ತಾಲ್ಲೂಕಿನ ಕಲ್ಕೆರೆ, ದೊಡ್ಡಬೇಲಾಳು ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ದಿ ಕಾಮಗಾರಿ ಚಾಲನೆ ಹಾಗೂ ಮಾಕನಹಳ್ಳಿ, ಮಾಕನಹಳ್ಳಿ ಪಾಳ್ಯ, ಜವನೀಕುಪ್ಪೆ, ಅರೇನಹಳ್ಳಿ, ದೊರೆಕೆರೆ, ನಿಲಂಗಾಲ, ಎನ್.ಶೆಟ್ಟಹಳ್ಳಿ, ನಂದಿಪುರ ಗ್ರಾಮಗಳಲ್ಲಿ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿ ಮಾತನಾಡಿದರು. ಇತ್ತೀಚೆಗೆ ಅಭಿವೃದ್ದಿ ಕಾರ್ಯಗಳ ವಿಚಾರವಾಗಿ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಬೆಂಬಲಿಗರು ಇದು ನಮ್ಮ ಅವಧಿಯ ಅಭಿವೃದ್ದಿಗಳು ಎಂದು ಟೀಕಿಸುತ್ತಿರುವುದಕ್ಕೆ ಉತ್ತರಿಸಿದ ಅವರು ಶಾಸಕ ಸ್ಥಾನದ ಅಧಿಕಾರ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಸಾರ್ವಜನಿಕ ಕೆಲಸ ಮಾಡಲು ಬದ್ದತೆಯಿರಬೇಕು ಜನಪ್ರತಿನಿಧಿಗಳು ಸರ್ಕಾರ ಅಭಿವೃದ್ದಿ ಕೆಲಸಗಳನ್ನು ಜಾರಿಗೆ ತರುವಾಗ ನಾನು ಕೆಲಸ ಮಾಡಿಸಿದೆ ಎನ್ನದೇ ಮೂಲಭೂತ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕು ಎಂದರು.
ಶಾಸಕರು ಭೇಟಿ ನೀಡಿದ ಗ್ರಾಮಗಳ ಜನರು ಶಾಲಾ ಶಿಕ್ಷಕರುಗಳ ಸಮಸ್ಯೆ, ಸಾರಿಗೆ ಸಮಸ್ಯೆ, ರಸ್ತೆ, ಕುಡಿಯುವ ನೀರು ಸೇರಿದಂತೆ ಕೊರತೆಗಳ ಮನವಿ ನೀಡಿದಾಗ ಸ್ಥಳದಲ್ಲಿದ್ದ ಸಂಬAಧಪಟ್ಟ ಇಲಾಖಾ ಅಧಿಕಾರಿಗಳಿಗೆ ಶೀಘ್ರ ಪರಿಹರಿಸುವಂತೆ ಆದೇಶಿಸಿದರು.
ಜಿ.ಪಂ.ಸದಸ್ಯೆ ಕೌಸಲ್ಯ ಲೋಕೇಶ್ ಮಾತನಾಡಿ ಗ್ರಾಮಗಳಲ್ಲಿನ ಅಭಿವೃದ್ದಿ ಕೆಲಸಗಳ ಸಂಬAಧ ರಾಜಕೀಯ ಬೆರಸದೆ ಈ ಹಿಂದೆ ಅಪೂರ್ಣವಾಗಿರುವ ಕಾಮಗಾರಿಗಳನ್ನು ಪೂರ್ಣ ಮಾಡಲು ಎಲ್ಲರು ಸಹಕರಿಸಬೇಕು ಎಂದರು.
ಮುಖಂಡರಾದ ಅಣ್ಣಯ್ಯಶೆಟ್ಟಿ ಮಾತನಾಡಿ ಶಾಸಕ ಕೆ.ಮಹದೇವ್ರವರು ಅಧಿಕಾರಕ್ಕೆ ಬಂದ ದಿನದಿಂದ ತಾಲ್ಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಸಂಬAಧಿಸಿದ ಇಲಾಖೆಗಳಿಂದ ಅನುದಾನ ತರುತ್ತಿದ್ದು ಹಂತ ಹಂತವಾಗಿ ಬಗೆಹರಿಸಲಿದ್ದಾರೆ. ನಾವೆಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದರು.
