ಶಾಸಕ ಕೆ.ಮಹದೇವ್‌ರವರು ಮಂಗಳವಾರ ರಾತ್ರಿ ಮನೆಯಲ್ಲಿ ತೀವ್ರ ಆಯಾಸಗೊಂಡು ಮಂಚದ ಮೇಲೆ ಕುಸಿದು ಬಿದ್ದು ವೈದ್ಯರ ಚಿಕಿತ್ಸೆ ನಂತರ ಚೇತರಿಸಿಕೊಂಡ ಘಟನೆ ಜರುಗಿದೆ.

ಕಳೆದೆರಡು ದಿನಗಳಿಂದ ಕುಟುಂಬ ಸಮೇತ ಧರ್ಮಸ್ಥಳ ಪ್ರವಾಸ ಕೈಗೊಂಡು ಮಂಗಳವಾರ ಸಂಜೆ ಪಟ್ಟಣದ ನಿವಾಸಕ್ಕೆ ಆಗಮಿಸಿದ ಸಂದರ್ಭ ಮನೆಯ ಬಳಿ ತಮ್ಮ ಕುಂದುಕೊರತೆಗಳ ಮನವಿ ನೀಡಲು ಬಂದಿದ್ದ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಜನಸಂದಣಿ ಹೆಚ್ಚದ್ದರಿಂದ ತಾ.ಪಂ. ಬಳಿಯ ಕಚೇರಿಗೆ ತೆರಳಿ ರಾತ್ರಿ 9.30ರ ವರೆಗೂ ಮನವಿಗಳನ್ನು ಸ್ವೀಕರಿಸಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿ ಮನೆಗೆ ಆಗಮಿಸಿದ ಸಂದರ್ಭ ಆಯಾಸದಿಂದ ಬಳಲಿದ್ದ ಶಾಸಕರು ಮಂಚದ ಮೇಲೆ ಕುಸಿದು ಬಿದ್ದರು.
ಈ ವಿದ್ಯಮಾನದಿಂದ ಕುಟುಂಬದವರು ಆತಂಕಗೊAಡು ಗಾಬರಿಯಲ್ಲಿದ್ದಾಗ ತಕ್ಷಣ ಶಾಸಕರ ಕಾರು ಚಾಲಕ ಸನಿಹದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾವಿಸಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಗಳಿಗೆ ವಿಷಯ ತಿಳಿಸಿ ಚಿಕಿತ್ಸೆ ನೀಡುವಂತೆ ಕೋರಿದಾಗ ಆ ಸಮಯ ಕರ್ತವ್ಯದಲ್ಲಿದ್ದ ಡಾ.ವೀಣಾಸಿಂಗ್ ಕಾರಣಗಳನ್ನು ನೀಡಿ ಆಗಮಿಸದ ಕಾರಣ ರಾತ್ರಿ 10.30ರ ಸಮಯ ಪಟ್ಟಣದ ಖಾಸಗಿ ಕ್ಲಿನಿಕ್‌ನ ವೈದ್ಯರೊಬ್ಬರು ಶಾಸಕರ ಮನೆಗೆ ಆಗಮಿಸಿ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿದ್ದಾರೆ.
ದಿಢೀರ್ ಭೇಟಿ : ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರುಗಳು ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ದೂರುಗಳು ಕೇಳಿ ಬಂದ ಹಿನ್ನಲೆ ಹಾಗೂ ಮಂಗಳವಾರ ರಾತ್ರಿ ನಡೆದ ಘಟನೆಯಿಂದ ಬುಧವಾರ ಬೆಳ್ಳಂಬೆಳಗ್ಗೆ ಶಾಸಕ ಕೆ.ಮಹದೇವ್ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಮಂಗಳವಾರ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ.ವೀಣಾಸಿಂಗ್‌ರಿAದ ಮಾಹಿತಿ ಪಡೆದರು. ಈ ಸಂದರ್ಭ ಹಲವರು ಶಾಸಕರಿಗೆ ಆಸ್ಪತ್ರೆಯ ಆಡಳಿತ ಅವ್ಯವಸ್ಥೆಯ ಬಗ್ಗೆ ದೂರು ನೀಡಿ ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕಿಸಿಕೊಡುವಂತೆ ದೂರಿದರು.
