ಸಂಘಟನೆಗಳು ಸಾಮಾಜಿಕ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳುವುದರ ಮುಖಾಂತರ ಸಮಾಜದ ಅಭಿವೃದ್ದಿಗೆ ಮುಂದಾಗಬೇಕು ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು.
ತಾಲ್ಲೂಕು ಒಕ್ಕಲಿಗ ಯುವ ವೇದಿಕೆಯ ಪರವಾಗಿ ಸ್ವಗೃಹದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಂಘಟನೆಗಳು ಸಮಾಜದಲ್ಲಿನ ಹಿಂದುಳಿದ ಜನತೆಯ ಪರವಾಗಿ ಉತ್ತಮ ಕೆಲಸಗಳನ್ನು ನಿರ್ವಹಿಸಿ ಒಳ್ಳೆಯ ಹೆಸರುಗಳಿಸಬೇಕೆಂದರು.
ಒಕ್ಕಲಿಗ ಯುವ ವೇದಿಕೆ ತಾಲ್ಲೂಕು ಅಧ್ಯಕ್ಷ ಸುಳಗೋಡು ದಿನೇಶ್ ಮಾತನಾಡಿ ಮುಂದಿನ ದಿನಗಳಲ್ಲಿ ಕೆಂಪೇಗೌಡ ಜಯಂತಿಯನ್ನು ತಾಲ್ಲೂಕಿನಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಈ ಸಂಬAಧ ಶಾಸಕರೊಂದಿಗೆ ಚರ್ಚಿಸಿದ್ದು, ಸಮಾಜದ ಅಭಿವೃದ್ದಿಗೆ ಸಹಕಾರ ನೀಡುವ ಭರವಸೆ ನೀಡಿದರು ಎಂದರು.