
ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಆಹಾರಕ್ಕಾಗಿ ಹೊರಬಂದು ಜಾನುವಾರುಗಳಿಗೆ ಹಾಗು ರೈತರ ಜಮೀನುಗಳಿಗೆ ಹಾನಿಮಾಡುತಿತ್ತು. ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ ಮೇರೆಗೆ ಸರ್ಕಾರ 1ಎಕರೆ ರೈತ ಭೂಮಿಯಲ್ಲಿ ಬೆಳೆದ ಬೆಳೆ ಕಾಡು ಪ್ರಾಣಿಗಳು ನಾಶಮಾಡಿದರೆ ಈ ಹಿಂದೆ 50 ಸಾವಿರ ರೂ ಪರಿಹಾರ ನೀಡುತಿತ್ತು ಈಗ 1 ಲಕ್ಷ ಪರಿಹಾರ, ಪಶು ಗಳು ತುತ್ತಾದರೆ 20 ಸಾವಿರ, ಮೇಕೆ ಕುರಿ ತುತ್ತಾದರೆ 10 ಸಾವಿರ ಈಗಾಗಲೇ ಪರಿಹಾರ ಘೋಷಿಸಿ ಆದೇಶ ಹೊರಡಿಸಿದೆ ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.