
ಪೂನಾಡ ಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ, ಅಂಕನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ, ಪಂಚವಳ್ಳಿ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ, ಇಟಗಳ್ಳಿ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಮತ್ತು ಚಿಕ್ಕ ಬೇಲಾಳು ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಚುನಾವಣಾ ಸಂದರ್ಭ ನಾನು ಪ್ರತಿ ಗ್ರಾಮಗಳಿಗೆ ಭೇಟಿ ನೀಡದಿದ್ದರೂ ಸ್ಥಳೀಯ ಮುಖಂಡರು ಹಲವು ಭರವಸೆ ನೀಡಿ ಮತ ಕೇಳಿದ್ದರು. ಅವರ ನಂಬಿಕೆಗೆ ಚುತಿ ಬಾರದಂತೆ ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ. ಟಿ ರಂಗಸ್ವಾಮಿ, ಪಿಡಬ್ಲ್ಯೂಡಿ ಎ ಇ ಇ ಜಯಂತ್, ಜಿಲ್ಲಾ ಪಂಚಾಯಿತಿ ಎ ಇ ಇ ಮಂಜುನಾಥ್, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಸರ್ವೇಯರ್ ಎಂಕೆ ಪ್ರಕಾಶ್, ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ, ಆರ್ ಡಬ್ಲ್ಯೂ ಎಸ್ ಎಇ ಇ ಶಿವಕುಮಾರ್, ಅಧಿಕಾರಿ ಪಾಂಡುರಂಗ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು