ಶಾಸಕ ಕೆ.ಮಹದೇವ್ ರವರು ಪಿರಿಯಾಪಟ್ಟಣದ RMC ಬಡಾವಣೆ ಹಾಗೂ ದೇವೇವೇಗೌಡನ ಕೊಪ್ಪಲಿನಲ್ಲಿ 26.40 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೈಪ್ ಲೈನ್ ಮತ್ತು ಬೋರ್ ವೆಲ್ ಅಳವಡಿಸುವ 29.60 ಲಕ್ಷ ವೆಚ್ಚದ ಕಾಮಗಾರಿ ಹಾಗು ರಾಮಮಂದಿರ ನಿರ್ಮಾಣಕ್ಕೆ 10.00 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.19/04/2021

ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದ್ದು ಇದನ್ನು ನಿಭಾಯಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು. ಸಾರ್ವಜನಿಕರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳಲ್ಲಿ ನೀರು ಸರಬರಾಜು ಪ್ರಮುಖವಾಗಿದ್ದು, ಮುಂದಿನ ದಿನಗಳಲ್ಲಿ ಬೇಸಿಗೆಯ ಕಾಲದ ಪರಿಣಾಮ ನೀರಿನ ಹಾಹಾಕಾರ ಉದ್ಭವವಾಗಲಿದೆ ಇದನ್ನು ನಿಭಾಯಿಸಲು ಅಧಿಕಾರಿಗಳು ಕಾರ್ಯ ಪ್ರವೃತಾರಾಗಬೇಕು. ನಾನು ಪಟ್ಟಣ ಪಂಚಾಯಿತಿಯ ಅಧ್ಯಕ್ಷನಾದ ಸಂದರ್ಭದಿಂದಲೂ ಕೂಡ ಇಂತಹ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಪಟ್ಟಣದ ಜನತೆಗೆ ಶ್ರಮಿಸಿದ್ದೇನೆ. ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕು. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಸಲ್ಲದು ಎಂದರು. ನಾನು ಶಾಸಕನಾದ ನಂತರ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಆದರೂ ಪಟ್ಟಣವಸಿಗಳು ಸಮಸ್ಯೆಗಳ ಪರಿಹಾರಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ, ಪುರಸಭಾ ವ್ಯಾಪ್ತಿಯ ಎಲ್ಲಾ 23 ವಾರ್ಡ್ ಗಳಲ್ಲಿ ಸಮನಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳ ಕೊರತೆ ಎದುರಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು, ನಾನು ಪಟ್ಟಣದಲ್ಲಿಯೇ ವಾಸಿಸುವುದರಿಂದ ಸಮಸ್ಯೆಗಳ ಬಗ್ಗೆ ತಿಳಿದಿದ್ದು ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತೇನೆ ಅದನ್ನು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕು, ಪಟ್ಟಣದ ಹಲವೆಡೆ ಈಗಾಗಲೇ ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದರೂ ಅವುಗಳ ಬಳಕೆ ಸರಿಯಾಗಿ ಆಗದ ಕಾರಣ ಸ್ಥಳೀಯರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಕುಮಾರ್, ಆರ್.ನಾಗರತ್ನ, ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್.ವಿನೋದ್, ಸದಸ್ಯರಾದ ಮಂಜುನಾಥ್, ಪಿ.ಸಿ.ಕೃಷ್ಣ, ಪ್ರಕಾಶ್‌ಸಿಂಗ್, ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ, ಮುಖಂಡರಾದ ಮುಷೀರ್‌ಖಾನ್, ಇಲಿಯಾಸ್, ಆರೋಗ್ಯ ನಿರೀಕ್ಷಕ ಆದರ್ಶ, ಪ್ರದೀಪ್‌ಕುಮಾರ್, ಪರಿಸರ ಇಂಜಿನಿಯರ್ ವೈಶಾಲಿಪ್ರಕಾಶ್, ಜೂನಿಯರ್ ಇಂಜಿನಿಯರ್‌ಗಳಾದ ಸದಾಶಿವಪ್ಪ, ವನಿತಾ, ಸಿಬ್ಬಂದಿಗಳಾದ ಜಯರಾಂ, ಕರವಸೂಲಿಗಾರ ಕುಮಾರ್, ಅಕೌಂಟೆಂಟ್ ಪ್ರದೀಪ್‌ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top