ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ತಮ್ಮದೇ ಆದ www.kmahadev.com ವೆಬ್‌ಸೈಟ್ ಅನ್ನು ಮಂಜುನಾಥಸಮುದಾಯ ಭವನದಲ್ಲಿ ಕಾರ್ಯಕರ್ತರ ಎದುರು ಬಿಡುಗಡೆ ಗೊಳಿಸಿದರು. 16/01/2021

ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಆಧುನಿಕ ತಂತ್ರಜ್ಞಾನಗಳ ಮೂಲಕ ಜನರನ್ನು ತಲುಪುವ ವಿಶೇಷ ಪ್ರಯತ್ನ ಮಾಡಿದ್ದು. ಶಾಸಕರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದ್ಧಾರೆ. ಈ ವಿಶಿಷ್ಠ ಪ್ರಯತ್ನದಮೂಲಕ ಕೆಮಹದೇವ್‌ಡಾಟ್‌ಕಾಮ್ ಎಂಬ ವೆಬ್‌ಸೈಟ್ ಪ್ರಾರಂಭಮಾಡಲಾಗಿದೆ.

ಶಾಸಕರ ಮಾಹಿತಿ

 ಶಾಸಕ ಕೆ.ಮಹದೇವ್ ಸಾಮಾನ್ಯ ರೈತನ ಮಗನಾಗಿ ಬಂದವರು, ಪುರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ಯಶಸ್ಸುಕಂಡು ವಿಧಾನಸಭಾ ಚುನಾವಣೆಯಲ್ಲಿ ೨ ಬಾರಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿ ೩ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದವರು ಇದರ ಬಗ್ಗೆ ಕೆ.ಮಹದೇವ್ ತಮ್ಮ ರಾಜಕೀಯ ಏಳುಬೀಳುಗಳನ್ನು ತಾವು ಬೆಳೆದು ಬಂದ ದಾರಿಯನ್ನು ವೆಬ್‌ಸೈಟ್‌ನಲ್ಲಿ ಸಂಪೂರ್ಣ ವಿವಿರದ ಲೇಖನವನ್ನು ಪ್ರಕಟಿಸಿದ್ದಾರೆ.

 ಅಭಿವೃದ್ದಿ ಮಾಹಿತಿ

 ಶಾಸಕರು ಅಭಿವೃದ್ದಿ ಮಾಡಿಲ್ಲ ಎಂದು ಟೀಕಿಸುವ ವಿರೋಧ ಪಕ್ಷದವರಿಗೆ ಕಾರ್ಯಕರ್ತರು ದಾಖಲೆ ಸಮೇತ ಉತ್ತರಿಸಬೇಕು ಎಂಬ ಕಾರಣಕ್ಕಾಗಿ ಕೆ.ಮಹದೇವ್ ತಮ್ಮ ವೆಬ್‌ಸೈಟ್‌ನಲ್ಲಿ ತಮ್ಮ ಅವಧಿಯಲ್ಲಿ ಉದ್ಘಾಟನೆಗೊಂಡ ಕಾಮಗಾರಿಗಳ ಸಂಪೂರ್ಣ ವಿವರ ಮತ್ತು ಬಿಡುಗಡೆಯಾದ ಹಣದ ಮೊತ್ತ ಎಲ್ಲವನ್ನು ಪಟ್ಟಿನೀಡಿದ್ದಾರೆ. ಈ ಮೂಲಕ ಜನಸಾಮಾನ್ಯರು ತಮ್ಮ ಗ್ರಾಮಕ್ಕೆ ಯಾವ ಕೆಲಸಕ್ಕೆ ಎಷ್ಟು ಹಣ ಬಿಡುಗಡೆಯಾದೆ ಎಂಬ ಸಂಪೂರ್ಣ ಮಾಹಿತಿ, ಶಾಸಕರು ಭಾಗವಹಿಸಿ ಕಾರ್ಯಕ್ರಮಗಳ ಪೋಟೋ, ವಿಡಿಯೋಗಳು ಎಲ್ಲವನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

WRITE TO KM ವಿಶೇಷ.

 ಈ ವೆಬ್‌ಸೈಟ್‌ನ ವಿಶೇಷವೆಂದರೆ ಶಾಸಕರಿಗೆ ನೇರವಾಗಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದು, ಯಾವುದೆ ದೂರು, ಸಮಸ್ಯೆ, ವಿಚಾರಗಳು ಇದ್ದರು ಶಾಸಕರ ವೆಬ್‌ಸೈಟ್‌ನ ರೈಟುಕೆಎಂಗೆ ಕ್ಲಿಕ್ ಮಾಡಿದರೆ. ಜನಸಾಮಾನ್ಯರ ಯಾವುದೇ ಸಮಸ್ಯೆ, ದೂರು ಅಥವಾ ಸಲಹೆ ನೀಡಬೇಕಿದ್ದರೆ  ಸಂಬಂಧಪಟ್ಟ ಇಲಾಖೆ ನಮೂದಿಸಿ ತಮ್ಮ ಸಮಸ್ಯೆ, ದೂರು ಅಥವಾ ಸಲಹೆ ನೀಡಬಹುದು. ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಶಾಸಕರಿಂದ ಸೂಚನೆ ನೀಡಲಾಗುವುದು.

