ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಅಪಾರ ಪರಿಶ್ರಮ ಮತ್ತು ಪಕ್ಷ ಸಂಘಟನೆಯಿAದ ನಾನು ಶಾಸಕನಾಗಲು ಕಾರಣವಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಅವರು ಪಟ್ಟಣ ಮಂಜುನಾಥ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಎರಡು ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲುಂಡಿದ್ದ ನಾನು ಚುನಾವಣಾ ನಿವೃತ್ತಿ ಬಯಸಿದ್ದಾಗ ನನಗೆ ದೈರ್ಯ ತುಂಬಿ ಪಕ್ಷ ನಾಯಕತ್ವ ವಹಿಸುವಂತೆ ಕೋರಿ ಹಗಳಿರುಳು ನನಗೆ ಮಾರ್ಗದರ್ಶನ ಮಾಡಿದ ಕಾರ್ಯಕರ್ತರಿಗೆ ಈ ನನ್ನ ಗೆಲುವನ್ನು ಸಮರ್ಪಿಸುತ್ತಿದ್ದೇನೆ ಎಂದರು. ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವಲ್ಲಿ ಪ್ರಮಾಣೀಕ ಪ್ರಯತ್ನ ಮಾಡುವುದರ ಜೊತೆಗೆ ತಾಲ್ಲೂಕಿನಲ್ಲಿರುವ ನಿರುದ್ಯೋಗ ಸಮಸ್ಯೆ, ನೀರಾವರಿ ಸಮಸ್ಯೆ ಯನ್ನು ಬಗೆಹರಿಸುವುದ ಜೊತೆಗೆ ಎಲ್ಲಾ ಹಳ್ಳಿಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನನ್ನ ಮೊದಲ ಅದ್ಯತೆಯಾಗಿದೆ ಎಂದರು. ನಾನು ಶಾಸಕನ್ನಾಗಿದ್ದರೂ ತಾಲ್ಲೂಕಿನ ಎಲ್ಲಾ ಜನತೆಯ ಸಲಹೆ- ಸೂಚನೆಗಳನ್ನು ಪಡೆದು ನಿರ್ಧಾರ ಕೈಗೊಳ್ಳುತ್ತೇನೆ. ಕ್ಷೇತ್ರದಲ್ಲಿ ಅಶಾಂತಿಗೆ ಆಸ್ಪದವಿರುವುದಿಲ್ಲ ವಿರೋಧಿಗಳು ನನಗೆ ಕಟ್ಟಿರುವ ಹಣೆಪಟ್ಟಿ ಯಿಂದ ಮುಕ್ತಿದೊರೆಯಲು ನಿಮ್ಮೆಲ್ಲರ ಸಹಕಾರಬೇಕೆಂದು ಕೋರಿದರು.
ಒಬ್ಬ ಸಾಮಾನ್ಯ ಕುಟುಂಬ ವ್ಯಕ್ತಿ ಶಾಸಕನಾಗಿರುವುದಕ್ಕೆ ಈ ಹಿಂದೆ ಅಧಿಕಾರ ನಡೆಸಿದ್ದ ಶಾಸಕರಿಗೆ ಅಸಮಾಧಾನ ಇರಬಹುದು ಆದರೆ ಕ್ಷೇತ್ರದ ಜನತೆಯ ತೀರ್ಮಾನಕ್ಕೆ ಬದ್ದರಾಗಿ ನಡೆಯುವುದನ್ನು ಮಾಜಿ ಶಾಸಕರು ಅರಿಯಬೇಕಿದೆ. ಕಾರ್ಯಕರ್ತರು ಮಾಜಿ ಶಾಸಕ ಕೆ.ವೆಂಕಟೇಶ್ ನೀಡಿರುವ ಉದ್ರೇಕದ ಮಾತುಗಳಿಗೆ ಕಿವಿಗೊಡದೆ ಶಾಂತ ರೀತಿಯಲ್ಲಿ ವರ್ತಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಮಾತನಾಡಿ ಕಳೆದ 35ವರ್ಷಗಳಿಂದ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ಏಕ ವ್ಯಕ್ತಿಯ ಹಿಡಿತದಲ್ಲಿದ್ದ ಕ್ಷೇತವನ್ನು ಬಂಧ ಮುಕ್ತಗೊಳಿಸಿ ಸಾಮಾನ್ಯ ವ್ಯಕ್ತಿಯನ್ನು ಶಾಸಕನ್ನಾಗಿ ಮಾಡಿದ ಸಂಪೂರ್ಣ ಶ್ರೇಯ ತಾಲ್ಲೂಕಿನ ಜನತೆಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕ ಹಾಗೂ ಶಾಸಕ ಕೆ.ಮಹದೇವ್‌ರವರ ಪುತ್ರ ಪಿ.ಎಂ.ಪ್ರಸನ್ನ ಮಾತನಾಡಿ ಪಿರಿಯಾಪಟ್ಟಣ ತಾಲ್ಲೂಕನ್ನು ಲಂಚ ಮುಕ್ತ ತಾಲ್ಲೂಕುನನ್ನಾಗಿ ಪರಿವರ್ತಿಸಲು ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಕೋರಿದ ಅವರು ರಾಜಕಾರಣ ಕುಟುಂಬದ ಹಿನ್ನಲೆಯಿಲ್ಲದ ನಮ್ಮ ತಂದೆಯನ್ನು ವಿಜಯಶಾಲಿಯಾಗಿ ಮಾಡಿದ ತಾಲ್ಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top