ಪಿರಿಯಾಪಟ್ಟಣದಿಂದ ಕುಂದನಹಳ್ಳಿ ಗ್ರಾಮದವರೆಗೆ ಜಿಲ್ಲಾ ಮುಖ್ಯ ರಸ್ತೆ ಸರಪಳಿ 0.00 ಇಂದ 19.64 ಕಿಲೋಮೀಟರ್ ವರೆಗೆ ಆಯ್ದ ಜಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಕೆ ಮಹದೇವ್ ಗುದ್ದಲಿಪೂಜೆ ನೆರವೇರಿಸಿದರು. 06/04/2021

ರಸ್ತೆಯ ಒಟ್ಟು ಉದ್ದ 19.64 ಕಿಲೋಮೀಟರ್ ಗಳಾಗಿದ್ದು. ನಂದಿನಾಥಪುರ, ನಾರಳಪುರ, ಬೇಗೂರು, ಸುಳಗೋಡು, ಕೋಗಿಲವಾಡಿ, ಚೌತಿ, ಲಕ್ಷ್ಮಿಪುರ ಹಾಗೂ ಹಬಟೂರು ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ಒಟ್ಟು 5.00 ಕಿಲೋಮೀಟರ್ ಗಳು. ಡಾಂಬರ್ ರಸ್ತೆ ಕೈಗೊಳ್ಳುತ್ತಿರುವುದು 14.64 ಕಿಲೋಮೀಟರ್ ಗಳು. ಕುಂದನಹಳ್ಳಿ ಈಗಾಗಲೇ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ 1.10 ಕಿಲೋಮೀಟರ್.
ಬಾಕಿ ನಿರ್ಮಿಸಬೇಕಾಗಿರುವ ಕಾಂಕ್ರೀಟ್ ರಸ್ತೆ 3.90 ಕಿಲೋಮೀಟರ್. ಕುಂದನಹಳ್ಳಿ ಯಿಂದ ಬೇಗೂರು ರಸ್ತೆಯವರೆಗೆ ಈಗಾಗಲೇ ಕೈಗೊಳ್ಳಲಾಗಿರುವ ಡಾಂಬರು ರಸ್ತೆ 4.40 ಕಿಲೋಮೀಟರ್. ಉಳಿದ 10.24 ಕಿ. ಮೀ ಡಾಂಬರೀಕರಣ ಕಾಮಗಾರಿ ಈಗ ಅನುಷ್ಠಾನ ಮಾಡಲಾಗುವುದು.

ಪಿರಿಯಾಪಟ್ಟಣ ದಿಂದ ಮುತ್ತೂರು 9.15 ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದು. ಈಗಾಗಲೇ ಕೆಲಸ ನಿರ್ವಹಿಸಲಾಗಿದೆ ರಸ್ತೆ ಬುದ್ಧ 8.75 ಕಿಲೋಮೀಟರ್ಗಳು. ಲಿಂಗಾಪುರ ಕೆರೆ ಹತ್ತಿರ ನಿರ್ಮಾಣಕ್ಕಾಗಿ ಬಾಕಿ ಬಿಡಲಾಗಿರುವ ಉದ್ದ 0.40 ಕಿಲೋಮೀಟರ್ ಇದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು

ತಾಲ್ಲೂಕಿನ ಅಭಿವೃದ್ದಿಗಾಗಿ ಪಕ್ಷಭೇಧ ಮರೆತು ಹಾಗೂ ವಯಸ್ಸಿನ ಅಂತರವನ್ನು ಲೆಕ್ಕಿಸದೆ ಅನುದಾನಕ್ಕಾಗಿ ಮಂತ್ರಿಗಳ ಮನೆ ಮತ್ತು ಕಚೇರಿ ಬಾಗಿಲಲ್ಲಿ ಕುಳಿತು ಕಾಡಿಬೇಡಿ ಅನುದಾನ ತಂದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಈ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಮೂರು ವರ್ಷ ಕಳೆದರು ಕಾಮಗಾರಿಯನ್ನು ಪೂರ್ಣಗೊಳಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಆದ್ದರಿಂದ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಪುನರ್ ಟೆಂಡರ್ ಕರೆಯಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು. ತಾಲ್ಲೂಕಿನ ಕಾಂಡಂಚಿನ ಗ್ರಾಮಗಳು ಅಭಿವೃದ್ದಿಯಲ್ಲಿ ಹಿಂದುಳಿದಿದ್ದು ಹಂತಹಂತವಾಗಿ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಬೀದಿದೀಪ, ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಈ ಸಂದರ್ಭ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಲೋಕೋಪಯೋಗಿ ಎಇಇ ಜಯಂತ್, ಬಿಇಒ ತಿಮ್ಮೇಗೌಡ, ಚಸ್ಕಂ ಎಇಇ ಅನಿಲ್ ಕುಮಾರ್, ತಾ.ಪಂ.ಸಹಾಯಕ ಅಧಿಕಾರಿ ರಘುನಾಥ್, ವಿವಿಧ ಇಲಾಖಾ ಅಧಿಕಾರಿಗಾದ ದಿನೇಶ್, ಕುಮಾರ್, ರಮೇಶ್, ಚೌತಿ ಪಂಚಾಯಿತಿ ಪಿಡಿಒ ಮೋಹನ್ ಕುಮಾರ್, ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಬೂದಿತಿಟ್ಟು ರವಿಚಂದ್ರ ಸದಸ್ಯರಾದ ಶೇಖರ್, ಲಕ್ಷ್ಮಣ ಪಟೇಲ್, ರಾಮೇಗೌಡ, ಗೌರಮ್ಮ, ಸ್ವಾಮಿ, ಮುಖಂಡರಾದ ಎಲ್.ಆರ್.ಗಣೇಶ್, ರಾಮಕೃಷ್ಣ, ಶ್ರೀನಿವಾಸ್, ರವಿ, ಗೋವಿಂದೇಗೌಡ, ರಘು, ಶಿವಪ್ಪ, ನಟರಾಜ್, ಮಹದೇವ್, ರಾಮೇಗೌಡ, ಮಣಿಕಂಠ ಸೇರಿದಂತೆ ಮತ್ತಿತರರು ಹಾಜರಿದ್ದರು,

Leave a Comment

Your email address will not be published. Required fields are marked *

error: Content is protected !!
Scroll to Top