  ನೀವು ಕಳಿಸುವ ಸಮಸ್ಯೆ, ದೂರು ಅಥವಾ ಸಲಹೆ  ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಹಾಗು ಶಾಸಕರಿಗೆ ತಲುಪುವುದು. ನೀವು ಕಳಿಸಿದ  ಸಮಸ್ಯೆ, ದೂರು ಅಥವಾ ಸಲಹೆ  ಗೆ ಶಾಸಕರ ಜಿ-ಮೇಲ್ ನಿಂದ ತಮಗೆ ನೋಂದಾಯಿಸಿದ ಅರ್ಜಿ ಸಂಖ್ಯೆ ಸಿಗುತ್ತದೆ. ತಮ್ಮ  ಸಮಸ್ಯೆ, ದೂರಿಗೆ  ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರೆ ನಿಮ್ಮ ನೋಂದಾಯಿಸಿದ ಅರ್ಜಿ ಸಂಖ್ಯೆಯ ಮೂಲಕ ತಮಗೆ ಪರಿಹಾರ ದೊರಕುವುದು.

 ಎಚ್ಚರಿಕೆ ಅಗತ್ಯ

  ಯಾವುದೇ ಕಾರಣಕ್ಕೂ ಈ ಸೌಲಭ್ಯದಲ್ಲಿ ಅಧಿಕಾರಿಗಳಿಗೆ ಆಗಲಿ ಅಥವಾ ಶಾಸಕರಿಗಾಗಲಿ ತಪ್ಪು ಮಾಹಿತಿ ಕೊಡಲು ಸಾಧ್ಯವಿರುವುದಿಲ್ಲ. ತಪ್ಪು ಸಂದೇಶ ಅಥವಾ ದಿಕ್ಕು ತಪ್ಪಿಸುವ ಕೆಲಸ ಮಾಡಿದರೆ ಸಿಕ್ಕಿ ಬೀಳುವುದು ಶತ ಸಿದ್ಧ. ತಾವು ಕಳುಹಿಸುತ್ತಿರುವ ಅರ್ಜಿ ಯಾವ ಮುಖಾಂತರ ಉದಾಹರಣೆಗೆ – ಯಾವ ಸಾಧನ ಬಳಸಿ ಕಳುಹಿಸುತ್ತೀರಾ ಎಲ್ಲ ತಂತ್ರಾಂಶದಲ್ಲಿ ದಾಖಲಾಗಿರುತ್ತದೆ. ಯಾವ ಸಾಧನ ( ಮೊಬೈಲ್ ಅಥವಾ ಕಂಪ್ಯೂಟರ್ ಇತ್ಯಾದಿ) ಯಾವ ಬ್ರೌಸರ್ (ಕ್ರೋಮ್ – ಮೊಝಿಲ್ಲಾ ಫೈರ್ ಫಾಕ್ಸ್ ಇತ್ಯಾದಿ) ಯಾವ ಇಂಟರ್ನೆಟ್ ಬಳಕೆ ಮಾಡುತ್ತಿದ್ದೀರಾ (ಐ.ಪಿ. ಅಡ್ರೆಸ್ಸ್) ಎಲ್ಲವೂ ದಾಖಲಾಗುತ್ತದೆ. ಆದ್ದರಿಂದ ಕುಹುಕ ಮಾಡುವರು ದುರ್ಬಳಕೆ ಸಿಕ್ಕಿಬೀಳುವುದು ಖಚಿತ.

  ಶಾಸಕರ ಆಪ್ತ ಕಾರ್ಯದರ್ಶಿ ಜಿ.ಸಿ.ಮಹದೇವ್ ಸಹಕಾರದಿಂದ ಮೂಲತಃ ವೆಬ್‌ಡಿಜೈನರ್ ಆಗಿರುವ ಪಿರಿಯಾಪಟ್ಟಣದ ಸ್ಥಳೀಯ ಯುವಕ  ರಾಜೇಶ್ ಎಂ.ರಾವ್  ಈ ವೆಬ್‌ಸೈಟ್ ಉತ್ತಮ ರೀತಿಯಲ್ಲಿ ಡಿಜೈನ್ ಮಾಡಿರುವುದಕ್ಕೆ ಸ್ಥಳೀಯರಿಂದ ಪ್ರಶಂಶೆ ವ್ಯಕ್ತವಾಗಿದೆ. ಹೀಗೆ ಶಾಸಕರೊಬ್ಬರು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top