
ತಾಲ್ಲೂಕಿನ ಹಾರನಹಳ್ಳಿ ಹೋಬಳಿಯಾ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೂತನ ಕಟ್ಟಡ .ರೂ 84 ಲಕ್ಷ ಹಾಗು ರೈತ ಸಂಪರ್ಕ ಕೇಂದ್ರದ ಗೋದಾಮು ನೂತನ ಕಟ್ಟಡ ರೂ. 15.00 ಲಕ್ಷ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು ಹಿಂದುಳಿದ ಹೋಬಳಿ ಕೇಂದ್ರವಾಗಿರುವ ಹಾರನಹಳಿಯನ್ನು ಸಮಗ್ರ ಅಭಿವೃದ್ಧಿಪಡಿಸಿ ಉತ್ತಮ ಹೋಬಳಿ ಕೇಂದ್ರವಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು ಮುಂದಿನ ದಿನಗಳಲ್ಲಿ ಹಾರನಹಳ್ಳಿಗೆ ಸಾರ್ವಜನಿಕ ಆಸ್ಪತ್ರೆ ಸಾರ್ವಜನಿಕ ಪಶು ಆಸ್ಪತ್ರೆ ಮಂಜೂರು ಮಾಡಿಸಿ ಈ ಊರನ್ನು ಅಭಿವೃದ್ಧಿಪಡಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದರು .

ಇದೇ ಸಂದರ್ಭದಲ್ಲಿ ಶಾಸಕರು ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನ ಪಡೆದ ಫಲಾನುಭವಿಗಳಿಗೆ ಆಯ್ಕೆ ಪತ್ರವನ್ನು ವಿತರಿಸಿದರು

ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಶ್ವೇತಾ ರವೀಂದ್ರ ರೈತರು ಹೆಚ್ಚಿನ ರೀತಿಯಲ್ಲಿ ತಾಲ್ಲೂಕು ಕೇಂದ್ರಕ್ಕೆ ಆಗಮಿಸದೆ ಹೋಬಳಿ ಕೇಂದ್ರದ ನಾಡ ಕಚೇರಿಗಳಲ್ಲಿ ಬಂದು ತಮ್ಮ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳಲು ಬೇಕೆಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ನಾಡಕಚೇರಿಯನ್ನು ಕಟ್ಟಲು ಜಾಗವನ್ನು ದಾನ ನೀಡಿದ ಗ್ರಾಮದ ನಾಗೇಂದ್ರ ದಂಪತಿಯನ್ನು ಶಾಸಕರು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರುದ್ರಮ್ಮ ನಾಗಯ್ಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮಿತ್ರ ನಾಗರಾಜ್ ಮೋಹನ್ ರಾಜ್ ಪುಷ್ಪಲತಾ ಜಯಂತಿ ಸೋಮಶೇಖರ್ ಜೆಡಿಎಸ್ ಮುಖಂಡ ಹೇಮಂತ್ ಕುಮಾರ್ ಉಪ ತಹಶೀಲ್ದಾರ್ ನಿಜಾಮುದ್ದೀನ್, ಬೆಟ್ಟದಪುರ ಪೊಲೀಸ್ ಉಪ ನಿರೀಕ್ಷಕ ಬಿ ಕೆ ಮಹೇಶ್ ಕುಮಾರ್ ಸೇರಿದಂತೆ ಇನ್ನೂ ಹಲವರು ಹಾಜರಿದ್ದರು