ಪಿರಿಯಾಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಪುರಸಭೆ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ MLA K.Mahadev ಫುಡ್ಕಿಟ್ ವಿತರಣೆ ಮಾಡಿದರು. 18/06/2021

ಪಿರಿಯಾಪಟ್ಟಣ : ಗ್ರಾಮಪಂಚಾಯಿತಿಗಳಿಗೆ ಕಡುಬಡವರಿಗೆ ಆಹಾರ ಕಿಟ್ ನೀಡಿದಂತೆ ಪುರಸಭೆಯಲ್ಲಿ ನೀಡುತ್ತಿರುವುದ ರಾಜ್ಯದಲ್ಲೆ ಮೊಟ್ಟಮೊದಲಬಾರಿ ಎಂದು  ಶಾಸಕ ಕೆ.ಮಹದೇವ್ ತಿಳಿಸಿದರು.

 ಪಿರಿಯಾಪಟ್ಟಣದ ಪುರಸಭೆ ಆವರಣದಲ್ಲಿ ಕಡುಬಡವರಿಗೆ ಮತ್ತು ಅಸಂಘಟಿತ ಕಾರ್ಮಿಕರ ವರ್ಗದ ೧ ಸಾವಿರಕ್ಕು ಹೆಚ್ಚು ಮಂದಿಗೆ ಪುಡ್‌ಕಿಡ್‌ವಿತರಣೆ ಮಾಡಿ ಮಾತನಾಡಿದರು. ಕೊರೊನಾ ಮಹಾಮಾರಿ ಅನೇಕ ವಲಯಗಳನ್ನು ಸಂಕಷ್ಟ ದೂಡಿದ್ದು ಇದರಲ್ಲಿ ಸಂಘಟಿತ ಕಾರ್ಮಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಆಡಳಿತಗಳು ಇವರ ನೆರವಿಗೆ ಬರಬೇಕು. ಈನಿಟ್ಟಿನಲ್ಲಿ ಪಿರಿಯಾಪಟ್ಟಣ ಪುರಸಭೆಯ ಎಲ್ಲಾ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು ಕಡುಬಡವರನ್ನು ಗುರುತಿಸಿ ಅವರಿಗೆ ಹಣಕಾಸಿನ ನೆರವು ನೀಡುವ ಬದಲು ಆಹಾರ ಧಾನ್ಯಗಳನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ ಸಂಗತಿ ಈಗಾಲೆ ತಾಲೂಕು ಆಡಳಿತದವತಿಯಿಮದ ಆಶಾ, ಅಂಗನವಾಡಿ, ಅರ್ಚಕರು ಸೇರಿದಂತೆ ಅನೇಕರಿಗೆ ಪುಡ್‌ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

 ಪುರಸಭೆ ಅಧ್ಯಕ್ಷ ಮಂಜುನಾಥ್‌ಸಿಂಗ್ ಮಾತನಾಡಿ ಕೊರೊನಾ ಅಲೆಯಲ್ಲಿ ಜನರು ದುಂದುವೆಚ್ಚಗಳನ್ನು ಕಡಿಮೆ ಮಾಡಿ ಇರುವ ಹಣವನ್ನು ಎಚ್ಚರಿಕೆಯಿಂದ ಸದುಪಯೋಗಪಡಿಸಿಕೊಳ್ಳಬೇಕು. ಜನರನ್ನು ಮನೆಯಲ್ಲಿ ಉಳಿಸಿ ರೋಗರುಜಿನ ಹರಡುವುದನ್ನು ತಪ್ಪಿಸುವುದು ಹರಸಾಹಸವೇ ಸರಿ, ಶಾಸಕ ಕೆ.ಮಹದೇವ್ ಸೂಚನೆಯಂತೆ ಪುರಸಭೆ ಹಣದಿಂದ ಆಹಾರ ಕಿಟ್ ಖರೀದಿ ಪಟ್ಟಣದ ವ್ಯಾಪ್ತಿಯಲ್ಲಿ ಬಡವರನ್ನು ಗುರುತಿಸಿ ಇದನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

 ಪಿರಿಯಾಪಟ್ಟಣ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಪ್ರಸನ್ನ ಮಾತನಾಡಿ ಸಾವಿರ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಉಚಿತ ಆಹಾರ ಕಿಟ್ ವಿತರಣೆಯನ್ನು ಕೊರೊನಾ ಸಂಕಷ್ಟದಲ್ಲಿ ಮುಳುಗಿರುವ ಮಡಿವಾಳ, ಸವಿತಾಸಮಾಜ, ಕುಂಬಾರ ಸಮುದಾಯ, ನೇಕಾರರು, ಅಕ್ಕಸಾಲಿಗರು, ವಾಹನ ಚಾಲಕರು, ಹೀಗೆ ಇತರ ಸಮುದಾಯಗಳನ್ನು ಗುರಿತಿಸಿ ಅವರಲ್ಲಿ ಕಡುಬಡವರಿಗೆ ಶಾಸಕರ ನಿರ್ದೇಶನದಂತೆ ಆಹಾರ ಕಿಟ್ಟ್‌ಗಳನ್ನು ನೀಡುತ್ತಿದ್ದು ಇವುಗಳ ಜೊತೆಗೆ ಉದ್ಯೋಗ ಪ್ರಮಾಣಪತ್ರ ನೀಡಬೇಕು ಎಂಬ ಶಾಸಕರು ಆದೇಶಿಸಿದ್ದಾರೆ ಇದಂತೆ ಉದ್ಯೋಗ ಪ್ರಮಾಣಪತ್ರ ನೀಡಲಾಗುವುದು. ಕೊರೊನಾ ಸಂದರ್ಭದಲ್ಲಿ ಪಂಚಸೂತ್ರವನ್ನು ಅನುಸರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲೂಕು ಆರೋಗ್ಯಾಧ್ಯಾಧಿಕಾರಿ ಡಾ.ಶರತ್‌ಬಾಬು, ಇಒ ಸಿ.ಆರ್.ಕೃಷ್ಣಕುಮಾರ್, ಮಾತನಾಡಿದರು. ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್.ವಿನೋದ್, ಪುರಸಭೆ ಸದಸ್ಯರಾದ ರವಿ, ಪಿ.ಸಿ.ಕೃಷ್ಣ, ಶಿವರಾಂ, ಪ್ರಕಾಶ್‌ಸಿಂಗ್, ಪ್ರಸಾದ್, ಮಹೇಶ್, ನಿರಂಜನ್, ಮಹೇಶ್, ಆಶಾಪುಷ್ಪಲತಾ, ಆಶಾ, ರೇವತಿ, ಪ್ರಕಾಶ್,  ಮುಖಂಡರಾದ ಅಣ್ಣಯ್ಯಶೆಟ್ಟಿ,ಉಮೇಶ್, ಇಲಿಯಾಸ್, ಮುಷೀರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top