
ಕಂಪಲಾಪುರ : 2011 ರ ಜನಗಣತಿ ಆಧರಿಸಿ ಮೈಸೂರು ಜಿಲ್ಲೆಯ ಕಂಪಲಾಪುರ ಸೇರಿದಂತೆ ನಾಲ್ಕೈದು ಗ್ರಾಮಪಂಚಾಯಿತಿ ಗಳನ್ನು ಪಟ್ಟಣ ಪಂಚಾಯಿತಿ ಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಗ್ರಾಮದಲ್ಲಿ ಅಂದಾಜು 27.50 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಜೀವ್ ಗಾಂಧಿ ಸೇವಾಕೇಂದ್ರ ನೂತನ ಕಟ್ಟಡವನ್ನು ಶುಕ್ರವಾರ ಮದ್ಯಾಹ್ನ ಉದ್ಘಾಟಿಸಿ ಹಿಂದೆ ಗ್ರಾಮಪಂಚಾಯಿತಿ ಗಳಿಗೆ ಅನುದಾನ ಕಡಿಮೆ ಬರುತ್ತಿತ್ತು , 2014 ರಿಂದೀಚೆಗೆ ಮೋದೀಜಿಯವರ ಪರಿಶ್ರಮದಿಂದ ಹೆಚ್ಚು ಹೆಚ್ಚು ಅನುದಾನ ಕೇಂದ್ರದಿಂದ ಹರಿದು ಬರುತ್ತಿದೆ ಇದನ್ನ ಜಾಗ್ರತೆಯಿಂದ ಸದುಪಯೋಗ ಪಡಿಸಿಕೊಳ್ಳಿ ಎಂದರು. ರಸ್ತೆಗೆ 7580 ಕೋಟಿರೂ – ಮೈಸೂರು- ಮಡಿಕೇರಿ ವರೆಗಿನ 4 ಪಥದ ರಸ್ತೆ , ಬೆಂಗಳೂರು- ಮೈಸೂರು ನಡುವೆ 10 ಪಥದ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ 7580 ಕೋಟಿ ನೀಡಿದೆ , ಇದು 2022 ಕ್ಕೆ ಪೂರ್ಣ ಗೊಳ್ಳಲಿದೆ. ರೈಲ್ವೆ ಮಾರ್ಗಕ್ಕೆ 1854 ಕೋಟಿ – ಮೈಸೂರು – ಕುಶಾಲನಗರ ವರೆಗೆ 87 ಕಿ.ಮೀ ರೈಲು ಮಾರ್ಗಕ್ಕೆ 1854 ಕೋಟಿ ವೆಚ್ಚ ತಗುಲಲಿದ್ದು , ಪ್ರಕ್ರಿಯೆ ಪ್ರಾರಂಭವಾಗಿ 3 ವರ್ಷ ವಾಯಿತು , ರಾಜ್ಯ ಸರ್ಕಾರದ ಹಣಕಾಸು ಮುಗ್ಗಟ್ಟಿನಿಂದ ಕಾಮಗಾರಿ ನಿಂತಿದೆ ಕೊನೆಯ ಹಂತದ ಸರ್ವೆಕಾರ್ಯ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭವಾಗಲಿದೆ ಯಾವುದೇ ಕಾರಣಕ್ಕು ನಿಲ್ಲುವುದಿಲ್ಲ ಎಂದರು.

ಶಾಸಕ ಕೆ.ಮಹದೇವ್ ಮಾತನಾಡಿ ನಾನು ಶಾಸಕನಾಗಿ ಎರಡು ವರ್ಷಗಳ ಅವಧಿಯಲ್ಲಿ ಕಂಪಲಾಪುರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೂವರೆ ಕೋಟಿ ರೂ ಅನುದಾನ ನೀಡಿದ್ದೇನೆ , ಅವಶ್ಯ ವಿರುವ ಕೆಲಸಗಳಿಗೆ ಇನ್ನೂ ಅನುದಾನ ನೀಡುತ್ತೇನೆ , ಸಂಸದರ ಸಹಕಾರದಿಂದ ಗ್ರಾಮ ಪಂಚಾಯತಿ ಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿ ಮಾದರಿಯಾಗಿಸುವೆ ಎಂದರು. ಹಾಗೆಯೇ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿರುವ ಬಗ್ಗೆ ನನಗೆ ದೂರುಗಳು ಬಂದಿದ್ದು , ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ಒತ್ತುವರಿ ತೆರವುಗೊಳಿಸಿ ಎಂದು ಪಿಡಿಒಗೆ ಆದೇಶಿಸಿದರು.
ಗ್ರಾಮಕ್ಕೆ ಅವಶ್ಯವಿರುವ ಬಸ್ ವ್ಯವಸ್ಥೆ , ಸುಸಜ್ಜಿತ ಬಸ್ ನಿಲ್ದಾಣ, ಪಿಯು ಕಾಲೇಜು ಬಗ್ಗೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಇದೇ ಸಂದರ್ಭದಲ್ಲಿ ರಾಜ್ಯ ಒಳಚರಂಡಿ, ನೀರು ಸರಬರಾಜು ಮಂಡಳಿ ನಿರ್ದೇಶಕ ಸತೀಶ್, ತಾ.ಪಂ. ಇಒ ಶೃತಿ , ಅದ್ಯಕ್ಷೆ ನಿರೂಪ ರಾಜೇಶ್, ತಾಪಂ ಸಾ.ನ್ಯಾ.ಸಮಿತಿ ಅದ್ಯಕ್ಷ ರಂಗಸ್ವಾಮಿ, ಸರ್ಕಲ್ಇನ್ಸ್ ಪೆಕ್ಟರ್ ಬಿ.ಆರ್.ಪ್ರದೀಪ್, ಎಸ್.ಐ.ಜಗದೀಶ್, ಗ್ರಾ.ಪಂ.ಅದ್ಯಕ್ಷೆ ರಾಣಿ , ಉಪಾಧ್ಯಕ್ಷ ರಾಮಲಿಂಗ, ಪಿಡಿಒ ಪರಮೇಶ್, ಕಾರ್ಯದರ್ಶಿ ಸುಷ್ಮಾ , ಸುಮಿತ್ರಾ , ಸಹಕಾರ ಸಂಘದ ಅದ್ಯಕ್ಷ ಕುಮಾರ್, ಮಾಜಿ ಅದ್ಯಕ್ಷ ಆಸೀಫ್ ಖಾನ್ , ಕಂಟ್ರಾಕ್ಟರ್ ಮಹಮದ್ ಸುಹೇಬ್, ನರೇಗಾ ಸಹಾಯಕ ನಿರ್ದೇಶಕ ರಘುನಾಥ್, ಎಂಜಿನಿಯರ್ ರಕ್ಷಿತ್, ಪ್ರಕಾಶ್ ಗೌಡ , ಯ.ಸ್ವಾಮಿಗೌಡ ,ನಾಗೇಗೌಡ , ಉದ್ಯಮಿ ಕೆ.ಪಿ.ನಿಂಗರಾಜು , ಲಕ್ಷ್ಮಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾ.ಪಂ.ಸದಸ್ಯರು ,ಗ್ರಾಮಸ್ಥರು ಹಾಜರಿದ್ದರು.
