ಡಿ.23 ಮತ್ತು 24 ರಂದು ಪಟ್ಟಣದಲ್ಲಿ ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಭರದಿಂದ ಸಾಗಿದ್ದು ಬುಧವಾರದಂದು ಶಾಸಕ ಕೆ.ಮಹದೇವ್ ಸಮ್ಮೇಳನದ ಮಾಹಿತಿ ನೀಡುವ ಸ್ವಾಗತ ಸಮಿತಿ ಕಚೇರಿ ಹಾಗೂ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದರು.

ಪಟ್ಟಣದ ತಾ.ಪಂ.ಸಭಾAಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿ ಉದ್ಘಾಟಿಸಿ, ಲಾಂಛನವನ್ನು ಬಿಡುಗಡೆಗೊಳಿಸಿದ ನಂತರ ಶಾಸಕ ಕೆ.ಮಹದೇವ್‌ರವರು ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆ ತಾಲ್ಲೂಕಿನಲ್ಲಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಕನ್ನಡ ನೆಲದಲ್ಲಿ ಬಾಳುತ್ತಿರುವ ಹಾಗೂ ಉಸಿರಾಡುತ್ತಿರುವ ನಾವುಗಳೆಲ್ಲರು ತಾಯಿ ಭುವನೇಶ್ವರಿಗೆ ನಮಿಸಿ ಪ್ರತಿ ಮನೆ ಮನೆಯಲ್ಲಿ ಆಚರಿಸುವ ಹಬ್ಬಗಳಂತೆ ಸಂಭ್ರಮದಿAದ ಆಚರಿಸಿ ಋಣ ತೀರಿಸಬೇಕಿದೆ. ಸಮ್ಮೇಳನ ಯಶಸ್ಸಿಗೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಸಹಕಾರ ನೀಡುವಂತೆ ಕೋರಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿಯಿದ್ದು ತಾಲ್ಲೂಕಿನ ಎಲ್ಲಾ ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ಆಡಳಿತವು ಸಂಪೂರ್ಣ ಸಹಕಾರ ನೀಡಿ ಸಮ್ಮೇಳನ ರಾಜ್ಯದಲ್ಲಿಯೇ ಮಾದರಿಯಾಗಲು ತಾಲ್ಲೂಕಿನ ಜನತೆ ಕಾರಣರಾಗುವಂತೆ ಕೆಲಸ ನಿರ್ವಹಿಸಬೇಕೆಂದು ಮನವಿ ಮಾಡಿದರು. ತಾಲ್ಲೂಕಿನ ಎಲ್ಲಾ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಸಮ್ಮೇಳನದ ಪ್ರಚಾರ ರಥ ಸಂಚರಿಸಲಿದ್ದು ವಿವಿಧ ಸಮಿತಿಗಳ ಎಲ್ಲಾ ಪದಾಧಿಕಾರಿಗಳು ಸಕ್ರಿಯರಾಗಬೇಕಿದೆ ಎಂದು ಕರೆ ನೀಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಗೊರಳ್ಳಿಜಗದೀಶ್ ಮಾತನಾಡಿ ಸಮ್ಮೇಳನದ ಸಿದ್ದತೆ ಅಂಗವಾಗಿ ಮಾಹಿತಿ ನೀಡಲು ಕಚೇರಿ ಆರಂಭಿಸಲಾಗಿದೆ, 20ಕ್ಕೂ ಹೆಚ್ಚು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಪದಾಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತಾಲ್ಲೂಕಿಗೆ ಹಿರಿಮೆ ತರುವಂತೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ, ತಹಸೀಲ್ದಾರ್ ಕುಂಜಿ ಮಹಮ್ಮದ್, ತಾ.ಪಂ.ಇಒ ಡಿ.ಸಿ.ಶೃತಿ, ರೋಟರಿ ಅಧ್ಯಕ್ಷ ಅಂಬಲಾರೆ ಬಸವೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇ.ಬಿ.ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಗುರುದತ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಜಯ್, ತಾಲ್ಲೂಕು ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪಿ.ಟಿ.ಲಕ್ಷಿö್ಮÃನಾರಾಯಣ್, ತಾಲ್ಲೂಕು ಕಸಾಪ ವಿವಿಧ ಪದಾಧಿಕಾರಿಗಳಾದ ಅಣ್ಣಯ್ಯ, ಮಹಮ್ಮದ್ ಶಫೀ, ಟಿ.ಎಸ್.ಹರೀಶ್, ನವೀನ್‌ಕುಮಾರ್, ಬೆಕ್ಕರೆ ಸತೀಶ್‌ಆರಾಧ್ಯ, ನಂಜುAಡಸ್ವಾಮಿ, ಆಶಾಮಹದೇವ್‌ರಾವ್, ಭವ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಡಿ. 08 ರ ಶನಿವಾರ ಪಟ್ಟಣದ ಒಳಕೋಟೆಯಲ್ಲಿರುವ ಶ್ರೀ ಕೋಟೆ ಆಂಜನೇಯಸ್ವಾಮಿ ಉತ್ಸವ ಸಮಿತಿ ವತಿಯಿಂದ ಹನುಮೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಕೆ.ಎಸ್.ಶಶಿಕುಮಾರ್ ಹೇಳಿದರು.
ಅಂದು ಮುಂಜಾನೆ 5 ರಿಂದ 10 ಗಂಟೆಯವರೆಗೆ ಪಟ್ಟಣದ ಒಳಕೋಟೆ ಬಡಾವಣೆಯಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮಹೋಮ ಪೂಜಾ ಕಾರ್ಯಕ್ರಮ ಜರುಗಲಿದೆ. ಹನುಮೋತ್ಸವ ಕಾರ್ಯಕ್ರಮ ಮೆರವಣಿಗೆ ನಡೆಯಲಿದ್ದು ಉತ್ಸವದ ಅಧ್ಯಕ್ಷತೆಯನ್ನು ರಾವಂದೂರಿನ ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ವಹಿಸಲಿದ್ದಾರೆ, ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಪುಟ್ಟಣ್ಣಕಣಗಾಲ್ ರಂಗಮAದಿರಲ್ಲಿ ಸಾರ್ವಜನಿಕರ ಸಮಾರಂಭದೊAದಿಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಹನುಮೋತ್ಸವ ಕಾರ್ಯಕ್ರಮಕ್ಕೆ ಸಂಸದರು, ಶಾಸಕರುಗಳು ಸೇರಿದಂತೆ ಜನಪ್ರತಿನಿಧಿಗಳು, ಸಂಘಸAಸ್ಥೆಗಳ ಪದಾಧಿಕಾರಿಗಳು, ಜಿಲ್ಲೆ ಹಾಗೂ ರಾಜ್ಯದ ವಿವಿದೆಡೆಯಿಂದ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದ್ದು ತಾಲ್ಲೂಕಿನ ಜನತೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿಯ ಸಂಚಾಲಕರಾದ ಡಾ.ಪ್ರಕಾಶ್‌ಬಾಬುರಾವ್ ಮನವಿ ಮಾಡಿದ್ದು ಹೆಚ್ಚಿನ ಮಾಹಿತಿಗಾಗಿ ದೂ. 9845937143,

Leave a Comment

Your email address will not be published. Required fields are marked *

error: Content is protected !!
Scroll to Top