ಮಾತಿನ ಚಕಮಕಿ : ತಾಲ್ಲೂಕಿನ ಜವನೀಕುಪ್ಪೆ ಗ್ರಾಮದಲ್ಲಿ ಕುಂದುಕೊರತೆ ಸಭೆ ನಡೆಯುತ್ತಿದ್ದಾಗ ಗ್ರಾಮದ ವಕೀಲ ಜೆ.ಎಸ್.ನಾಗರಾಜ್ ಮಾತನಾಡುವಾಗ ಮನೆಗಳ ಹಂಚಿಕೆ ತಡೆ ಹಿಡಿದಿರುವ ವಿಚಾರ ಪ್ರಸ್ತಾಪಿಸುತ್ತಿದಂತೆ ಕಾಂಗ್ರೆಸ್ನ ಜಿ.ಪಂ.ಸದಸ್ಯೆ ಕೌಸಲ್ಯರವರ ಪತಿ ಮಾಜಿ ಎಪಿಎಂಸಿ ಅಧ್ಯಕ್ಷ ಲೋಕೇಶ್ ಆಕ್ಷೇಪ ವ್ಯಕ್ತಪಡಿಸಿದಾಗ ಸ್ವಲ್ಪ ಕಾಲ ಗೊಂದಲದ ವಾತಾವರಣ ಉಂಟಾಗಿ ಮಾತಿನ ಚಕಮಕಿ ನಡೆಯಿತು. ಶಾಸಕ ಕೆ.ಮಹದೇವ್ ಅವರು ಮಾತನಾಡುವಾಗ ಹಿಂದಿನ ಶಾಸಕ ಕೆ.ವೆಂಕಟೇಶ್ರವರ ಅವಧಿಯಲ್ಲಿ ಸರ್ಕಾರ ಫಲಾನುಭವಿಗಳ ಪಟ್ಟಿ ತಡೆ ಹಿಡಿದಿದ್ದು ಇದರಲ್ಲಿ ನಮ್ಮ ಪಾತ್ರವೆನಿಲ್ಲ, ಕಾಂಗ್ರೆಸ್ ಮುಖಂಡರುಗಳು ಫಲಾನುಭವಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ ಎಂದಾಗ ವೇದಿಕೆಯಲ್ಲಿದ್ದ ಕಾಂಗ್ರೆಸ್ ಜಿ.ಪಂ.ಸದಸ್ಯೆರಾದ ಕೌಸಲ್ಯ, ಮಣಿ ಹಾಗೂ ತಾ.ಪಂ.ಸದಸ್ಯೆ ಶಿವಮ್ಮ ಹಣ ಪಡೆದಿರುವವರ ಹೆಸರನ್ನು ಬಹಿರಂಗಗೊಳಿಸಿ ಎಂದು ವಾದಕ್ಕಿಳಿದ್ದರು. ನಂತರ ಶಾಸಕ ಕೆ.ಮಹದೇವ್ ಅಧಿಕಾರಿಗಳೇ ಇದಕ್ಕೆ ಉತ್ತರಿಸಲಿ ಎಂದಾಗ ತಾ.ಪಂ.ಇಒ ಡಿ.ಸಿ.ಶೃತಿ ಮಾತನಾಡಿ ಸರ್ಕಾರದ ನಿಯಮವಳಿಯಂತೆ ನೋಡಲ್ ಅಧಿಕಾರಿಗಳ ವರದಿಯಂತೆ ಮನೆ ಹಂಚಿಕೆಯಾಗಿದ್ದು ಇದರಲ್ಲಿ ಯಾವ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದ ನಂತರ ವಾದವಿವಾದಗಳ ನಡುವೆಯೇ ಸಭೆ ಅಂತ್ಯವಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಮಣಿ, ಕೌಸಲ್ಯ, ತಾ.ಪಂ.ಸದಸ್ಯರಾದ ಎಸ್.ರಾಮು, ಶಿವಮ್ಮ, ಗ್ರಾ.ಪಂ.ಅಧ್ಯಕ್ಷ ಮಹದೇವ್, ತಾ.ಪಂ.ಇಒ ಡಿ.ಸಿ.ಶೃತಿ, ವಿವಿದ ಇಲಾಖಾ ಅದಿಕಾರಿಗಳಾದ ಇಂದಿರಾ, ರಾಮೇಗೌಡ, ಚಿಕ್ಕನಾಯಕ, ನಾಗರಾಜ್, ಪ್ರಭು, ಮುಖಂಡರಾದ ವಕೀಲ ಗೋವಿಂದೇಗೌಡ, ರಘುನಾಥ್, ಸಿ.ಎನ್.ರವಿ, ಅಣ್ಣಯ್ಯಶೆಟ್ಟಿ, ಶಿವಣ್ಣ, ಸತೀಶ್, ಜೆ.ಕೆ.ಕುಮಾರ, ಪ್ರೀತಿಅರಸ್, ನವೀದಾ ಬಾನು, ಮತ್ತಿತರರು ಹಾಜರಿದ್ದರು.