ಪಿರಿಯಾಪಟ್ಟಣದಲ್ಲಿ ಬುಧವಾರ ನಡೆದ ಗ್ರಾಮೀಣ ದಸರಾಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು ಈ ಸಂರ‍್ಭ ರೇಷ್ಮೆ ಸಚಿವ ಸಾ.ರಾ ಮಹೇಶ್ , ಶಾಸಕ ಕೆ .ಮಹದೇವ್ ಹಾಜರಿದ್ದರು

ಪಿರಿಯಾಪಟ್ಟಣ : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಲಕಾವೇರಿಗೆ ತೆರಳುವಾಗ ಪಿರಿಯಾಪಟ್ಟಣದಲ್ಲಿ ನಡೆಯುತ್ತಿದ್ದ ಗ್ರಾಮೀಣ ದಸರಾಗೆ ತಾಯಿ ಚಾಮುಂಡೇಶ್ವರಿಗೆ ಪುಷ್ಪರ‍್ಚನೆ ಮಾಡುವ ಮೂಲಕ ಚಾಲನೆ ನೀಡಿದರು .
ಶಾಸಕ ಕೆ.ಮಹದೇವ್ ಮಾತನಾಡಿ ಈ ಬಾರಿ ರಾಜ್ಯಾದ್ಯಂತ ಹಾಗೂ ತಾಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿದ್ದು ರೈತರ ಸಂಕಷ್ಟಗಳು ದೂರವಾಗುವ ನಂಬಿಕೆಯಿದೆ , ತಾಯಿ ಚಾಮುಂಡೇಶ್ವರಿ ಆಶರ‍್ವಾದ ನಾಡಿನ ಜನತೆ ಮೇಲಿದ್ದು ಎಲ್ಲರ ಸಂಕಷ್ಟಗಳು ದೂರವಾಗಲಿ ಎಂದರು .
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಜನರ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಮುಂದಿನ ದಿನಗಳಲ್ಲಿಯೂ ಉತ್ತಮ ಆಡಳಿತ ನೀಡುವ ಭರವಸೆ ಇದೆ ಎಂದರು .
ಈ ಸಂರ‍್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರೇಷ್ಮೆ ಸಚಿವ ಸಾ.ರಾ ಮಹೇಶ್ ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳು ಹಾಜರಿದ್ದರು

ಜಿಲ್ಲಾಡಳಿತ ನಿರ್ದೇಶನದ ಮೆರೆಗೆ ತಾಲ್ಲೂಕು ಆಡಳಿತ ವತಿಯಿಂದ ಮೊದಲ ಬಾರಿಗೆ ಪಿರಿಯಾಪಟ್ಟಣ ತಾಲ್ಲೂಕಿನ ಹೋಬಳಿವಾರು ಆಯೋಜಿಸಿದ್ದ ಗ್ರಾಮೀಣ ದಸರಾ ಉತ್ಸವಕ್ಕೆ ಗ್ರಾಮಾಂತರ ಪ್ರದೇಶದ ಸಾರ್ವಜನಿಕರ ಅಭೂತಪೂರ್ವ ಬೆಂಬಲ ಹಾಗೂ ಸಹಕಾರ ವ್ಯಕ್ತವಾಗಿ ಯಶಸ್ವಿಯಾಗಿ ತೆರೆಕಂಡಿತು.
ತಾಲ್ಲೂಕಿನ ರಾವಂದೂರು, ಬೆಟ್ಟದಪುರ, ಹಾರನಹಳ್ಳಿ, ಕಸಬಾ ಹೋಬಳಿಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ದಸರಾ ಹಬ್ಬ ಜರುಗಿದ್ದು ಸುತ್ತಮುತ್ತಲ ಗ್ರಾಮಸ್ಥರುಗಳು ಸಂಭ್ರಮ ಸಡಗರದಿಂದ ಪಾಲ್ಗೊಂಡು ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕೃಪೆಗೆ ಪಾತ್ರರಾದರು.
ಹೋಬಳಿವಾರು ದಸರಾ ಆಚರಣೆ ಸಂಬAಧ ತಾಲ್ಲೂಕು ಆಡಳಿತ ಭವನದಲ್ಲಿ ಶಾಸಕ ಕೆ.ಮಹದೇವ್‌ರವರು ಹಾಗೂ ತಹಸೀಲ್ದಾರ್ ಸೂರಜ್‌ರವರ ನೇತೃತ್ವದಲ್ಲಿ ಎಲ್ಲಾ ಸರ್ಕಾರಿ ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಭೆ ಏರ್ಪಡಿಸಿ ಹೋಬಳಿವಾರು ದಸರಾ ಆಚರಣೆ ರೂಪುರೇಷೆ ರಚಿಸಿ ಸ್ಥಳೀಯ ನಾಡ ಕಚೇರಿ ಆಡಳಿತ ಹಾಗೂ ಮುಖಂಡರುಗಳಿಗೆ ಜವಾಬ್ದಾರಿ ವಹಿಸಲಾಗಿತ್ತು.


