25 ಲಕ್ಷ ವೆಚ್ಚದ ಸುಸಜ್ಜಿತ ಶವಾಗಾರ ನಿರ್ಮಾಣಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು. 10/08/2021

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ವೆಚ್ಚದ ಸುಸಜ್ಜಿತ ಶವಾಗಾರ ನಿರ್ಮಾಣಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.

ನಂತರ ಶಾಸಕರು ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿನ ಮೂಲಭೂತ ಸೌಕರ್ಯ ಕೊರತೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಆಗಿಂದಾಗೆ ದೂರುಗಳು ಕೇಳಿಬರುತ್ತಿದೆ ಹಿನ್ನೆಲೆ ಅಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಶಾಸಕರಿಗೆ ನೀಡುವ ಅನುದಾನದಲ್ಲಿ 25 ಲಕ್ಷ ಹಣವನ್ನು ನೂತನವಾಗಿ ಶವಾಗಾರ ನಿರ್ಮಿಸಲು  ಹಾಗೂ 25 ಲಕ್ಷ ಹಣವನ್ನು ಆಂಬುಲೆನ್ಸ್ ಖರೀದಿಗೆ ಬಳಸಲಾಗಿದೆ, ಈ ಹಿಂದೆ ತಾಲ್ಲೂಕಿನಲ್ಲಿ ಆಕಸ್ಮಿಕ, ಅಪಘಾತ, ಅನುಮಾನಾಸ್ಪದವಾಗಿ ಮೃತಪಟ್ಟ ಸಂದರ್ಭ ಮರಣೋತ್ತರ ಪರೀಕ್ಷೆಗೆ ಮತ್ತು ವಾರಸುದಾರರಿಲ್ಲದ ಶವವನ್ನು ಶೈತ್ಯಾಗಾರದಲ್ಲಿಡಲು ಮೈಸೂರಿನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿತ್ತು, ನೂತನ ಶವಾಗಾರ ನಿರ್ಮಾಣದಿಂದ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದರು.

ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಶಾಸಕರ ಸಹಭಾಗಿತ್ವದಲ್ಲಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಪುರಸಭಾ ಸದಸ್ಯ ಪಿ.ಸಿ ಕೃಷ್ಣ ಮಾತನಾಡಿ ಪಟ್ಟಣದಲ್ಲಿ ನೂತನವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲು ಶಾಸಕರು ಅಗತ್ಯ ಕ್ರಮ ಕೈಗೊಂಡು ತಾಲ್ಲೂಕಿನ ಜನತೆಯ ಬಹು ದಿನದ ಕನಸು ನನಸಾಗಿಸಬೇಕು ಎಂದು ಕೋರಿದರು.

ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್,  ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸದಾಶಿವ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್ ವಿನೋದ್, ಸದಸ್ಯರಾದ  ಪಿ.ಸಿ ಕೃಷ್ಣ ರವಿ, ಭಾರತಿ, ರೇವತಿ, ನಾಮನಿರ್ದೇಶಿತ ಸದಸ್ಯರಾದ ನಳಿನಿ, ಶಿವರಾಮೆಗೌಡ, ಮುಖ್ಯಾದಿಕಾರಿ ಎ.ಟಿ ಪ್ರಸನ್ನ, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.       

Leave a Comment

Your email address will not be published. Required fields are marked *

error: Content is protected !!
Scroll to Top