ಬೆಳಿಗ್ಗೆ 07 ಗಂಟೆಯಿAದ ಆರಂಭಗೊAಡ ಮತದಾನ ಪ್ರಕ್ರಿಯೆಗೆ ಮತದಾರರಿಂದ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಿಗ್ಗೆ 9 ಗಂಟೆಯ ವರೆಗೆ ಶೇ. 11.50ರಷ್ಟು ಮತದಾನವಾಗಿದ್ದರೆ, 11 ಗಂಟೆಯ ವೇಳೆಗೆ ಶೇ. 27 ಮತದಾನವಾಗಿತ್ತು. ನಂತರ ಚುರುಕುಗೊಂಡ ಮತದಾನ ಪ್ರಕ್ರಿಯೆಯಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ. 45.44 ಮತದಾನವಾಗಿದ್ದು ಕಂಡುಬAದಿತ್ತು. 3 ಗಂಟೆಯ ವೇಳೆಗೆ ಶೇ.61.49ರಷ್ಟು ಮತದಾನವಾಗಿತ್ತು.
ಸಂಜೆ ಮತದಾನ ಮುಗಿದ ನಂತರ ಅತಿಹೆಚ್ಚು ಮತದಾನ ವಾರ್ಡ್ ನಂ. 2 ರಲ್ಲಿ ಶೇ.93.04ರಷ್ಟು ನಡೆದರೆ ಅತಿ ಕಡಿಮೆ ವಾರ್ಡ್ರಲ್ಲಿ ಶೇ.68.48 ಮತದಾನವಾಗಿದೆ.
ಎಸಿ ಭೇಟಿ : ಪುರಸಭಾ ಚುನಾವಣೆಯ ಮತಗಟ್ಟೆ ಕೇಂದ್ರಗಳಿಗೆ ಉಪವಿಭಾಗಾಧಿಕಾರಿ ನಿತೀಶ್ಕುಮಾರ್ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಭೇಟಿ ನೀಡಿ ಸಿಬ್ಬಂದಿಗಳಿAದ ಮಾಹಿತಿ ಪಡೆದರು.
ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಒಟ್ಟು 03 ಮತಗಟ್ಟೆಗಳನ್ನು ತೆರೆದಿದ್ದರಿಂದ ಮತದಾರರಿಗೆ ಗೊಂದಲವಾಗಿದ್ದು ಕಂಡುಬAದಿತ್ತು. ವಾರ್ಡ್ ನಂ. 05 ,06, 07ರ ಮತದಾರರು ಈ ಶಾಲೆಯಲ್ಲಿ ತೆರೆಯಲಾಗಿದ್ದ ತಮ್ಮ ಮತಗಟ್ಟೆ ಹುಡುಕಲು ಪ್ರಯಾಸ ಪಡುತ್ತಿದ್ದು ಕಂಡು ಬಂತು.
ಪಟ್ಟಣದ ಎಸ್ಕೆಎಸ್ಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಸ್ಥಾಪಿಸಿದ್ದ ವಾರ್ಡ್ 14 ಮತ್ತು 16ರ ಮತಗಟ್ಟೆಗಳಿಗೆ ಮತ ಚಲಾಯಿಸಲು ತೆರಳುವ ಮತದಾರರೊಂದಿಗೆ ಕೆಲವು ಪಕ್ಷದ ಕಾರ್ಯಕರ್ತರು ಮತಗಟ್ಟೆಯ ವರೆಗೆ ಹೋಗಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಅಭ್ಯರ್ಥಿಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಸ್ಥಳಕ್ಕೆ ಆಗಮಿಸಿ ಪೊಲೀಸ್ ಸಿಬ್ಬಂದಿಗಳು ಮತದಾರರು ಮಾತ್ರ ತೆರಳುವಂತೆ ಸೂಚಿಸಿ ಮತ್ತಿತರರನ್ನು ಹೊರಕ್ಕೆ ಕಳುಹಿಸಿ ಗುಂಪನ್ನು ಚದುರಿಸಿದರು.
ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡ ಪಟ್ಟಣದ ಹೊರ ವಲಯದ ಗ್ರಾಮಗಳಾದ ಅಬ್ಬೂರು, ಮೆಲ್ಲಹಳ್ಳಿ, ಹರವೆಮಲ್ಲರಾಜಪಟ್ಟಣ ಗ್ರಾಮಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ವಾರ್ಡ್ ನಂ. 02 ಮೆಲ್ಲಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ. 60.95ರಷ್ಟು ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು ವಿಶೇಷವಾಗಿತ್ತು.
ಪ್ರತಿ ಮತಗಟ್ಟೆ ಬಳಿ ಶಾಸಕ ಕೆ.ಮಹದೇವ್ ಮತ್ತು ಅವರ ಪುತ್ರ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಭೇಟಿ ನೀಡಿ ಮತದಾನದ ವಿವರ ಪಡೆದು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದು ಕಂಡು ಬಂತು.
ವಾರ್ಡ್ ನಂ. 18ರಲ್ಲಿ ಶಾಸಕ ಕೆ.ಮಹದೇವ್ ತಮ್ಮ ಪತ್ನಿ, ಸೊಸೆ ಮತ್ತು ಸಹೋದರನೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.