂದ್ರ ಮಾತನಾಡಿ ಮುಂದಿನ ದಿನಗಳಲ್ಲಿ ಬಿಪಿಎಲ್ ಪಡಿತರ ಹೊಂದಿರುವ ಎಲ್ಲಾ ಮಹಿಳೆಯರಿಗೆ 10 ಸಾವಿರ ಸಾಲಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ಶ್ರಮಶಕ್ತಿ ಯೋಜನೆ ಸೇರಿ ಇತರ ಯೋಜನೆಗಳ ಮೂಲಕ ಅಲ್ಪಸಂಖ್ಯಾತರಿಗೆ ಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ವೇತ ಎನ್.ರವೀಂದ್ರ, ಎಇಇ ನಾಗರಾಜು, ಮುಖ್ಯಾಧಿಕಾರಿ ಎ.ಚಂದ್ರಕುಮಾರ್, ಪುರಸಭಾ ಸದಸ್ಯರಾದ ಕೆ.ಮಹೇಶ್,ಪಿ.ಎನ್.ವಿನೋದ್, ಪಿ.ಸಿ.ಕೃಷ್ಣಾ, ನಿರಂಜನ್, ರೇವತಿ, ಭಾರತಿ, ಮುಖಂಡರಾದ ರಫೀಕ್, ಮಾಜಿ ಗ್ರಾ.ಪಂ. ಅಧ್ಯಕ್ಷ ನದೀಮ್, ಮನಾಫ್, ಇಲಿಯಾಸ್, ಸಗೀರ್, ಪೆಪ್ಸಿಕುಮಾರ್, ಸಾಜಿದಾ ಭಾನು, ಸೇರಿದಂತೆ ಮತ್ತಿತರರುಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top