ಶ್ರೀ V.Somanna, ಮಾನ್ಯ Minister of Housing ರಿಂದ, ಶ್ರೀ K.Mahadev, ಮಾನ್ಯ MLA, Periyapatna ವಿಧಾನಸಭಾ ಕ್ಷೇತ್ರ ಅದ್ಯಕ್ಷತೆಯಲ್ಲಿ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 34 ಗ್ರಾಮ ಪಂಚಾಯಿತಿಗಳಲ್ಲಿ, 2020-21 ನೇ ಸಾಲಿನ ದೇವರಾಜ್ ಅರಸು ವಸತಿ ಯೋಜನೆಯಡಿ ವಿಧವೆಯರು ಮತ್ತು ಅಂಗವಿಕಲರ ವಿಶೇಷ ವರ್ಗದಡಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ. 16/07/2021

ಪಿರಿಯಾಪಟ್ಟಣ: ಚುನಾವಣೆ ಸಂದರ್ಭ ಮಾತ್ರ ಪಕ್ಷಭೇದ ನಂತರ ಅಭಿವೃದ್ಧಿ ಪರ ಇರುವ ಎಲ್ಲರಿಗೂ ಸಹಕಾರ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪಟ್ಟಣದಲ್ಲಿ ನಡೆದ ೨೦೨೦-೨೧ನೇ ಸಾಲಿನ ದೇವರಾಜ ಅರಸು ವಸತಿ ಯೋಜನೆಯಡಿ ವಿಧವೆಯರು ಮತ್ತು ಅಂಗವಿಕಲರಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು, ಅಹ೯ತೆ ಇದ್ದರೂ ಕೆಲವರು ಸರ್ಕಾರಿ ಸವಲತ್ತಿನಿಂದ ವಂಚಿತರಾಗಿದ್ದಾರೆ, ಅಂತಹ ವಂಚಿತ ಅಹ೯ ಫಲಾನುಭವಿಗಳನ್ನು ಗುರುತಿಸುವ ಕಾಯ೯ ಸ್ಥಳೀಯ ಮಟ್ಟದಿಂದ ಆಗಬೇಕು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ಆದೇಶದಂತೆ ರಾಜ್ಯದಲ್ಲಿ ಸೂರು ಇಲ್ಲದವರಿಗೆ ೧೦ ಲಕ್ಷ ಮನೆ ನಿರ್ಮಾಣ ಗುರಿ ಹೊಂದಿದ್ದು ಈಗಾಗಲೇ ೨ ಲಕ್ಷ ಮನೆ ಕಾರ್ಯ ಮುಗಿದಿದೆ ಮಿಕ್ಕವುಗಳು ಚಾಲನೆ ಹಂತದಲ್ಲಿವೆ ಇದಕ್ಕಾಗಿ ೯ ಸಾವಿರ ಕೋಟಿ ಹಣ ವಿನಿಯೋಗಿಸಲಾಗಿದೆ, ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಯೋಜನೆಯಡಿ ನಡೆದಿದ್ದ ಎಡವಟ್ಟುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲಾಗಿದೆ, ಅರ್ಹರನ್ನು ಗುರುತಿಸುವಲ್ಲಿ ಪಿಡಿಒಗಳ ಪಾತ್ರ ಮಹತ್ವವಾಗಿದೆ ಎಂದರು, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಈ ಹಿಂದೆ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಚಾಮುಂಡಿ ಬೆಟ್ಟದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಸಹಕಾರ ನೀಡಿದ್ದರು ಅವರ ಉತ್ತಮ ಸೇವೆಯನ್ನು ತಾಲ್ಲೂಕಿನ ಜನತೆ ಸದ್ಬಳಕೆ ಮಾಡಿಕೊಳ್ಳಲಿ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಸ್ವಾತಂತ್ರ‍್ಯೋತ್ಸವದ ವಜ್ರಮಹೋತ್ಸವ ಆಚರಣೆ ಸಂದರ್ಭ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದ್ದು ರಾಜ್ಯದಲ್ಲಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ ಅವರ ಕಾರ್ಯ ಶ್ಲಾಘನೀಯ, ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಹಾಗೂ ಪ್ರಸ್ತುತ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ವಿವಿಧ ಯೋಜನೆಗಳಡಿ ರದ್ದಾಗಿದ್ದ ವಸತಿ ವಿತರಣಾ ಕಾರ್ಯಕ್ಕೆ ಮರುಜೀವ ನೀಡಿದ ಸಚಿವರಾದ ಸೋಮಣ್ಣನವರು ಸೂರಿಲ್ಲದ ಬಡವರಿಗೆ ಮನೆ ನೀಡುವ ಕಾರ್ಯಕ್ರಮಕ್ಕೆ ತಾಲ್ಲೂಕಿನಲ್ಲಿಯೇ ಪ್ರಥಮ ವಾಗಿ ಚಾಲನೆ ನೀಡಿದ್ದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದ್ದು ವಿರೋಧ ಪಕ್ಷದ ಶಾಸಕನಾಗಿದ್ದರೂ ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಸಚಿವರು ಹಾಗೂ ಸಂಸದರ ಸಹಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಈ ವೇಳೆ ತಾಲ್ಲೂಕಿನ ೩೪ ಗ್ರಾ.ಪಂ ಗಳ ೧೬೧೧ ಮಂದಿ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.

ಶಾಸಕರ ಕಾರ್ಯಕ್ಕೆ ಮೆಚ್ಚುಗೆ : ಶಾಸಕ ಕೆ.ಮಹದೇವ್ ಅವರು ಎರಡು ಬಾರಿ ಚುನಾವಣೆಯಲ್ಲಿ ಸೋತು ಮೂರನೇ ಬಾರಿಗೆ ಪ್ರಥಮವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು ಕ್ಷೇತ್ರದ ಜನತೆ ವಿಚಾರದಲ್ಲಿ ಹಿರಿಯ ರಾಜಕಾರಣಿಯಂತೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ಪಕ್ಷ ಬೇರೆ ಇರಬಹುದು ಆದರೆ ಒಳ್ಳೆ ಕಾರ್ಯ ಯಾರೇ ಮಾಡಿದರೂ ಅವರಿಗೆ ನಮ್ಮ ಸಹಕಾರ ಮತ್ತು ಅಭಿನಂದನೆ, ಎಂದು ವಸತಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ರವರು ಶಾಸಕ ಕೆ.ಮಹದೇವ್ ಅವರ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿ ಸರ್ಕಾರದ ಪರ ಅಭಿನಂದನೆ ತಿಳಿಸಿದರು, ಸಂಸದ ಪ್ರತಾಪ್ ಸಿಂಹ ಹಾಗು ಶಾಸಕ ಕೆ.ಮಹದೇವ್ ಅವರು ಜೋಡೆತ್ತಿನ ಹಾಗೆ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಈ ಸಂದರ್ಭ ಜಿ.ಪಂ ಸಿಇಒ ಯೋಗೀಶ್, ರಾಜೀವ್ ಗಾಂಧಿ ವಸತಿ ನಿಗಮದ ಜನರಲ್ ಮ್ಯಾನೇಜರ್ ಪರುಷರಾಮೇಗೌಡ, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸಹಾಯಕ ನಿರ್ದೇಶಕರಾದ ರಘುನಾಥ್, ಜಿ.ಸಿ ಮಹದೇವ್, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಗೌಡ, ತಾ.ಪಂ ಮಾಜಿ ಸದಸ್ಯರಾದ
ಎಸ್.ರಾಮು, ಈರಯ್ಯ, ಮಲ್ಲಿಕಾರ್ಜುನ್, ಮೋಹನ್ ರಾಜ್, ರಂಗಸ್ವಾಮಿ, ಜೆಡಿಎಸ್ ತಾಲ್ಲೂಕು ಮಾಜಿ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ತಾಲ್ಲೂಕಿನ ಗ್ರಾ.ಪಂ ಗಳ ಪಿಡಿಒ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top