
ಕೊರೋನ ಸಂಕಷ್ಟದ ಕಾಲದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣದ ತಾಲ್ಲೂಕಿನ ಸುಂಡವಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರಿಗೆ ಪರೀಕ್ಷಾಪೂರ್ವ ಅಭ್ಯಾಸದ ಪತ್ರಿಕೆ ವಿತರಣೆ ಮಾಡಿ ಮಾತನಾಡಿದರು, ಪರೀಕ್ಷೆಯಲ್ಲಿ ಸಾಮರ್ಥ್ಯ ದಾಯಿತ ಕಲಿಕೆಯನ್ನು ಕಲಿಯಲು ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ತರಬೇತಿಯನ್ನು ಎರಡು ದಿನಗಳು ನೀಡುವ ಸಲುವಾಗಿ ಹಾಗೂ ವಿಷಯಗಳು ಮನವರಿಕೆ ಮಾಡಿಕೊಂಡು ಜುಲೈ 20ರಂದು ನಡೆಯುವ ಪರೀಕ್ಷೆ ಎದುರಿಸಲು ಮೊದಲನೇ ಹಂತದ ಪ್ರಯತ್ನ ಇದಾಗಿದೆ ತಾಲೂಕಿನಲ್ಲಿ ಪ್ರಥಮ ಬಾರಿಗೆ ಇಂತಹ ಉತ್ತೇಜನ ನೀಡುತ್ತಿರುವ ಪ್ರಶಂಸನೀಯ ಕಾರ್ಯ ಎಂದು ಅಭಿನಂದಿಸಿದರು.
ಸುಂಡವಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 184 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕೊಠಡಿ ಶಿಥಿಲವಾದ ಕಾರಣ ಕೊರತೆ ಇದೆ ಎಂದು ಗ್ರಾಮಸ್ಥರು ಮನವಿ ಮಾಡಿದರು ಮನವಿ ಸ್ವೀಕರಿಸಿದ ಶಾಸಕ ಕೆ ಮಹದೇವ್ ರವರು ಪರಿಶೀಲನೆ ನಡೆಸಿದರಲ್ಲದೆ ಸ್ಥಳದಲ್ಲೇ ಸಿಇಓ ಯೋಗೇಶ್ ಈ ಬಗ್ಗೆ ಕ್ರಮವಹಿಸುವಂತೆ ಮನವಿ ಪತ್ರದಲ್ಲಿ ನಮೂದಿಸಿದರು.
ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಅಕ್ಷರದಾಸೋಹ ಕೊಠಡಿ ಇಲ್ಲ ವಾಗಿರುವುದರಿಂದ ಎನ್ ಆರ್ ಐ ಜಿ ಯೋಜನೆ ಅಡಿ ಶಾಲೆಗೆ ಅಗತ್ಯವಾದ ಅಕ್ಷರದಾಸೋಹ ಕೊಠಡಿ ಮತ್ತು ಶಾಲಾ ಕಾಂಪೌಂಡ್ ನಿರ್ಮಾಣ ಮಾಡುವಂತೆ ಕೃಷ್ಣಕುಮಾರ್ ರವರಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾರಮ್ಮ ಪಿಡಿಓ ಬೀರೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್ ಸ್ವಾಮಿ ಕುಮಾರಿ ಶಾಲಾ ಮುಖ್ಯಶಿಕ್ಷಕ ಹೇಚ್ ಎಂ ರವಿ, ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್ ಮುಖಂಡರಾದ ಸತ್ಯ ಮಹದೇವ್ ಪುಟ್ಟರಾಜು ದೇವೇಂದ್ರ ಶಿಕ್ಷಕರಾದ ಮಂಜೇಗೌಡ ದಿನೇಶ್ ವಿಶ್ವನಾಥ್ ದೀಪ ಸುಮಿತ್ರ ಮಮತಾ ಸುಧಾಮಣಿ ಇದ್ದರು