MLA K.Mahadev : ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಉತ್ಸವ ಆಚರಿಸಲಾಯಿತು. 27/06/2021

mla k mahadev

ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಬರಲು ಕೆಂಪೇಗೌಡರ ದೂರದೃಷ್ಟಿಯ ಆಲೋಚನೆ ಕಾರಣವಾಗಿವೆ,  ಕೃಷ್ಣದೇವರಾಯರ ಆಳ್ವಿಕೆ ಕಾಲದಲ್ಲಿ ಸಾಮಂತ ರಾಜರಾಗಿದ್ದ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದಂತೆ ಬೆಂಗಳೂರನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15ನೇ ಶತಮಾನದಲ್ಲಿಯೇ ರೈತಾಪಿ ವರ್ಗಕ್ಕೆ ಸಹಕಾರಿಯಾಗಲೆಂದು ಹಲವು ದಿಕ್ಕುಗಳಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ ಕೇವಲ 1 ವರ್ಗಕ್ಕೆ ಸೀಮಿತವಾಗದೇ ಬೆಂಗಳೂರಿನಲ್ಲಿ ವಿವಿಧೆಡೆಯ ವರ್ಗದ ಜನರು ವ್ಯಾಪಾರ ವಹಿವಾಟು ಮಾಡಲೆಂದು ವಿವಿಧ ಭಾಗಗಳಲ್ಲಿ ಸ್ಥಳಗಳನ್ನು ಗುರುತಿಸಿದ ಕೀರ್ತಿ ಅವರದು, ಜನಸೇವೆಗೆ ಅವಕಾಶ ಪಡೆದವರು ಜನರ ಕಷ್ಟ ಅರಿತು ಸಹಾಯ ಮಾಡಿದಾಗ ಮಾತ್ರ ಅವರ ಹುದ್ದೆಗೆ ಗೌರವ ಸಿಗುತ್ತದೆ ಈ ನಿಟ್ಟಿನಲ್ಲಿ ಕೆಂಪೇಗೌಡರ ಸಾಧನೆ ಅಪಾರವಾಗಿದೆ, ಮಹನೀಯರ ಜಯಂತಿಗಳು ಕೇವಲ 1 ವರ್ಗಕ್ಕೆ ಸೀಮಿತ ವಾಗಬಾರದು ಎಂದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ಹಲವು ಹೆಸರುಗಳಿಂದ ಖ್ಯಾತಿ ಪಡೆದಿರುವ ಬೆಂಗಳೂರಿಗೆ 15ನೇ ಶತಮಾನದಲ್ಲಿಯೇ ಕೋಟೆ ಕೆರೆ ಕಟ್ಟೆಗಳ ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡ ಅವರದು, ಕೆಂಪೇಗೌಡರ ಉತ್ತಮ ಪರಿಕಲ್ಪನೆಯಿಂದ ನವ ಬೆಂಗಳೂರು ನಿರ್ಮಾಣ ಸಾಧ್ಯವಾಯಿತು ಎಂದರು.

ಒಕ್ಕಲಿಗರ ಹಿತರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ದೇವರಾಜ್ ಮಾತನಾಡಿ ಕೆಂಪೇಗೌಡರ ಸಾಧನೆಗಳ ಬಗ್ಗೆ ರೈತಾಪಿ ವರ್ಗ ಸೇರಿದಂತೆ ಹಲವರಿಗೆ ಯಾವುದೇ ಮಾಹಿತಿ ಇರಲಿಲ್ಲ, ಹಲವು ಜನರ ಹೋರಾಟ ಹಾಗೂ ಪರಿಶ್ರಮದಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೆಂಪೇಗೌಡ ಜಯಂತಿ ಆಚರಣೆ ಘೋಷಣೆ ಮಾಡಿದ ಕಾರಣ ಎಲ್ಲಾ ವರ್ಗದ ಜನರಿಗೂ ಕೆಂಪೇಗೌಡರ ಆದರ್ಶಗಳ ಬಗ್ಗೆ ತಿಳಿಯುವಂತಾಯಿತು ಎಂದರು.

ಬಿಇಒ ವೈ.ಕೆ ತಿಮ್ಮೆಗೌಡ ಮಾತನಾಡಿ ಬೆಂಗಳೂರಿನ ಎಲ್ಲೆಗಳನ್ನು ಗುರುತಿಸಿ ಪ್ರೇಕ್ಷಣಿಯ ಸ್ಥಳಗಳನ್ನಾಗಿ ಪರಿವರ್ತಿಸಿ ತನ್ನ ಆಳ್ವಿಕೆ ಕಾಲದಲ್ಲಿ ಪ್ರಜೆಗಳನ್ನು ಸಂತೋಷದಿಂದ ನೋಡಿಕೊಂಡ ಕೀರ್ತಿ ಕೆಂಪೇಗೌಡ ಅವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಒಕ್ಕಲಿಗರ ಹಿತರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ದಿನೇಶ್, ವಿಧಿವಿಜ್ಞಾನ ವಿಭಾಗದ ಉಪ ನಿರ್ದೇಶಕರಾದ ನಂಜುಂಡಪ್ಪ, ಶಿರಸ್ತೆದಾರ್ ನಂದಕುಮಾರ್, ಉಪ ತಹಸೀಲ್ದಾರ್ ಗಳಾದ ಶಶಿಧರ್, ಶುಭ, ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಿಡಿಪಿಒ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಒಕ್ಕಲಿಗ ಸಮಾಜದ ಮುಖಂಡರಾದ ಅಶೋಕ್, ರಾಜೇಗೌಡ, ಸತೀಶ್, ಮುತ್ತುರಾಜ್ ಮತ್ತಿತರರಿದ್ದರು.      

ಇದೆ ಸಂದರ್ಭದಲ್ಲಿ ಗಂದೆಗಳ ಗ್ರಾಮದಲ್ಲಿಯೂ ಸಹ ಶಾಸಕ ಕೆ.ಮಹದೇವ್ ರವರ ಉಪಸ್ಥಿತಿಯಲ್ಲಿ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು

Leave a Comment

Your email address will not be published. Required fields are marked *

error: Content is protected !!
Scroll to Top