
ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಚೌಡೇನಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ ರಸ್ತೆ ಅಭಿವೃದ್ಧಿ ಕಾಮಗಾರಿ, ಬೆಳ್ತೂರು ಗ್ರಾಮದಲ್ಲಿ 25 ಲಕ್ಷ ರು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಕುಂದನಹಳ್ಳಿ ಗ್ರಾಮದಲ್ಲಿ 28 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಮಲ್ಲಿನಾಥಪುರ ಗ್ರಾಮ ಪರಿಮಿತಿಯಲ್ಲಿ 20ಲಕ್ಷರೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೊರೊನಾ ಸೋಂಕಿನ ಸಂಕಷ್ಟ ಕಾಲದಲ್ಲಿಯೂ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ, ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ, ನಮ್ಮ ಪಕ್ಷದ ಸರ್ಕಾರ ಇಲ್ಲದಿದ್ದರೂ ಅನುದಾನದ ವಿಚಾರದಲ್ಲಿ ವಿಪಕ್ಷ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಂಜೂರು ಪಡೆಯಲಾಗುತ್ತಿದೆ, ಚುನಾವಣೆಯಲ್ಲಿ ಸ್ಪರ್ಧಿಸಿ 2 ಬಾರಿ ಸೋತರೂ ಕೈಬಿಡದ ತಾಲ್ಲೂಕಿನ ಜನತೆ 3 ಬಾರಿಯ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆ ಮಾಡಿದ್ದು ಅವರ ಋಣ ನನ್ನ ಮೇಲಿದೆ, ಗ್ರಾಮಸ್ಥರು ಮತ್ತು ಪಕ್ಷದ ಕಾರ್ಯಕರ್ತರು ನಮ್ಮ ಸಂಪರ್ಕದಲ್ಲಿದ್ದು ಗ್ರಾಮಗಳಿಗೆ ಆಗಬೇಕಿರುವ ಅಭಿವೃದ್ಧಿ ಕಾರ್ಯವನ್ನು ಜಾರಿಗೊಳಿಸಲು ಸಹಕರಿಸಬೇಕು, ಚುನಾವಣೆ ಸಂದರ್ಭ ವಿರೋಧಿಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು ಎದೆಗುಂದಲಿಲ್ಲ, ನಾನು ಶಾಸಕನಾದ ಮೇಲೆ ತಾಲೂಕಿನಲ್ಲಿ ಯಾವುದೇ ಘರ್ಷಣೆಗೆ ಕಾರಣವಾಗದಂತೆ ಜನರು ಶಾಂತಿ ಸಹಬಾಳ್ವೆಯಿಂದ ಬದುಕುವಂತೆ ಸನ್ನಿವೇಶ ಸೃಷ್ಟಿಯಾಗಿದೆ, ಚುನಾವಣೆ ಸಂದರ್ಭ ಗ್ರಾಮಗಳಿಗೆ ಭೇಟಿ ನೀಡಿದಾಗ ನೀಡಿದ ಭರವಸೆಯನ್ನು ಖಂಡಿತ ಈಡೇರಿಸುತ್ತೇನೆ ಈ ಬಗ್ಗೆ ಸಂಶಯ ಬೇಡ ತಾಳ್ಮೆಯಿಂದ ಕಾಯುವಂತಾಗಬೇಕು, ಸರ್ಕಾರದಿಂದ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗೆ ಚಾಲನೆ ನೀಡಲು ಹಲವಾರು ಕಾನೂನು ಮತ್ತು ನೀತಿ ನಿಯಮ ಪಾಲನೆ ಮಾಡಬೇಕಾಗುತ್ತದೆ, ಟೆಂಡರ್ ಪ್ರಕ್ರಿಯೆ ನಡೆಸುವಲ್ಲಿ ತಡವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಪಿಡಬ್ಲ್ಯುಡಿ ಎಇಇ ಜಯಂತ್, ಜಿಪಂ ಎಇಇ ಮಂಜುನಾಥ್, ಆರ್ ಡಬ್ಲ್ಯುಎಸ್ ಎಇಇ ಶಿವಕುಮಾರ್, ಎಇ ಪಾಷಾ, ಬಿಇಓ ವೈ.ಕೆ ತಿಮ್ಮೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಚಿಟ್ಟೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷೆ ಮಮತಾ, ತಾ.ಪಂ ಮಾಜಿ ಸದಸ್ಯರಾದ ಎ.ಟಿ.ರಂಗಸ್ವಾಮಿ, ರಘುನಾಥ್, ವಿವಿಧ ಇಲಾಖೆಯ ಅಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.