ಮೊದಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರನ್ನು ಶಾಸಕ ಕೆ.ಮಹದೇವ್ ಸ್ವಾಗತಿಸಿ ತಮ್ಮ ಪತ್ನಿ ಸುಭದ್ರಮ್ಮ ಅವರೊಂದಿಗೆ ಮುಖ್ಯಮಂತ್ರಿಯವರ ಪತ್ನಿ ಅನಿತಾಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾಮಹೇಶ್ರವರನ್ನು ಸ್ವಾಗತಿಸಲು ಮುಂದಾದರು. ಅಷ್ಟರಲ್ಲಿ ಜಿಲ್ಲಾಡಳಿತ ವತಿಯಿಂದ ಗೌರವ ವಂದನೆ ಸ್ವೀಕರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರಿಗಳೊಡನೆ ನಡೆದರು ಮತ್ತೊಂದೆಡೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ರವರನ್ನು ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್, ವಿಧಾನಪರಿಷತ್ ಸದಸ್ಯ ವೀಣಾಅಚ್ಚಯ್ಯ, ಕೆಪಿಸಿಸಿ ಕಾರ್ಯದರ್ಶಿ ಮಂಜುಳಾರಾಜ್, ಮಾಜಿ ಜಿ.ಪಂ.ಅಧ್ಯಕ್ಷೆ ಪುಷ್ಪಅಮರನಾಥ್ ಸ್ವಾಗತಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್, ಜಿ.ಪಂ.ಸಿಇಒ ಪಿ.ಶಿವಶಂಕರ್ ತಹಸೀಲ್ದಾರ್ ಜೆ.ಮಹೇಶ್, ತಾ.ಪಂ.ಇಒ ಡಿ.ಸಿ.ಶೃತಿ ಹಾಜರಿದ್ದರು.
ನಿರಾಕರಣೆ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಲಿಪ್ಯಾಡ್ನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಬಹುದೆಂದು ನಿರೀಕ್ಷಿಸಿ ಮೈಸೂರಿನಿಂದ ಆಗಮಿಸಿದ್ದ ಮಾದ್ಯಮದವರೊಂದಿಗೆ ಕುಮಾರಸ್ವಾಮಿ ಮಾತನಾಡದೆ ನಿರಾಶೆ ಉಂಟುಮಾಡಿದರು. ಹೆಲಿಪ್ಯಾಡ್ನಲ್ಲಿ ಸರ್ಕಾರಿ ಗೌರವ ಸ್ವೀಕರಿಸಿ ತಮ್ಮ ಕಾರಿನತ್ತ ಮುನ್ನೆಡೆಯುತ್ತಿದ್ದ ಎಚ್ಡಿಕೆರನ್ನು ಮಾದ್ಯಮ ಮಿತ್ರರು ಕೂಗಿ ಕರೆದಾಗ ಮಾದ್ಯಮ ಮಿತ್ರರ ಬಳಿ ಬಂದಾಗ ಸುದ್ದಿಗಾರರು ಮೈಸೂರಿನ ರಾಜ್ಯ ವಂಶಸ್ಥರಿಗೆ ಕೆ.ಆರ್.ಎಸ್ನಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲದ್ದ ವಿಷಯ ವದಂತಿಯಾಗಿದೆ ಎಂದು ಕೇಳಿದಾಗ ಈ ವಿಷಯದ ಸಂಬAಧ ಈಗಾಗಲೇ ಮಾತನಾಡಿದ್ದೇನೆ ಎಂದಷ್ಟೆ ಹೇಳಿ ಹೊರಟರು.