
ತಾಲೂಕಿನ ನವಿಲೂರು, ಬೈಲಕುಪ್ಪೆ, ಪೂನಾಡ ಹಳ್ಳಿ, ಭುವನಹಳ್ಳಿ ಹಾಗೂ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿಗಳಲ್ಲಿ ಕರೋನ ನಿಯಂತ್ರಣ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಕೊರೊನಾ ವೈರಸ್ ಮೆಟ್ಟಿನಿಂತು ಸೋಂಕು ಮುಕ್ತ ಹಳ್ಳಿಗಳಾಗುವ ನಿಟ್ಟಿನಲ್ಲಿ ಆರೋಗ್ಯ ಕಂದಾಯ ಆರಕ್ಷಕ ಗ್ರಾಪಂ ಸೇರಿದಂತೆ ಆಶಾ ಮತ್ತು ಅಂಗನವಾಡಿ ಸಿಬ್ಬಂದಿ ಸೇವೆ ಶ್ಲಾಘನೀಯ, ಸೋಂಕಿನ ಬಗ್ಗೆ ಪ್ರಾರಂಭಿಕ ಹಂತದಲ್ಲೇ ಎಚ್ಚರಿಕೆ ವಹಿಸಿದರೆ ಗುಣಮುಖರಾಗಬಹುದು ನಿರ್ಲಕ್ಷ ವಹಿಸಿದರೆ ಅಪಾಯ ಖಚಿತ, ತಾಲ್ಲೂಕಿನಲ್ಲಿ ಕೊರೊನಾ ಮುಕ್ತ ಮೊದಲ ಗ್ರಾ.ಪಂ ಗೆ ಜಿಲ್ಲಾಡಳಿತ ಇಪ್ಪತ್ತೈದು ಸಾವಿರ ನಗದು ಬಹುಮಾನ ಘೋಷಿಸಿದ್ದು ಅದರ ಜತೆಗೆ ವೈಯಕ್ತಿಕವಾಗಿಯೂ ಇಪ್ಪತ್ತೈದು ಸಾವಿರ ಹಣ ನೀಡಿ ಗೌರವಿಸುವುದಾಗಿ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಸೋಂಕು ದೃಢಪಟ್ಟ ನಂತರ ಸೊಂಕಿತರು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬೇಕು ಎಂದು ತಿಳಿಸಿದರು ಕೆಲವರು ಸಿಸಿ ಸೆಂಟರ್ ಗೆ ನಾವು ಹೋಗಲ್ಲ ಎಂದು ಹಠ ಮಾಡಿ ಆರೋಗ್ಯ ಕಾರ್ಯಕರ್ತೆಯರಿಗೆ ನಿಂದಿಸಿರುವ ಘಟನೆಗಳು ಬೆಳಕಿಗೆ ಬಂದಿವೆ ಆದ್ದರಿಂದ ಸೊಂಕಿತರು ಆರೋಗ್ಯ ಕಾರ್ಯಕರ್ತೆಯರ ಮಾತಿಗೆ ಬೆಲೆಕೊಟ್ಟು ಸಿಸಿ ಸೆಂಟರ್ ಗೆ ದಾಖಲಾಗಬೇಕು ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಪೋಲಿಸ್ ಸಿಬ್ಬಂದಿಗಳ ಸಹಕಾರದಿಂದ ದಾಖಲು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಗ್ರಾ.ಪಂ ಮೂಲಕ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಹಿಡಿದು ಮೊದಲು ಸೋಂಕಿಗೆ ತುತ್ತಾದ ಜನರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗೋಣ ಎಂದರು.
ಈ ಸಂದರ್ಭ ಗ್ರಾ.ಪಂ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.