
ಪುರಸಭೆಯ ವ್ಯಾಪ್ತಿಯಲ್ಲಿ ನಿಜವಾದ ಪಲಾನುಭವಿಗಳನ್ನು ಆಯ್ಕೆಮಾಡಿ ಅವರಿಗೆ ಅಗತ್ಯಕ್ಕೆ ತಕ್ಕ ಪರಿಕರಗಳನ್ನು ನೀಡುವ ಮೂಲಕ ವಿಶೇಷಚೇತನರು ಸಮಾಜದಲ್ಲಿ ಸ್ವಾಭಿಮಾನದ ಜೀವನ ನಡೆಸಲು ನೆರವು ನೀಡಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು . ಕಾಲುಕಳೆದುಕೊಂಡು ಫಲಾನುಭವಿಯೊಬ್ಬರಿಗೆ ವೀಲ್ಚೇರ್ ನೀಡಲು ಮುಂದಾದಾಗ ಕೇವಲ ವೀಲ್ ಚೇರ್ ನೀಡಿದರೆ ಇವರ ಜೀವನ ನಡೆಸುವುದು ಕಷ್ಟವಾಗುತ್ತದೆ. ಇದರ ಬದಲಾಗಿದೆ ಸ್ಕೂಟರ್ ನೀಡಲು ಮುಂದಾಗಿ ಎಂದು ಅಧಿಕಾರಿ ಶರ್ಮಿಳಾರರಿಗೆ ಶಾಸಕರು ಸೂಚನೆ ನೀಡಿದರು.
ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ 2018-19ನೇ ಸಾಲಿನಲ್ಲಿ 1.44 ಲಕ್ಷ ಕ್ರೀಯಾಯೋಜನೆಗೆ ಅನುಮೋದನೆ ದೊರತ್ತಿದ್ದು 6 ವೀಚ್ಚೇರ್ ಖರೀದಿಸಲಾಗಿದೆ ಅಲ್ಲದೆ 2015-16 ಮತ್ತು 2016-17ನೇ ಸಾಲಿನಲ್ಲಿ 2.50 ಲಕ್ಷ ಅನುದಾನದಡಿಯಲ್ಲಿ ಒಟ್ಟು 3 ತ್ರಿಚಕ್ರವಾಹನಗಳನ್ನು ಖರೀದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಪುರಸಭಾ ಮುಖ್ಯಾಧಿಕಾರಿ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್ ವಿನೋದ್, ಸದಸ್ಯರಾದ ಪುಷ್ಪಲತಾ, ಆಶಾ, ಪಿ.ಸಿ ಕೃಷ್ಣ, ಅರ್ಷದ್, ಮಂಜುನಾಥ್, ಪ್ರಕಾಶ್ ಸಿಂಗ್, ಭಾರತಿ, ರವಿ, ಶಿವರಾಮೇಗೌಡ, ಮುಖಂಡರಾದ ಸುರೇಶ್, ದೇವಪ್ಪ, ಲಕ್ಕಣ್ಣ, ಸುರೇಶ್, ಗುತ್ತಿಗೆದಾರ ವಿಜಯ್ ಕುಮಾರ್, ರವಿ, ಸುರೇಶ್, ಪುರಸಭಾ ಆರೋಗ್ಯ ನಿರೀಕ್ಷಕ ಪ್ರದೀಪ್ ಕುಮಾರ್, ಆದರ್ಶ, ಸಿಬ್ಬಂದಿಗಳಾದ ಜಯರಾಮ್ ವನಜಾಕ್ಷಿ, ಶರ್ಮಿಳಾ, ಶರಣಪ್ಪ ಮತ್ತಿತರರು ಹಾಜರಿದ್ದರು