
ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಕೆ ಮಹದೇವ್ ಸೂಚಿಸಿದರು. ಸಮೀಪದ ಮಂಟಿ ಬಿಳಗೂಲಿ ಗ್ರಾಮದಲ್ಲಿ ನಡೆದಿರುವ ನರೇಗಾ ಯೋಜನೆ ಅಡಿಯಲ್ಲಿ ಕೆರೆಗಳ ಅಭಿವೃದ್ಧಿ ವೀಕ್ಷಿಸಿ ನಂತರ ಮಾತನಾಡಿದರು. ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿಗೊಂಡು ಕುಡಿಯುವ ನೀರಿನ ಸಮಸ್ಯೆ ನೀಡುವುದಲ್ಲದೆ ಪ್ರಾಣಿ ಪಕ್ಷಿಗಳು ಹಾಗೂ ಬೆಳೆಗಳಿಗೆ ಸಹಕಾರಿಯಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ 150 ಕೆರೆ ನೀರು ತುಂಬಿಸುವ ಯೋಜನೆ ಚಾಲನೆ ಸಿಗಲಿದ್ದು ಅಕ್ಕಪಕ್ಕದ ಕೆರೆಗಳು ಅಭಿವೃದ್ಧಿಯಾದರೆ ಅವುಗಳಿಗೂ ನೀರು ತುಂಬಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ನಡೆಸಿ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಪಿಡಬ್ಲ್ಯುಡಿ ಎಇಇ ಜಯಂತ್, ಹಾರನಹಳ್ಳಿ ಹೋಬಳಿ ಉಪ ತಹಸೀಲ್ದಾರ್ ಪ್ರದೀಪ್, ಚಿಕ್ಕನೇರಳೆ ಗ್ರಾ.ಪಂ ಪಿಡಿಒ ನಾರಾಯಣ, ಕಾರ್ಯದರ್ಶಿ ಪ್ರಕಾಶ್, ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾನಜೀರ್ ಚಿಕ್ಕನೇರಳೆ, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್ ಮುಖಂಡರಾದ ಲೋಕೇಶ್, ಅಪ್ಪಾಜಿಗೌಡ, ಜಗದೀಶ್ ಗೋವಿಂದೇಗೌಡ, ಪುಟ್ಟಸ್ವಾಮಿ, ರಘುನಾಥ್, ಮಹೇಶ್ ಇದ್ದರು.