
ತಾಲೂಕಿನ ಕುಂದನಹಳ್ಳಿ ಸರ್ಕಲ್ ಹಾಗು ತಿಮಕಾಪುರ ಗ್ರಾಮದಲ್ಲಿ ಬಳಿ ನೂತನ ಪಡಿತರ ವಿತರಣ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ನ್ಯಾಯಬೆಲೆ ಅಂಗಡಿ ಹಾಗೂ ಪಡಿತರ ಕೇಂದ್ರಗಳ ಮುಖಾಂತರ ಪಕ್ಕದ ಊರುಗಳಿಗೆ ಹೋಗಿ ಪಡಿತರ ಪಡೆಯಲು ವೃದ್ಧರು ಮಹಿಳೆಯರು ಸೇರಿದಂತೆ ಅಂಗವಿಕಲರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರತಿನಿತ್ಯ ಸಾಕಷ್ಟು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ತಾಲ್ಲೂಕು ಆಹಾರ ಇಲಾಖೆಯ ಮುಖಾಂತರ ತಾಲ್ಲೂಕಿನಾದ್ಯಂತ ಇಲಾಖಾ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಉಪಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಸದುಪಯೋಗ ಮಾಡಿಕೊಡುವಂತೆ ಸೂಚಿಸಿದ ಹಿನ್ನೆಲೆ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಅವರು ಸಹ ನಮ್ಮ ಮನವಿಗೆ ಓಗೊಟ್ಟು ಸಾಧ್ಯವಾದಷ್ಟು ಹೆಚ್ಚು ಉಪಕೇಂದ್ರಗಳನ್ನು ತೆರೆಯುತ್ತಿರುವುದು ಸಂತಸದ ಬೆಳವಣಿಗೆ ಎಂದರು.

ಇದೆ ಸಂದರ್ಭದಲ್ಲಿ ಚೌತಿ ಗ್ರಾಮಪಂಚಾಯತಿಯ ತಿಮಕಾಪುರ ಗ್ರಾಮದಲ್ಲಿ ಸ್ಯಾನಿಟೈಸರ್ ಮಾಡುವ ಮೂಲಕ ಚಾಲನೆ ನೀಡಿದರು.
ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಅಂಗಸಂಸ್ಥೆಯಾದ ಸ್ವಯಂ ಗ್ರಾಮ ಅರಣ್ಯ ಸಂರಕ್ಷಣೆಯ ಸಂಸ್ಥೆ ವತಿಯಿಂದ ಕರೋನ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸ್ಯಾನಿಟೈಸರ್ ಮಾಡಲು ನೀಡಿದ ಜಿಪ್ ಹಾಗೂ ಸ್ಪ್ರೇ ಟ್ಯಾಂಕರ್ ಚಾಲನೆ ನೀಡಿ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರೋನ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣಕ್ಕೆ ತರಲು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಗ್ರಾಮಗಳಿಗೂ ಸ್ಯಾನಿಟೈಸರ್ ಮಾಡಲು ಸೂಚಿಸಿದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದನ್ನು ಸದುಪಯೋಗಪಡಿಸಿಕೊಂಡು ಗ್ರಾಮಗಳಲ್ಲಿ ಕೊರೋನ ನಿಯಂತ್ರಣ ಮಾಡಬೇಕೆಂದು ತಿಳಿಸಿದರು.

ಮೈಮುಲ್ ನಿರ್ದೇಶಕ ಹಾಗೂ ನಂದಿನಾಥಪುರ ಪಿಎಸಿಸಿಎಸ್ ಅಧ್ಯಕ್ಷ ಎಚ್.ಡಿ ರಾಜೇಂದ್ರ ಮಾತನಾಡಿ ಉಪಕೇಂದ್ರಗಳನ್ನು ಸ್ಥಾಪಿಸಲು ಯಾವುದೇ ತಕರಾರಿಲ್ಲ, ಆದರೆ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲಾ ಹಳ್ಳಿಗಳಲ್ಲೂ ಉಪ ಕೇಂದ್ರ ತೆರೆಯಲಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸುವ ಭರವಸೆ ನೀಡಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿ ಕಡ್ಡಾಯ ಮಾಸ್ಕ್ ಧರಿಸಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ಸ್ವಯಂ ಗ್ರಾಮ ಅರಣ್ಯ ಸಂರಕ್ಷಣೆ ಸಂಸ್ಥೆ ಅಧ್ಯಕ್ಷ ಹಾಗೂ ಚೌತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿಚಂದ್ರ, ಮೈಮುಲ್ ನಿರ್ದೇಶಕ ಹಾಗೂ ನಂದಿನಾಥಪುರ ಪಿಎಸಿಸಿಎಸ್ ಅಧ್ಯಕ್ಷ ಎಚ್.ಡಿ ರಾಜೇಂದ್ರ , ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಹುಣಸವಾಡಿ ಗ್ರಾ.ಪಂ ಅಧ್ಯಕ್ಷೆ ಸುಶೀಲಮ್ಮ ಗಣೇಶ್, ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.