ಮುತ್ತಿನಮುಳುಸೋಗೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ಮುಂಜಾನೆ ಮೈಮುಲ್ ಅಧ್ಯಕ್ಷರಾದ ಪಿ.ಎಂ.ಪ್ರಸನ್ನ ರವರು ಭೇಟಿ ನೀಡಿ ರೈತರಿಗೆ ಕೊರೋನ ವೈರಸ್ ನ ಅರಿವು ಮೂಡಿಸಿದರು. 27/04/2021

ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಲ್ಲಿ ಕೊರೋನ ವೈರಸ್ ನ ಅರಿವು ಮೂಡಿಸಬೇಕು. ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿದೆ. ಹಾಲಿನ ಖರೀದಿ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿ ಮಾಡಬೇಕು. ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗು ಪ್ರತಿ ಸಂಘದಲ್ಲೂ ಸ್ಯಾನಿಟೈಸರ್ ಒದಗಿಸಬೇಕು ಇದರ ಮೂಲಕ ಕೊರೋನ ವೈರಸ್ ತಡೆಗಟ್ಟಬಹುದಾಗಿದೆ ಎಂದು ರೈತರಲ್ಲಿ ಅರಿವು ಮೂಡಿಸಿದರು. ರೈತರು ಹಾಲು ವಿತರಣೆ ಮಾಡುವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡಿಸಿದರು. ಹಾಗು ಕೋವಿಡ್ ಪ್ರಕರಣ ಕಂಡು ಬಂದ ಗ್ರಾಮಗಳಲ್ಲಿ ಹಾಲು ಖರೀದಿಸಲು ಒಕ್ಕೂಟದಿಂದ ನೀಡಿರುವ ಮಾರ್ಗಸೂಚಿಯಂತೆ ಹಾಲು ಖರೀದಿಸಬೇಕು ಹಾಗು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಇದೆ ಸಂದರ್ಭದಲ್ಲಿ ಹಾಲಿನ ಗುಣಮಟ್ಟದ ಪರೀಕ್ಷೆ ಮಾಡಲಾಯಿತು.

ಮುತ್ತಿನಮುಳುಸೋಗೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 41 ವರ್ಷಗಳಿಂದ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಸದಾಶಿವಯ್ಯ ರವರು ನಿವೃತ್ತಿ ಹೊಂದಿರುವುದರಿಂದ ಮೈಮುಲ್ ಒಕ್ಕೂಟದಿಂದ 4 ಲಕ್ಷ ರೂ ಗಳ ಚೆಕ್ ನೀಡಲಾಯಿತು.

Leave a Comment

Your email address will not be published. Required fields are marked *

error: Content is protected !!
Scroll to Top