
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಮಹದೇವ್ ರವರು ಉದಯಕಾಲ ದಿನ ಪತ್ರಿಕೆಯ ಯುಗಾದಿ ಹಬ್ಬದ ವಿಶೇಷಾಂಕ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ದಿನ ಪತ್ರಿಕೆಗಳ ಪಾತ್ರ ಅಪಾರವಾದದ್ದು. ಸಾಮಾಜಿಕ ಕಳಕಳಿಯ ಚಿಂತನೆಗಳಿಂದ ಉದಯಕಾಲ ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದು, ಮುಂದೆಯೂ ಪತ್ರಿಕೆಯು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದರು.