ಬೆಳಿಗ್ಗೆ ಶಾಸಕರು ಪ್ರತಿಭಟನ ಸ್ಥಳಕ್ಕೆ ಭೇಟಿ ನಿಡಿ ಹುಣಸೂರು ಹಾಗೂ ಹೆಚ್.ಡಿ.ಕೋಟೆ ಶಾಸಕರ ಸಮ್ಮುಖದಲ್ಲಿ ಶೀಘ್ರವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ವಿಸ್ತುçತ ವರಧಿಯನ್ನು ಫೆಬ್ರವರಿಯಲ್ಲಿ ಆರಂಭವಾಗುವÀ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸಮಯವಕಾಶವನ್ನು ತೆಗೆದುಕೊಂಡು ಸಂಜೆಯ ವೇಳಗೆ ಒಂದು ನಿರ್ಣಯಕ್ಕೆ ಬರುವುದಾಗಿ ತಿಳಿಸಿ ಎಲ್ಲರು ಚರ್ಚಿಸಿ ಹಲವಾರು ವರ್ಷಗಳಿಂದ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರೂ ಯಾವುದೇ ಸರ್ಕಾರಗಳು ಶಾಶ್ವತ ಪರಿಹಾರವನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಶಾಸಕ ಕೆ.ಮಹದೇವ್ ರವರ ಭರವಸೆಯಂತೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸಂಜೆ ವೇಳೆಗೆ ಕೈ ಬಿಟ್ಟರು.
ಈ ಸಂದರ್ಭದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯರಾದ ಎಸ್.ರಾಮು, ಶೋಭ, ಸಮಾಜಕಲ್ಯಾಣಾಧಿಕಾರಿ ರಾಮೇಗೌಡ, ಹಾಡಿ ಮುಖಂಡರಾದ ಶೈಲೆಂದ್ರಕುಮಾರ್, ಜಾನಕಮ್ಮ, ದಾಸಪ್ಪ ಸೇರಿದಂತೆ ವಿವಿದ ಹಾಡಿಗಳ ನಿವಾಸಿಗಳು ಹಾಜರಿದ್ದರು.