ಪ್ರತಿ ಹೋಬಳಿವಾರು ನಡೆದ ದಸರಾ ಮಹೋತ್ಸವದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ಮೂರ್ತಿಯನ್ನು ತೆರೆದ ಅಲಂಕೃತ ವಾಹನದಲ್ಲಿ ಸಿಂಗರಿಸಿ ಹೋಬಳಿ ಕೇಂದ್ರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಂದರ್ಭ ಮಹಿಳೆಯರ ಪೂರ್ಣಕುಂಭ ಸ್ವಾಗತ, ಹಳ್ಳಿ ಸೊಗಡಿನ ಅಲಂಕೃತ ಎತ್ತಿನ ಗಾಡಿಗಳು, ಜಾನಪದ ಕಲಾ ತಂಡಗಳು, ವೀರಗಾಸೆ, ಡೊಳ್ಳುಕುಣಿತ, ನಗಾರಿ ಹಾಗೂ ಮಂಗಳವಾದ್ಯ, ಸ್ತಬ್ಧ ಚಿತ್ರಗಳು ಭಾಗವಹಿಸಿ ಸಾರ್ವಜನಿಕರಿಗೆ ರಂಜಿಸಿದವು. ಕಾರ್ಯಕ್ರಮ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಬೋಜನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಪ್ರತಿ ಹೋಬಳಿ ಕೇಂದ್ರಗಳನ್ನು ತಳಿರು ತೋರಣ ವಿದ್ಯುತ್ ದೀಪಾಂಲಕರಗಳಿAದ ಸಿಂಗರಿಸಿ ಮದುವಣಗಿತ್ತಿಯಂತೆ ಅಲಂಕರಿಸಿದಿದ್ದುದು ವಿಶೇಷವಾಗಿತ್ತು. ಸರ್ಕಾರದಿಂದ ದೊರೆಯುವ ಸಹಾಯಧನ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು ಒಂದೊAದು ಕಾರ್ಯಕ್ರಮದ ಸಂಪೂರ್ಣ ಖರ್ಚು ವೆಚ್ಚದ ಹೊಣೆಗಾರಿಕೆ ಹೊತ್ತಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಲು ನೆರವಾಯಿತು. ಶಾಸಕ ಕೆ.ಮಹದೇವ್ ಪ್ರತಿ ಹೋಬಳಿ ಕೇಂದ್ರಗಳ ದಸರಾ ಹಬ್ಬದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಸಮಯದ ಅಭಾವದಿಂದ ಕ್ರೀಡಾಕೂಟಗಳ ಆಯೋಜನೆಯಲ್ಲಿ ಪ್ರಚಾರದ ಕೊರತೆ ಉಂಟಾಗಿ ಸ್ವಲ್ಪ ಹಿನ್ನಡೆಯಾಗಿದ್ದು ಬಿಟ್ಟರೆ ಒಟ್ಟಾರೆ ಪ್ರಥಮ ಬಾರಿಗೆ ಆಯೋಜಿಸಿದ್ದ ಗ್ರಾಮೀಣ ದಸರಾ ಜನರ ನಿರೀಕ್ಷೆಗಳನ್ನು ಹುಸಿ ಮಾಡುವಲ್ಲಿ ಸಫಲವಾಯಿತು.

Leave a Comment

Your email address will not be published. Required fields are marked *

error: Content is protected !!
Scroll to Top