ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಭರತ್ ಗ್ಯಾಸ್‌ನ ಶ್ರೀ ಬಾಲಾಜಿ ಗ್ಯಾಸ್ ಗ್ರಾಮೀಣ ವಿತರಕ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಅಗತ್ಯ ವಸ್ತುಗಳ ಕೊಳ್ಳುವಿಕೆಗಾಗಿ ನಗರ ಪ್ರದೇಶಗಳಿಗೆ ಆಗಮಿಸಿ ಸಮಯ ವ್ಯರ್ಥವಾಗುತ್ತಿತ್ತು ಇಂದಿನ ವೈಜ್ಞಾನಿಕ ಯುಗದಲ್ಲಿ ಗ್ರಾಮಾಂತರ ಪ್ರದೇಶಗಳ ಮನೆ ಬಾಗಿಲಿಗೆ ದಿನನಿತ್ಯ ಬಳಕೆಯ ವಸ್ತಗಳ ಪೂರೈಕೆಯಾಗಿ ಸಮಯ ಉಳಿಯುತ್ತಿರುವುದು ಮುಂದುವರಿಯುವಿಕೆಗೆ ಸಾಕ್ಷಿಯಾಗಿದೆ. ಗ್ರಾಮಾಂತರ ಪ್ರದೇಶದ ಜನರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ಪಿ.ಚಂದ್ರಶೇಖರಯ್ಯ, ಪಿ.ಎಸ್.ಚಂದ್ರು, ಎಲ್.ಮಂಜುನಾಥ್, ಸಂತೋಷ್, ವಿನೋದ್, ಕುಮಾರ್, ಮುಖೇಶ್‌ಕುಮಾರ್, ತಿಮ್ಮೇಗೌಡ, ಬೆಕ್ಯಾರಾಜು, ವಕೀಲ ಮುರುಳಿ, ಪ್ರದೀಪ್, ನಿಂಗರಾಜು ಮತ್ತಿತರರು ಹಾಜರಿದ್ದರು.