63 ನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಜನತೆಗೆ ಶುಭಕೋರಿ ಮಾತನಾಡಿದ ಅವರು ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದ್ದು ನಾಡಿನ ದೇವಾಲಯಗಳು ಮತ್ತು ಪ್ರವಾಸಿ ತಾಣಕ್ಕೆ ವಿಶ್ವದಲ್ಲೇ ಉತ್ತಮ ಹೆಸರಿದೆ. ಕನ್ನಡ ನಾಡಿಗೆ ಉದ್ಯೋಗ ಅರಸಿ ಬರುವ ಅನ್ಯಭಾಷಿಗರು ಇಲ್ಲಿನ ಭಾಷೆಯನ್ನು ಕಲಿತು ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು. ಗಡಿಭಾಗಗಳು ಹಾಗೂ ವಾಣಿಜ್ಯ ನಗರಿಗಳಲ್ಲಿ ಅನ್ಯಭಾಷಿಗರು ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಿ ಕನ್ನಡ ಭಾಷೆ ಕಲಿತು ಕನ್ನಡಿಗರೊಂದಿಗೆ ಸಹೋದರತೆಯ ಜೀವನ ನಡೆಸಬೇಕು, ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಗೆ ತನ್ನದೇ ಆದ ವಿಶೇಷ ಪರಂಪರೆಯಿದ್ದು ನಾವೆಲ್ಲರೂ ಉಳಿಸಿ ಬೆಳೆಸಬೇಕಾದ ಅಗತ್ಯತೆಯಿದೆ ಎಂದರು.