
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಖರೀದಿದಾರ ಕಂಪನಿ ಪ್ರತಿನಿಧಿಗಳು, ಮಂಡಳಿ ಅಧಿಕಾರಿಗಳು ಮತ್ತು ರೈತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು, ಆಂಧ್ರಪ್ರದೇಶ ಸರ್ಕಾರ ತಂಬಾಕು ರೈತರಿಗೆ ಉತ್ತಮ ಬೆಲೆ ನೀಡಿ ಖರೀದಿ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಸಹ ರೈತರಿಂದ ತಂಬಾಕು ಖರೀದಿಸುವಂತೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ, ನಮ್ಮ ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ ಎನ್ನುವ ಕಾರಣಕ್ಕೆ ತಂಬಾಕು ಬೆಳೆದು ಸಾಲಗಾರರಾಗುತ್ತಿದ್ದಾರೆ ವಿನಹ ಲಾಭ ಕಾಣಲು ಸಾಧ್ಯವಾಗುತ್ತಿಲ್ಲ,1970 ರಿಂದ 2020 ರವರೆಗೆ 1993ರಲ್ಲಿ ಬಿಟ್ಟರೆ ಒಮ್ಮೆಯೂ ಉತ್ತಮ ಬೆಲೆ ದೊರಕಿಲ್ಲ ಎಂದು ದೂರಿ ರೈತರಿಗೆ ಉತ್ತಮ ಬೆಲೆ ಕೊಡಲು ಸಾಧ್ಯವಾಗದಿದ್ದಲ್ಲಿ ಬೆಳೆಯ ರಜೆ ಘೋಷಿಸುವಂತೆ ಒತ್ತಾಯಿಸಿದರು.
ತಂಬಾಕು ಬೆಳೆಗಾರ ಹಲವು ರೈತರು ಮಾತನಾಡಿ 4 ಮತ್ತು 5 ದರ್ಜೆ ತಂಬಾಕಿಗೆ ಉತ್ತಮ ದರ ದೊರಕುತ್ತಿಲ್ಲ, ರೈತರಿಗೆ ಬೆಲೆ ತಾರತಮ್ಯ ಎಸಗಲಾಗುತ್ತಿದೆ, ತಂಬಾಕು ಉತ್ಪಾದನಾ ವೆಚ್ಚ ರೂ.150ರಷ್ಟು ಆಗುತ್ತಿದೆ ಆದ್ದರಿಂದ ಕನಿಷ್ಠ 200 ರೂ ನೀಡಿ ತಂಬಾಕು ಖರೀದಿಸಬೇಕು ಎಂದು ಒತ್ತಾಯಿಸಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಐಟಿಸಿ ಕಂಪನಿ ಲೀಫ್ ಮ್ಯಾನೇಜರ್ ಶ್ರೀನಿವಾಸರೆಡ್ಡಿ ಮಾತನಾಡಿ ಶೇ.15 ರಷ್ಟು ತಂಬಾಕು ಮಾತ್ರ ಸ್ಥಳೀಯ ಬೇಡಿಕೆಗೆ ಪೂರೈಕೆಯಾಗುತ್ತಿದ್ದು ಇನ್ನುಳಿದ ತಂಬಾಕು ವಿದೇಶಕ್ಕೆ ರಫ್ತಾಗುತ್ತಿದೆ ವಿದೇಶದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಆದಲ್ಲಿ ಮಾತ್ರ ಉತ್ತಮ ಬೆಲೆ ದೊರೆಯುತ್ತದೆ ಆದರೆ ಗುಣಮಟ್ಟದ ತಂಬಾಕು ನೀಡದೆ ಅತಿ ಹೆಚ್ಚು ಉತ್ಪಾದನೆ ಮಾಡಿ ದರ ಕುಸಿತವಾಗಿದ್ದು ಖಚಿತ ಮುಂದಿನ ದಿನಗಳಲ್ಲೂ ಉತ್ತಮ ಬೆಲೆ ದೊರಕುವ ವಿಶ್ವಾಸ ವ್ಯಕ್ತಪಡಿಸಿದರು.
ಹರಾಜು ಅಧೀಕ್ಷಕರಾದ ಡಾ.ಬ್ರಿಜ್ ಭೂಷಣ್, ಮಂಜುನಾಥ್, ರೈತ ಮುಖಂಡರು ಹಾಜರಿದ್ದರು.