ತಬ್ಬಿಬ್ಬಾದ ವೈದ್ಯೆ : ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ ವಿಚಲಿತಗೊಂಡ ವೈದ್ಯೆ ಡಾ. ವೀಣಾಸಿಂಗ್ ಆ ಸಂದರ್ಭದಲ್ಲಿ ಅಪಘಾತ ಹಾಗೂ ಹೆರಿಗೆ ಸಂಬAಧಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಉತ್ತರಿಸಿದಾಗ ಸ್ಥಳದಲ್ಲಿದ್ದವರು ರೋಗಿಗಳನ್ನು ವಿಚಾರಿಸಿದಾಗ ವೈದ್ಯರು ಸುಳ್ಳು ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.
ಈ ಸಂದರ್ಭ ಶಾಸಕ ಕೆ.ಮಹದೇವ್ ಮಾತನಾಡಿ ನನಗೆ ಅನಾರೋಗ್ಯ ಸಂಬAಧ ಚಿಕಿತ್ಸೆಗೆ ದಾವಿಸಲಿಲ್ಲ ಎಂದು ಆಸ್ಪತ್ರೆಗೆ ಭೇಟಿ ನೀಡಿಲ್ಲ ತಾಲ್ಲೂಕಿನ ಜನಸಾಮಾನ್ಯರಿಂದ ದೂರುಗಳು ಬಂದ ಹಿನ್ನಲೆ ವಿಷಯದ ಸತ್ಯ ಸತ್ಯತೆ ತಿಳಿಯಲು ಭೇಟಿ ನೀಡಿದ್ದೇನೆ ಈ ಹಿಂದೆಯೂ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಸಿಬ್ಬಂದಿಗಳ ಕಾರ್ಯವೈಖರಿಯ ಅಸಮಾಧಾನಗೊಂಡು ಉತ್ತಮ ಸೇವೆ ನೀಡುವಂತೆ ಎಚ್ಚರಿಸಿದ್ದರು ಬದಲಾಗದಿರುವ ಬಗ್ಗೆ ಆಕ್ರೋಶವಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರ ಸಾವಿರಾರು ಕೋಟಿ ಹಣ ವ್ಯಯಮಾಡಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಿದ್ದರು ವೈದ್ಯರುಗಳ ನಿರ್ಲಕ್ಷದಿಂದ ಉತ್ತಮ ಸೇವೆ ದೊರೆಯದೆ ಇರುವುದು ವಿಷಾಧಕರ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡಿ ಎಂದು ತಿಳುವಳಿಕೆ ನೀಡಿದರು.
ಅನಾರೋಗ್ಯದ ನಡುವೆಯು ನಿಗದಿತ ಕಾರ್ಯಕ್ರಮದಲ್ಲಿ ಭಾಗಿ : ಬುಧವಾರದ ಶಾಸಕರ ಕಾರ್ಯಕ್ರಮ ಮುಂಚಿತವಾಗಿಯೇ ನಿಗದಿಯಾದ್ದರಿಂದ ಕಾರ್ಯಕ್ರಮ ರದ್ದು ಮಾಡಬಾರದೆಂದು ಬೆಳಿಗ್ಗೆಯಿಂದ ಸಂಜೆಯ ವರೆಗೂ ತಾಲ್ಲೂಕಿನ ಜವನಿಕುಪ್ಪೆ ಗ್ರಾಮದಲ್ಲಿ ಈಶ್ವರ ದೇವಸ್ಥಾನ ಕಟ್ಟಡ ಪೂಜೆ, ಕಂಪಲಾಪುರ ಹಾಗೂ ಕಗ್ಗುಂಡಿ ತಂಬಾಕು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ತಾಲ್ಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಜಯಂತಿ, ಈಡೀಗ ಸಮುದಾಯ ಹಾಗೂ ಹಂದಿಜೋಗಿ ಕಾಲೋನಿ ನಿವಾಸಿಗಳಿಂದ ಸನ್ಮಾನ ಸ್ವೀಕಾರ ಹಾಗೂ ಪಿಎಸಿಸಿಎಸ್‌ಗಳ ಕಾರ್ಯದರ್ಶಿಗಳ ಸಭೆಯಲ್ಲಿ ಪಾಲ್ಗೊಂಡರು.

Leave a Comment

Your email address will not be published. Required fields are marked *

error: Content is protected !!
Scroll to Top