ಪಟ್ಟಣದ ಆಡಳಿತ ಭವನದಲ್ಲಿ ಇತ್ತೀಚಿಗೆ ತಾಲ್ಲೂಕು ಕಸಾಪ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ನಡೆದ ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಸಮಸ್ತ ಜನತೆಯ ಅಭೂತಪೂರ್ವ ಬೆಂಬಲ ಹಾಗೂ ಕಸಾಪ ಪದಾಧಿಕಾರಿಗಳ ಅವಿರಥ ಶ್ರಮದಿಂದ ಯಶಸ್ವಿಯಾಗಲು ಹಗಲಿರುಳು ಶ್ರಮಿಸಿದ ತಾಲ್ಲೂಕಿನ ಅಧಿಕಾರಿ ಮತ್ತು ಸಿಬ್ಬಂದಿಗಳು, ಪುರಸಭಾ ಸದಸ್ಯರು ಮತ್ತು ನೌಕರ ವರ್ಗ, ವಿವಿಧ ಪಕ್ಷಗಳ ಜನಪ್ರತಿನಿಧಿಗಳಿಗೆ ಅಭಿನಂದನೆ ಹೇಳಿದರು. ಸಮ್ಮೇಳನ ವಿಚಾರವಾಗಿ ಕೆಲವರು ಮಾಡುತ್ತಿರುವ ಆಪಾದನೆಗಳಿಗೆ ಕಾಲವೇ ಉತ್ತರ ನೀಡಲಿದೆ ನಾನೇನು ಪ್ರತಿಯುತ್ತರ ನೀಡುವುದಿಲ್ಲ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ನೀಡಿದ ಸಹಕಾರ ಮತ್ತು ಆರ್ಥಿಕ ನೆರವಿನಿಂದ ಯಾವುದೇ ಲೋಪದೋಷವಾಗದಂತೆ ಭಾಗವಹಿಸಿದ್ದ ಗಣ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲು ಕಾರಣವಾಯಿತು. ಮುಂದೆಯು ಸಹ ಕಸಾಪ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಕನ್ನಡ ನಾಡುನುಡಿಯ ರಕ್ಷಣೆಗೆ ಮುಂದಾಗಬೇಕು ಎಂದು ಕೋರಿದರು.
ತಹಸೀಲ್ದಾರ್ ಕುಂಜಿಅಹಮ್ಮದ್ ಮತ್ತು ಇಒ.ಡಿ.ಸಿ.ಶೃತಿ ಮಾತನಾಡಿದರು.
ಇದೇ ಸಂದರ್ಭ ಪಟ್ಟಣವನ್ನು ಕನ್ನಡ ಭಾವುಟ, ಫ್ಲೇಕ್ಸ್, ಲೈಟಿಂಗ್ ವ್ಯವಸ್ಥೆಯೊಂದಿಗೆ ನವವಧುವಿನಂತೆ ಶೃಂಗಾರ ಮತ್ತು ಅಲಂಕಾರಗೊಳಿಸಿದ್ದ ಪುರಸಭೆ ಮತ್ತು ತಾಲೂಕಿನ ವಿವಿಧ ಗ್ರಾ.ಪಂಗಳ ಪೌರಕಾರ್ಮಿಕರು, ತಾಲ್ಲೂಕಿನ ೩೪ ಇಲಾಖೆಗಳ ಅಧಿಕಾರಿಗಳು, ವಿವಿಧ ಸಮಿತಿ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.