
ದಿನಾಂಕ ೦೧/೦೧/೨೦೨೧ ರಂದು ದೇವೇಗೌಡನ ಕೊಪ್ಪಲು, ಕೃಷ್ಣಾಪುರ, ಹೌಸಿಂಗ್ ಬೋರ್ಡ್ ಹಾಗು ದಿನಾಂಕ ೦೨/೦೧/೨೦೨೧ ರಂದು ಚಿಕ್ಕಪರಿವಾರ ಬೀದಿ , ಈಡಿಗರಬೀದಿ, ಛತ್ರದ ಬೀದಿ, ಅಬ್ಬುರು ಮತ್ತು ಸಣ್ಣಯ್ಯನ ಬೀದಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು
ಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಸರ್ಕಾರದಿಂದ ಪುರಸಭೆ ಮೂಲಕ ದೊರೆಯುವ ಸೌಲಭ್ಯಗಳು ಸಮರ್ಪಕ ತಲುಪುವಂತೆ ಅಧಿಕಾರಿ ಮತ್ತು ಸಿಬ್ಬಂದಿ ನಿಗಾ ವಹಿಸುವಂತೆ ಶಾಸಕ ಕೆ.ಮಹದೇವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ , ಖಾತಾ ಆಂದೋಲನದಡಿ ಪುರಸಭೆ ಅಧಿಕಾರಿಗಳು ಪ್ರತಿಯೊಂದು ವಾರ್ಡ್ ಗೆ ಬಂದು ಸಾರ್ವಜನಿಕರಿಂದ ಮಾಹಿತಿ ಪಡೆಯಬೇಕು, ಪ್ರತಿ ವಾರ್ಡ್ ಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು ಸಾರ್ವಜನಿಕರಿಂದ ಕುಡಿಯುವ ನೀರು ಸರಬರಾಜು, ರಸ್ತೆ ಮತ್ತು ಚರಂಡಿ ಸ್ವಚ್ಛತೆ, ಮತ್ತು ಬೀದಿ ದೀಪ ನಿರ್ವಹಣೆ ಕುರಿತಾದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೇಳಿ ಬರುತ್ತಿದ್ದು ಇವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು, ಸರ್ಕಾರ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನ, ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನ ಸೇರಿದಂತೆ ಎಲ್ಲ ಯೋಜನೆಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ಸೂಚಿಸಿ ಸಾರ್ವಜನಿಕರು ನೀಡುವ ದೂರುಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪುರಸಭೆ ಅಧಿಕಾರಿಗಳು ಬಗೆಹರಿಸಬೇಕಿದ್ದು ಮುಂದಿನ ಜನಸ್ಪಂದನ ಸಭೆಯ ವೇಳೆಗೆ ಯಾವ ದೂರುಗಳು ಬಾಕಿ ಉಳಿದಿರಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಮುಖ್ಯಾಧಿಕಾರಿ ಚಂದ್ರಕುಮಾರ್, ಸದಸ್ಯರಾದ ಭಾರತಿ, ಪುಷ್ಪಲತಾ, ಆಶಾ, ಮುಖಂಡರಾದ ಉಮೇಶ್, ಸುರೇಶ್, ಪೆಪ್ಸಿ ಕುಮಾರ್, ಇಲಿಯಾಸ್ ಅಹ್ಮದ್, ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.